ಮೈಸೂರು ರೇಸ್ ಕೋರ್ಸ್‍ನ ಅನಧಿಕೃತ ಶೆಡ್‍ಗಳ ತೆರವು
ಮೈಸೂರು

ಮೈಸೂರು ರೇಸ್ ಕೋರ್ಸ್‍ನ ಅನಧಿಕೃತ ಶೆಡ್‍ಗಳ ತೆರವು

June 30, 2018

ಮೈಸೂರು: ಮೈಸೂರಿನ ರೇಸ್‍ಕೋರ್ಸ್ ಆವರಣದಲ್ಲಿದ್ದ ಅನಧಿಕೃತ ಶೆಡ್‍ಗಳನ್ನು ತೆರವುಗೊಳಿಸಲಾಗುತ್ತಿದೆ.

ಇತ್ತೀಚೆಗೆ ರೇಸ್‍ಕೋರ್ಸ್‍ಗೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್, ಕುದುರೆಗಳು ಹಾಗೂ ಪಾಲಕರ ವಾಸಕ್ಕಾಗಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಶೆಡ್‍ಗಳನ್ನು ತೆರವುಗೊಳಿಸಬೇಕೆಂದು ಖಡಕ್ ಎಚ್ಚರಿಕೆ ನೀಡಿದ್ದರು. ಅಲ್ಲದೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲೂ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶೆಡ್‍ಗಳನ್ನು ನೆಲಸಮಗೊಳಿಸಲಾಗಿದೆ.

ಈ ಸಂಬಂಧ ಶಾಸಗಿ ವಾಹಿನಿಯೊಂದಿಗೆ ಮಾತನಾಡಿದ ಸಚಿವ ಸಾ.ರಾ.ಮಹೇಶ್, ರೇಸ್‍ಕೋರ್ಸ್‍ನ ನಡೆಯ ವಿರುದ್ಧ 10 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇನೆ. ವಾರ್ಷಿಕ 2 ಲಕ್ಷ ಪಾವತಿ ಮಾಡುತ್ತಿದ್ದ ತೆರಿಗೆಯನ್ನು ಈಗ 2 ಕೋಟಿಗೆ ಏರಿಕೆ ಮಾಡಿಸಿದ್ದೇವೆ. ಜಾಗ ನೀಡಿರುವುದು ಕುದುರೆ ಓಡಿಸಲು ಮಾತ್ರವೇ ಹೊರತು, ಅಲ್ಲಿಯೇ ಕುದುರೆಗಳನ್ನು ಸಾಕಲು ಅನುಮತಿ ನೀಡಿಲ್ಲ. ಆದರೂ ಅಲ್ಲಿಯೇ ಕುದುರೆಗಳನ್ನು ಸಾಕುವುದಕ್ಕೆ ಹಾಗೂ ಸಾವಿರಕ್ಕೂ ಹೆಚ್ಚು ಕುದುರೆ ಪಾಲಕರ ವಾಸಕ್ಕೆ ಅನಧಿಕೃತ ಶೆಡ್‍ಗಳನ್ನು ನಿರ್ಮಿಸಿಕೊಳ್ಳಲಾಗಿತ್ತು. ಆವರಣದಲ್ಲೇ ತ್ಯಾಜ್ಯದ ರಾಶಿ ಹಾಕಲಾಗುತ್ತಿತ್ತು. ಆದ್ದರಿಂದ ಶೆಡ್‍ಗಳನ್ನು ಕಡ್ಡಾಯವಾಗಿ ತೆರವುಗೊಳಿಸುವಂತೆ ಸೂಚಿಸಲಾಗಿತ್ತು ಎಂದು ತಿಳಿಸಿದ್ದಾರೆ.ಮೈಸೂರಿನ ರೇಸ್‍ಕೋರ್ಸ್ ಆವರಣದಲ್ಲಿದ್ದ ಅನಧಿಕೃತ ಶೆಡ್‍ಗಳನ್ನು ತೆರವುಗೊಳಿಸುತ್ತಿರುವುದು.

Translate »