ವಿಶೇಷಚೇತನರಿಗಾಗಿ ಮೈಸೂರಲ್ಲಿ ಪಾರಂಪರಿಕ ನಡಿಗೆ
ಮೈಸೂರು

ವಿಶೇಷಚೇತನರಿಗಾಗಿ ಮೈಸೂರಲ್ಲಿ ಪಾರಂಪರಿಕ ನಡಿಗೆ

August 8, 2019

ಮೈಸೂರು,ಆ.7(ಆರ್‍ಕೆ)-ಮೈಸೂ ರಲ್ಲಿ ಇಂದು ವಿಕಲಚೇತನ ವಿದ್ಯಾರ್ಥಿ ಗಳಿಗಾಗಿ ಪಾರಂಪರಿಕ ನಡಿಗೆಯನ್ನು ಆಯೋಜಿಸಲಾಗಿತ್ತು.

ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಮಹಾಜನ ಪ್ರಥಮ ದರ್ಜೆ ಕಾಲೇಜಿನ ರೋಟರ್ಯಾಕ್ಟ್ ಕ್ಲಬ್ ಸಹಯೋಗದೊಂದಿಗೆ ಇದೇ ಪ್ರಥಮ ಬಾರಿ ಕಿವುಡ ಮತ್ತು ಮೂಗ ಶಾಲೆಯ ವಿದ್ಯಾರ್ಥಿಗಳಿಗೆ ಪಾರಂಪರಿಕ ಕಟ್ಟಡಗಳ ಹಿನ್ನೆಲೆ ತಿಳಿಸಲು ಪಾರಂಪರಿಕ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮೈಸೂರಿನ ಪುರಭವನದ ಬಳಿ ಆರಂಭವಾದ ನಡಿಗೆಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬೆಳಿಗ್ಗೆ 7.45 ಗಂಟೆಗೆ ಟೌನ್ ಹಾಲ್‍ನಿಂದ ಹೊರಟು ಸಿಲ್ವರ್ ಜುಬಿಲಿ ಕ್ಲಾಕ್ ಟವರ್, ಫ್ರೀಮೇಸನ್ಸ್ ಕ್ಲಬ್, ಚಾಮ ರಾಜ ಒಡೆಯರ್ ವೃತ್ತ, ಅರಮನೆ ಉತ್ತರ ದ್ವಾರ, ಕೆ.ಆರ್.ಸರ್ಕಲ್, ಚಿಕ್ಕಗಡಿಯಾರ, ದೇವರಾಜ ಮಾರುಕಟ್ಟೆ, ಕೆ.ಆರ್. ಆಸ್ಪತ್ರೆ, ಕಾವೇರಿ ಎಂಪೋರಿಯಂ, ಸರ್ಕಾರಿ ಆಯು ರ್ವೇದ ಕಾಲೇಜು ಹಾಗೂ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆಯಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು.

ಆ ವೇಳೆ ಇತಿಹಾಸ ಮತ್ತು ಪುರಾತತ್ವ ತಜ್ಞರುಗಳಾದ ಪ್ರೊ.ಎನ್‍ಎಸ್.ರಂಗರಾಜು, ಈಚನೂರು ಕುಮಾರ್, ಪಾರಂಪರಿಕ ಕಟ್ಟಡಗಳ ಇತಿಹಾಸ, ಹಿನ್ನೆಲೆಗಳ ಬಗ್ಗೆ ಸರಳ ನುಡಿಗಳಲ್ಲಿ ವಿವರಿಸಿದ್ದನ್ನು ವಿಕಲ ಚೇತನರ ಶಾಲೆಯ ಶಿಕ್ಷಕರು ಕೈ, ಬಾಯಿ ಸನ್ನೆ ಮೂಲಕ ಕಿವುಡ ಮತ್ತು ಮೂಗ ವಿದ್ಯಾರ್ಥಿ ಗಳಿಗೆ ಅರ್ಥೈಸಿದರು. ಪ್ರತೀ ಪಾರಂಪರಿಕ ಕಟ್ಟಡಗಳ ಬಳಿ ಹೋದಾಗ ಅದರ ಹಿನ್ನೆಲೆ, ಇತಿ ಹಾಸ ತಿಳಿದು ವಿಶೇಷ ಚೇತನರು ಎರಡೂ ಕೈಗಳನ್ನು ಮೇಲೆತ್ತುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಪರಂಪರೆ ಇಲಾಖೆ ಉಪ ನಿರ್ದೇಶಕ ನಿರ್ಮಲಾ ಮಠಪತಿ ಹಾಗೂ ಇತರರು ಪಾರಂಪರಿಕ ನಡಿಗೆಯಲ್ಲಿ ಪಾಲ್ಗೊಂಡಿದ್ದರು.

Translate »