ಮಾವು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಕ್ಯಾನ್ಸರ್‍ಗೆ ನಾಂದಿ
ಮೈಸೂರು

ಮಾವು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಕ್ಯಾನ್ಸರ್‍ಗೆ ನಾಂದಿ

May 7, 2019

ಮೈಸೂರು: ಕ್ಯಾಲ್ಸಿಯಂ ಕಾರ್ಬೈಡ್‍ನಂತಹ ರಾಸಾಯನಿಕ ಬಳಸಿ ಮಾಗಿಸುವ ಮಾವಿನ ಹಣ್ಣು ಸೇವನೆ ಹಲವು ರೀತಿಯ ಕ್ಯಾನ್ಸರ್‍ಗೆ ಕಾರಣವಾಗ ಲಿದ್ದು, ಈ ಹಿನ್ನೆಲೆಯಲ್ಲಿ ಮಾವು ಮಾಗಿ ಸಲು ಈ ರಾಸಾಯನಿಕ ಬಳಕೆ ನಿಷೇಧಿ ಸಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಯೂ ಆದ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಎಸ್.ಚಿದಂಬರ ತಿಳಿಸಿದರು.

ಮೈಸೂರಿನ ಕರ್ಜನ್ ಪಾರ್ಕ್ ಆವರಣ ದಲ್ಲಿರುವ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಇಲಾಖೆ ವತಿಯಿಂದ ಮಾವು ಮಾಗಿ ಸುವ ಸಂಬಂಧ ಬೆಳೆಗಾರರು, ವರ್ತಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಹಂತದ ಸಭೆಯಲ್ಲಿ ಅವರು ಮಾತನಾಡಿದರು.

ಕೃತಕವಾಗಿ ಮಾವು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್‍ನಂತಹ ರಾಸಾಯನಿಕ ಪೌಡರ್ ಬಳಕೆ ಅಪಾಯಕಾರಿ. ಇದರಿಂದ ಮಾಗುವ ಹಣ್ಣುಗಳ ಸೇವನೆ ಹಲವು ರೀತಿಯ ಕ್ಯಾನ್ಸರ್‍ಗೆ ಕಾರಣವಾಗಬಲ್ಲದು. ಇದೇ ಕಾರಣಕ್ಕೆ ಆಹಾರ ಸುರಕ್ಷಾ ಕಾಯ್ದೆಯಡಿ ಮಾವು ಮಾಗಿಸಲು ಇದನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಬೆಳೆಗಾರರು, ವರ್ತಕರು ಹಾಗೂ ಗ್ರಾಹಕರು ಸೇರಿದಂತೆ ಎಲ್ಲರೂ ಈ ಬಗ್ಗೆ ಜಾಗೃತರಾಗಿರುವುದು ಅಗತ್ಯ ಎಂದು ತಿಳಿಸಿದರು.

ಹಿಂದೆ ಆಹಾರ ಸಂಬಂಧಿತ ಕಾಯಿಲೆ ಗಳೇ ಇರಲಿಲ್ಲ. ಆದರೆ ಪ್ರಸ್ತುತ ಸನ್ನಿವೇಶ ಬದಲಾಗಿದ್ದು, ಎಲ್ಲಾ ರೀತಿಯ ಅನಾ ರೋಗ್ಯಕ್ಕೆ ಆಹಾರ ಕ್ರಮವೇ ಮೂಲ ವಾಗಿದೆ. ಆಹಾರ ಉದ್ಯಮದಲ್ಲಿ ಲಾಭ ದಾಸೆಗೆ ಕೆಲವರು ಅಡ್ಡದಾರಿ ಹಿಡಿಯು ತ್ತಾರೆ. ಇದು ಹೀಗೆಯೇ ಮುಂದುವರೆ ದರೆ, ಮಾನವ ಸಂಕುಲದ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಊಹಿಸಲೂ ಅಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರ ಸ್ನೇಹಿ ವಿಧಾನದಲ್ಲಿ ಮಾಗಿದ ಮಾವಿನ ಹಣ್ಣಿನಲ್ಲಿ ಹಸಿರು ಬಣ್ಣ ಸಂಪೂರ್ಣ ಮರೆಯಾಗಿರುವುದಿಲ್ಲ. ಆದರೆ ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡಿರುವ ಹಣ್ಣು ಪೂರ್ಣ ಪ್ರಮಾಣದಲ್ಲಿ ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಈ ಬಗ್ಗೆ ಅರಿವು ಇದ್ದಲ್ಲಿ ರಾಸಾ ಯನಿಕ ಬಳಸಿದ ಹಣ್ಣು ಯಾವುದೆಂದು ಸುಲಭವಾಗಿ ಕಂಡುಕೊಳ್ಳಬಹುದು ಎಂದರು.
ಎಥೇಲಿನ್ ಬಳಸಬಹುದು: ಎಥೇಲಿನ್ ದ್ರಾವಣ ಮತ್ತು ಅನಿಲ ಬಳಸಿ ಮಾಗಿ ಸಲು ಅವಕಾಶವಿದೆ. ಎಥೇಲಿನ್ ಎಂಬುದು ಎಲ್ಲಾ ಹಣ್ಣುಗಳು ಮಾಗುವಾಗ ಸಹಜ ವಾಗಿ ಉತ್ಪತ್ತಿಯಾಗುವ ಒಂದು ಅನಿಲ ರೂಪಿ ಹಾರ್ಮೋನ್ ಆಗಿದೆ. ಇದನ್ನು ಬಾಹ್ಯವಾಗಿ ಒದಗಿಸಿದಾಗ ಹಣ್ಣು ಮಾಗುವ ಕ್ರಿಯೆ ಬಹುಬೇಗನೆ ಆಗಲಿದೆ. ಇದು ನಿಸರ್ಗದತ್ತ ಹಾರ್ಮೋನ್ ಆಗಿರುವ ಹಿನ್ನೆಲೆಯಲ್ಲಿ ಕೃತಕವಾಗಿ ಮಾಗಿಸಲು ಇದನ್ನು ಬಳಸಿಕೊಳ್ಳಲು ಯಾವುದೇ ನಿರ್ಬಂಧ ಇಲ್ಲ. ಈ ವಿಧಾ ನದ ಬಳಕೆಗೆ ಮಾವು ಅಭಿವೃದ್ಧಿ ನಿಗಮ, ತೋಟಗಾರಿಕೆ ಇಲಾಖೆ ಹಾಗೂ ವಿಜ್ಞಾನಿ ಗಳ ಶಿಫಾರಸ್ಸುಗಳನ್ನು ಅನುಸರಿಸುವುದು ಅಗತ್ಯ ಎಂದು ವಿವರಿಸಿದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ (ರಾಜ್ಯ ವಲಯ) ಅಭಿಬಾ ನಿಷಾಧ್, ತೋಟಗಾರಿಕೆ ಮಹಾವಿದ್ಯಾಲ ಯದ ಪ್ರಾಧ್ಯಾಪಕ ಡಾ.ವೆಂಕಟರಾವ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ, ಎಪಿಎಂಸಿ ಕಾರ್ಯ ದರ್ಶಿ ಗಿರೀಶ್, ಮೈಸೂರು ನಗರ ಪಾಲಿಕೆ ಹಿರಿಯ ಆರೋಗ್ಯ ನಿರೀಕ್ಷಕ ಎ.ಪ್ರಭಾ ಕರ್ ಸೇರಿದಂತೆ ಮಾವು ಬೆಳೆಗಾರರು, ಮಾರಾಟಗಾರರು ಪಾಲ್ಗೊಂಡಿದ್ದರು.

Translate »