ಮೈಸೂರು-ಬೆಂಗಳೂರು ನಡುವೆ ಪ್ರತೀ ಗಂಟೆಗೊಂದರಂತೆ ರೈಲು ಸೇವೆ
ಮೈಸೂರು

ಮೈಸೂರು-ಬೆಂಗಳೂರು ನಡುವೆ ಪ್ರತೀ ಗಂಟೆಗೊಂದರಂತೆ ರೈಲು ಸೇವೆ

January 16, 2019

ಮೈಸೂರು: ಇನ್ನು ಮುಂದೆ ಮೈಸೂರು-ಬೆಂಗಳೂರು ನಡುವೆ ಗಂಟೆ ಗೊಂದರಂತೆ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದ್ದಾರೆ.

ಸಂಕ್ರಾಂತಿ ಉಡುಗೊರೆಯಾಗಿ ಚೆನ್ನೈ- ಕೆಎಸ್‍ಆರ್ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ರೈಲು (ಟ್ರೇನ್ ಸಂಖ್ಯೆ 12609/120610) ಸೇವೆಯನ್ನು ಮೈಸೂರಿಗೆ ವಿಸ್ತರಿ ಸಲಾಗಿದ್ದು, ಈ ರೈಲು ಸಂಚಾರಕ್ಕೆ ಮಂಗಳ ವಾರ ಮೈಸೂರು ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಬೆಂಗಳೂರು-ಚೆನ್ನೈ ನಡುವೆ ಸಂಚರಿ ಸುತ್ತಿದ್ದ ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್ ರೈಲನ್ನು ಮೈಸೂರುವರೆಗೆ ವಿಸ್ತರಿಸುವ ಕುರಿತಂತೆ ಕಾರ್ಯಸಾಧ್ಯತೆ ವರದಿ ನಕಾರಾತ್ಮಕವಾ ಗಿತ್ತು. ಆದರೆ ಇಲ್ಲಿನ ಜನರ ಬೇಡಿಕೆಯ ನ್ನರಿತು ತಾವು ದೆಹಲಿಯಲ್ಲಿ ಶ್ರಮಪಟ್ಟು ಕಾರ್ಯಸಾಧಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ತಿಳಿಸಿದರು.

ಮೈಸೂರು-ಬೆಂಗಳೂರು-ಚೆನ್ನೈ ನಡುವೆ ದಿನಕ್ಕೆ ಸುಮಾರು 30 ಸಾವಿರ ಪ್ರಯಾಣಿ ಕರು ಸಂಚರಿಸುತ್ತಾರೆ, ಬಹಳಷ್ಟು ಮಂದಿ ಐಟಿ-ಬಿಟಿಗಳಲ್ಲಿ ಕೆಲಸ ಮಾಡುತ್ತಿರುವು ದರಿಂದ ಕಾರ್ಯಸಾಧ್ಯತೆ ವರದಿಯನ್ನು ತಿಳಿಹಾಕಿ ಈ ರೈಲು ಸಂಚಾರವನ್ನು ಮೈಸೂರಿಗೆ ವಿಸ್ತರಿಸಲು ತಾವು ತೀವ್ರ ಶ್ರಮಪಟ್ಟಿದ್ದಾಗಿ ಹೇಳಿದರು.

ಮುಂದೆ ಮೈಸೂರಿಗೆ ಇನ್ನೂ 6 ಹೊಸ ರೈಲುಗಳನ್ನು ಪರಿಚಯಿಸಿ ಬೆಳಗಾಂ, ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ಕೊಚ್ಚಿ ನಗರಗಳಿಗೂ ಸಂಪರ್ಕ ಕಲ್ಪಿಸಲಾಗುವುದು ಎಂದ ಅವರು, ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾದಾಗ ಲೆಲ್ಲಾ ಸಾರಿಗೆ ಬಸ್ ದರವನ್ನು ರಾಜ್ಯ ಸರ್ಕಾರ ಏರಿಸುತ್ತದೆ. ಆದರೆ ರೈಲು ಸಂಚಾರ ದರ ಅತ್ಯಂತ ಕಡಿಮೆ ಆದ ಕಾರಣ ಮುಂದೆ ಹಲವು ರೈಲುಗಳನ್ನು ಪರಿಚಯಿಸಲಾಗುವುದು ಎಂದರು.
ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರು, ಮೈಸೂರು ನಗರಕ್ಕೆ ಹೆಚ್ಚು ರೈಲುಗಳನ್ನು ತರುವಲ್ಲಿ ರೈಲು ನಿಲ್ದಾಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವ ಕಾರಣ ಬೆಂಗ ಳೂರು-ಮೈಸೂರು ನಡುವಿನ ರೈಲು ಸಂಚಾರ ಸೇವೆಯಲ್ಲಿ ಪರಿಣಾಮಕಾರಿ ಬದಲಾವಣೆಯಾಗಿದೆ ಎಂದು ಶ್ಲಾಘಿಸಿದರು.
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇ ಗೌಡ ಮಾತನಾಡಿ, ಬೆಳಿಗ್ಗೆ ಮತ್ತು ಸಂಜೆ ವೇಳೆ ಮೈಸೂರು-ಬೆಂಗಳೂರು ನಡುವೆ ಬೆಂಗಳೂರಿಗೆ ಹೆಚ್ಚು ಬೇಡಿಕೆ ಇರುವು ದರಿಂದ ಮತ್ತಷ್ಟು ರೈಲುಗಳನ್ನು ಪರಿಚಯಿ ಸುವುದು ಸೂಕ್ತ ಎಂದರು.

ಮೇಯರ್ ಪುಷ್ಪಲತಾ ಜಗನ್ನಾಥ್, ವಿಭಾಗೀಯ ರೈಲ್ವೆ ಮ್ಯಾನೇಜರ್ ಅಪರ್ಣ ಗರ್ಗ್, ಎಡಿಆರ್‍ಎಂ ಅಜಯ್ ಸಿನ್ಹ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯ ದರ್ಶಿ ಎಂ.ರಾಜೇಂದ್ರ ಹಾಗೂ ಉದ್ಯಮಿ ಎಸ್.ಕೆ.ದಿನೇಶ್ ಅವರು ಉಪಸ್ಥಿತ ರಿದ್ದರು.

ವಿಸ್ತರಣೆಗೊಂಡ ಚೆನ್ನೈ ಎಕ್ಸ್‍ಪ್ರೆಸ್ ರೈಲು ನಾಳೆ (ಜ.17) ಮುಂಜಾನೆ 4.45 ಗಂಟೆಗೆ ಮೈಸೂರಿ ನಿಂದ ಪ್ರಯಾಣ ಆರಂಭಿಸುವುದು ಎಂದು ರೈಲ್ವೆ ಅಧಿ ಕಾರಿಗಳು ತಿಳಿಸಿದ್ದಾರೆ.

Translate »