ಗಣಪತಿ ವಿಗ್ರಹಗಳ ವಿಸರ್ಜನೆಗೆ ಸಂಚಾರಿ ವಾಹನ
ಮೈಸೂರು

ಗಣಪತಿ ವಿಗ್ರಹಗಳ ವಿಸರ್ಜನೆಗೆ ಸಂಚಾರಿ ವಾಹನ

August 31, 2019

ಮೈಸೂರು,ಆ.30-ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿ ಯಿಂದ ಸೆ.2ರಂದು ಗಣೇಶ ವಿಗ್ರಹಗಳ ವಿಸರ್ಜನೆಗಾಗಿ 3 ಪರಿಸರ ಸ್ನೇಹಿ ಸಂಚಾರಿ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಮೊದಲನೇ ವಾಹನವು ಸಂಜೆ 4ರಿಂದ 5.15ರವರಗೆ ಮೇಟಗಳ್ಳಿ, ಆರಕ್ಷಕ ಠಾಣೆ ಹತ್ತಿರ, ಸಂಜೆ 5.30 ರಿಂದ 6.45 ವಿಜಯನಗರ 2ನೇ ಹಂತದ ಕೆ.ಡಿ. ಸರ್ಕಲ್ ಹತ್ತಿರ, ಸಂಜೆ 7ರಿಂದ 8.15 ಒಂಟಿಕೊಪ್ಪಲ್ ಚಂದ್ರಮೌಳೇಶ್ವರ ದೇª Àಸ್ಥಾನ/ ಮಾತೃಮಂಡಳಿ ಹತ್ತಿರ ರಾತ್ರಿ 8.30ರಿಂದ 10.30 ಕುಕ್ಕರಹಳ್ಳಿಕೆರೆ ಮುಖ್ಯದ್ವಾರ ದಲ್ಲಿ ನಿಲುಗಡೆಯಾಗಲಿದೆ ಈ ವಾಹನಕ್ಕೆ ಸಂಬಂಧಿಸಿದಂತೆ ಎಂ ಸಿದ್ದಯ್ಯ-988016 4745 ಅವರನ್ನು ಸಂಪರ್ಕಿಸಬಹುದು.

ಎರಡನೇ ವಾಹನವು ಸಂಜೆ 4ರಿಂದ 5.15ರವರಗೆ ಯಾದವಗಿರಿ, ವಿಕ್ರಮ್ ಆಸ್ಪತ್ರೆ ಹತ್ತಿರ, ಸಂಜೆ 5.30ರಿಂದ 6.45 ಶಾಂತಲಾ ಚಿತ್ರಮಂದಿರ ಹತ್ತಿರ, ರಾತ್ರಿ 7ರಿಂದ 8.15 ಚಾಮುಂಡಿಪುರಂ ಸರ್ಕಲ್, ಸಂಜೆ 8.30ರಿಂದ 10.30 ಕಾರಂಜಿ ಕೆರೆ ಮುಖ್ಯದ್ವಾರದಲ್ಲಿ ನಿಲುಗಡೆಯಾಗಲಿದೆ. ಮಾಹಿತಿಗೆ ಶಿವಣ್ಣ-9900479002 ಅವ ರನ್ನು ಸಂಪರ್ಕಿಸಿ. 3ನೇ ವಾಹನವು ಸಂಜೆ 4ರಿಂದ 5.15ರವರಗೆ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪ, ಸಂಜೆ 5.30ರಿಂದ 6.45 ಜಯ ನಗರ ರೈಲ್ವೇ ಗೇಟ್ ಹತ್ತಿರ, ರಾತ್ರಿ 7ರಿಂದ 8.15 ಜೆ.ಪಿನಗರ ಗೊಬ್ಬಳಿಮರದ ಬಸ್ ನಿಲ್ದಾಣ, ರಾತ್ರಿ 8.30ರಿಂದ 10.30 ಶ್ರೀರಾಂ ಪುರ ಮಾರ್ಗವಾಗಿ ಲಿಂಗಾಂಬುಧಿ ಕೆರೆ ಮುಖ ದ್ವಾರ ನಿಲುಗಡೆಯಾಗಲಿದೆ. ಮಾಹಿ ತಿಗೆ ಹೆಚ್.ಸಿ.ಲಕ್ಷ್ಮಣ್-9845307419 ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ ಕೆ.ಎಲ್. ಮಂಜುನಾಥ್ -9844972002, ಅಶ್ವಿನಿ ಬಿ.ಕೆ.-9742 345840 ಮತ್ತು ಸಬಿಕೆ ನೂಬಿಯಾ-9538912357, ಉಮ್ಮೇ ಹಮೀದ -9972999511 ಅವರನ್ನು ಸಂಪರ್ಕಿಸಿ.

ಮಾರ್ಗಸೂಚಿಗಳನ್ನು ಪಾಲಿಸಲು ಸೂಚನೆ

ಮೈಸೂರು,ಆ.30-ಗೌರಿ ಗಣೇಶ ಹಬ್ಬದ ಪ್ರಯುಕ್ತ ಗಣೇಶ ವಿಗ್ರಹಗಳನ್ನು ಪ್ರತಿ ಷ್ಠಾಪಿಸಿ, ಪೂಜಿಸಿ ನೈಸರ್ಗಿಕ ಜಲ ಮೂಲಗಳಿಗೆ ವಿಸರ್ಜಿಸುವುದರಿಂದ ಜಲಮಾಲಿನ್ಯ ಉಂಟಾಗುತ್ತಿರುವುದು ಮಂಡಳಿ ಮಾಪನ ವರದಿಯಿಂದ ದೃಢಪಟ್ಟಿದೆ. ಜಲಮೂಲ ಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಸಾರ್ವಜನಿಕರು ಅನುಸರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಕೋರಿ ದ್ದಾರೆ. ಹಾನಿಕಾರಕ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ಬಳಕೆ ಮಾಡದೆ, ಜೇಡಿಮಣ್ಣಿನ ಪುಟ್ಟ ವಿಗ್ರಹಗಳನ್ನು ಸ್ಥಾಪಿಸಿ ಹಾಗೂ 5 ಅಡಿ ಎತ್ತರ ಇರುವ ಗೌರಿ ಗಣೇಶ ಮೂರ್ತಿಗಳ ಸ್ಥಾಪನೆ ಮತ್ತು ವಿಸರ್ಜನೆ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾಮೂಹಿಕವಾಗಿ ನಡೆಸುವ ಗಣೇಶನ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕು. ಎಲ್ಲೂ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬಾರದು. ಬಾವಿ, ಕೆರೆ, ಹೊಳೆಗಳಲ್ಲಿ ಗಣಪತಿ ವಿಸರ್ಜಿಸುವುದರಿಂದ ಅಂತರ್ಜಲ, ಕುಡಿಯುವ ನೀರಿನ ಸೆಲೆಗಳು ಹಾಳಾಗುತ್ತದೆ. ಹಾಗಾಗಿ ವಿಸರ್ಜನೆಗೂ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರವನ್ನು ತೆಗೆದು ಸಂಚಾರಿ ವಿಸರ್ಜನಾ ವಾಹನದಲ್ಲಿ ವಿಸರ್ಜಿಸಲು ತಿಳಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ವಿಷಪೂರಿತ ಹೊಗೆ ನಿರ್ಮಾಣದಿಂದ ವಾಯುಮಾಲಿನ್ಯ ಉಂಟಾಗುವುದಲ್ಲದೆ, ಗಡಚಿಕ್ಕುವ ಶಬ್ದವೂ ಕಿವಿಗೆ ಹಾನಿ ಉಂಟುಮಾಡುತ್ತದೆ. ಧ್ವನಿವರ್ಧಕಗಳನ್ನು ರಾತ್ರಿ 10ರಿಂದ ಬೆಳಿಗ್ಗೆ 11 ಗಂಟೆವರೆಗೆ ನಿಷೇಧಿಸಲಾಗಿದೆ. ಗೌರಿ ಗಣೇಶ ಮೂರ್ತಿಗಳನ್ನು ಪಶ್ಚಿಮ ವಾಹಿನಿಯಲ್ಲಿ ವಿಸರ್ಜಿಸುವ ಬದಲು ನಗರಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಂದ ಆಯೋಜಿಸಲ್ಪಟ್ಟ ಸಂಚಾರಿ ವಿಸರ್ಜನಾ ವಾಹನಗಳಲ್ಲಿ ವಿಸರ್ಜಿಸಬೇಕೆಂದು ಅವರು ಕೋರಿದ್ದಾರೆ.

Translate »