`ಸಖಿ ಒನ್ ಸ್ಟಾಪ್ ಸೆಂಟರ್’ ಕುರಿತು ಮಾಹಿತಿ
ಮೈಸೂರು

`ಸಖಿ ಒನ್ ಸ್ಟಾಪ್ ಸೆಂಟರ್’ ಕುರಿತು ಮಾಹಿತಿ

December 1, 2019

ಮೈಸೂರು,ನ.30(ಆರ್‍ಕೆಬಿ)- ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯ ರಿಗೆ ನೆರವಾಗುವ ದೃಷ್ಟಿಯಿಂದ ಮೈಸೂ ರಿನಲ್ಲಿ ತೆರೆಯಲಾಗಿರುವ `ಸಖಿ ಒನ್ ಸ್ಟಾಪ್ ಸೆಂಟರ್’ ಕುರಿತು ಮೈಸೂರಿನ ವಿಜಯನಗರದ ವಿದ್ಯಾವರ್ಧಕ ಇಂಜಿನಿ ಯರಿಂಗ್ ಕಾಲೇಜಿನಲ್ಲಿ ಕಾನೂನು ಅರಿವು -ನೆರವು ಕಾರ್ಯಕ್ರಮ ನಡೆಯಿತು.

ಮೈಸೂರು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವ ಮಾನೆ ಉದ್ಘಾಟನೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಕಾನೂನು ಅರಿವು-ನೆರವು ಅಡಿಯಲ್ಲಿ 1 ಲಕ್ಷಕ್ಕಿಂತÀ ಕಡಿಮೆ ಆದಾಯ ಇರುವ ಎಲ್ಲಾ ವರ್ಗದ ಜನರಿಗೂ ಉಚಿತ ಕಾನೂನು ನೆರವು ನೀಡಲಾಗುತ್ತದೆ. ಉಚಿತ ಕಾನೂನು ನೆರವು ಬಯಸುವವರು ಆದಾಯದ ಘೋಷಣಾ ಪತ್ರ ನೀಡಿದರೆ ಸಾಕು ಎಂದರು.

ಸಖಿ ಒನ್ ಸ್ಟಾಪ್ ಸೆಂಟರ್ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಮೈಸೂರು ಶಿಶು ಅಭಿವೃದ್ದಿ ಯೋಜನೆಯ ಸಂರಕ್ಷ ಣಾಧಿಕಾರಿ ಎಸ್.ರಶ್ಮಿ, ದೌರ್ಜನ್ಯಕ್ಕೆ ಒಳ ಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಪೊಲೀಸ್ ನೆರವು, ಆಪ್ತ ಸಮಾಲೋಚನೆ ಇನ್ನಿತರ ನೆರವು ನೀಡುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಕಾರ್ಯಕ್ರಮ ಜಾರಿ ಮಾಡಿದೆ. ಮೈಸೂರಿನ ಚೆಲುವಾಂಬ ಆಸ್ಪ ತ್ರೆಯ 2ನೇ ಮಹಡಿಯಲ್ಲಿ ತೆರೆಯಲಾಗಿ ರುವ ಸಖಿ ಒನ್ ಸ್ಟಾಪ್ ಸೆಂಟರ್‍ನಲ್ಲಿ ದೌರ್ಜನ್ಯಕ್ಕೊಳಗಾದವರು, ನೊಂದ ಮಹಿಳೆ ಯರು ಇಲ್ಲಿ ನೆರವು ಪಡೆಯಬಹುದಾ ಗಿದೆ. ದೂರು ಪಡೆದ ಮೊದಲ ಹಂತದಲ್ಲಿ ನೊಂದ ಮಹಿಳೆಯರಿಗೆ ಆಪ್ತ ಸಮಾಲೋ ಚನೆ ಮೂಲಕ ಧೈರ್ಯ ತುಂಬಿ, ಖಿನ್ನತೆ ಯಿಂದ ದೂರ ಮಾಡಲಾಗುತ್ತದೆ. ನಂತರ ಉಚಿತ ಕಾನೂನು, ಅರಿವು, ನೆರವು ನೀಡ ಲಾಗುತ್ತದೆ. ದೈನಂದಿನ ಅವಶ್ಯಕತೆಗಳ ಸಹಿತ ಅವರಿಗೆ ತಾತ್ಕಾಲಿಕ ಆಶ್ರಯ ನೀಡಲಾ ಗುತ್ತದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಈ ಘಟಕವನ್ನು ಮಹಿಳೆ ಯರು, ಮಕ್ಕಳು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾಲೇಜು ಪ್ರಾಂಶುಪಾಲ ಬಿ.ಸದಾಶಿವೇ ಗೌಡ ಮಾತನಾಡಿ, ಇಂಥ ಕಾರ್ಯಕ್ರಮ ಗಳು ಕಾಲೇಜು ಅಧ್ಯಾಪಕರಿಗೂ ಏರ್ಪ ಡಿಸಿದರೆ ಪ್ರತಿನಿತ್ಯ ತರಗತಿಗಳಲ್ಲಿ 10 ನಿಮಿಷ ವಿದ್ಯಾರ್ಥಿನಿಯರಿಗೆ ತಿಳುವಳಿಕೆ ಮೂಡಿ ಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿ ದರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇ ಶಕಿ ಕೆ.ಪದ್ಮಾ ಮಾತನಾಡಿ, ಮುಂದಿನ ದಿನ ಗಳಲ್ಲಿ ಕಾಲೇಜು ಅಧ್ಯಾಪಕರಿಗೂ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗು ವುದು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಗೀತಾಲಕ್ಷ್ಮಿ, ಸಾಮಾಜಿಕ ಕಾರ್ಯಕರ್ತೆ ರಾಧಾ ಉಪಸ್ಥಿತರಿದ್ದರು.

Translate »