ರೈತರ ಹಕ್ಕನ್ನು ಹತ್ತಿಕ್ಕುವ `ಕಾವೇರಿ ಕೂಗು’ ಅವೈಜ್ಞಾನಿಕ, ಏಕಮುಖ ನಿರ್ಣಯ
ಮೈಸೂರು

ರೈತರ ಹಕ್ಕನ್ನು ಹತ್ತಿಕ್ಕುವ `ಕಾವೇರಿ ಕೂಗು’ ಅವೈಜ್ಞಾನಿಕ, ಏಕಮುಖ ನಿರ್ಣಯ

September 5, 2019

ಮೈಸೂರು, ಸೆ.4(ಆರ್‍ಕೆಬಿ)- ಈಶಾ ಫೌಂಡೇಷನ್ ಹಮ್ಮಿಕೊಂಡಿರುವ `ಕಾವೇರಿ ಕೂಗು’ ಅವೈಜ್ಞಾನಿಕ ಹಾಗೂ ಏಕ ಮುಖ ನಿರ್ಣಯವಾಗಿದ್ದು, ಇದರಿಂದ ರೈತರ ಹಕ್ಕನ್ನು ಹತ್ತಿಕ್ಕುವ ಕಾರ್ಯ ನಡೆಸಲಾಗುತ್ತಿದೆ ಎಂದು ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನುಸ್ವಾಮಯ್ಯ ತಿಳಿಸಿದರು.

ನದಿ ಉಳಿಸುವ ಕಾರ್ಯಕ್ರಮ ಉತ್ತಮವಾಗಿದ್ದರೂ ತಳÀ ಮಟ್ಟದ ವಾಸ್ತವತೆಯನ್ನು ಅರ್ಥೈಸಿಕೊಂಡು ಅದರ ರೂಪು ರೇಷೆ ಕುರಿತಂತೆ ಆ ಭಾಗದ ರೈತರೊಂದಿಗೆ ಬಹಿರಂಗ ಚರ್ಚೆ ನಡೆಸಬೇಕಿತ್ತು. ರಾಜ್ಯದಲ್ಲಿ ಸುಮಾರು ಒಟ್ಟು 800 ಕಿ.ಮೀ. ಕಾವೇರಿ ಹರಿಯುವುದು. ಅದರಿಂದಾಗುವ ಆಗು ಹೋಗುಗಳ ಬಗ್ಗೆ ನದಿ ತಟದ ಭಾಗದ ರೈತರೊಂದಿಗೆ ವಿಸ್ತøತ ಚರ್ಚೆ ನಡೆಸಬೇಕು ಎಂದು ಅವರು ಬುಧ ವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನದಿ ತಟದ ರೈತರಾಗಿರುವ ನಮ್ಮೊಂದಿಗೆ ವಿಸ್ತøತ ಚರ್ಚೆ ನಡೆಸಿಲ್ಲ. ನದಿ ತಟವನ್ನು ಸೂಕ್ಷ್ಮ ಅರಣ್ಯ ವಲಯವೆಂದು ಘೋಷಿಸಿದರೆ ರೈತರಿಗೆ ಕುತ್ತಾಗಲಿದೆ. 242 ಕೋಟಿ ಮರ ಬೆಳೆಸುವುದು ಚಿಕ್ಕ ಯೋಜನೆಯಲ್ಲ. ಎಲ್ಲಾ ಕಡೆ ಒಂದೇ ರೀತಿಯ ಗಿಡ ಮರಗಳನ್ನು ಬೆಳೆಸುವುದು ಸಾಧ್ಯವಿಲ್ಲ. ಅದಕ್ಕೆ ತನ್ನದೇ ಆದ ಮಣ್ಣು, ಪರಿಸರ ಅವಲಂಭಿಸಿರುತ್ತದೆ. ಸದ್ಗುರು ಜಗ್ಗಿ ವಾಸುದೇವ್ ಹಮ್ಮಿಕೊಂಡಿರುವ ಯೋಜನೆಯ ಸಾಧಕ, ಬಾಧಕ ಕುರಿತು ಸ್ಥಳೀಯ ರೈತರೊಂದಿಗೆ ಚರ್ಚೆ ನಡೆಸಬೇಕು ಎಂದು ರೈತಸಂಘ ಒತ್ತಾಯಿಸಿತು.

Translate »