ಬೆಂಗಳೂರು, ದಾವಣಗೆರೆ ವಿವಿಗೆ ಜಯ
ಮೈಸೂರು

ಬೆಂಗಳೂರು, ದಾವಣಗೆರೆ ವಿವಿಗೆ ಜಯ

December 1, 2019

ಮೈಸೂರು,ನ.30(ವೈಡಿಎಸ್)- ಮಾನಸ ಗಂಗೋತ್ರಿಯ ಗ್ಲೇಡ್ಸ್ ಮೈದಾನದಲ್ಲಿ ಶನಿವಾರ ನಡೆದ 2ನೇ ಸುತ್ತಿನ ಕ್ರಿಕೆಟ್ ಪಂದ್ಯದಲ್ಲಿ ಬೆಂಗಳೂರು ಮತ್ತು ದಾವಣ ಗೆರೆ ವಿವಿ ತಂಡಗಳು ಜಯ ಸಾಧಿಸಿದವು.

ನವದೆಹಲಿಯ ಭಾರತೀಯ ವಿಶ್ವವಿದ್ಯಾ ನಿಲಯಗಳ ಮಹಾಸಂಘ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಆಯೋ ಜಿಸಿರುವ ದಕ್ಷಿಣ ವಲಯ ಅಂತರ ವಿವಿ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹೈದ್ರಾ ಬಾದ್‍ನ ಮೌಲಾನಾ ಆಜಾದ್ ಉರ್ದು ವಿವಿ ವಿರುದ್ಧ ಬೆಂಗಳೂರು ವಿವಿ ತಂಡ 1 ವಿಕೆಟ್‍ನ ರೋಚಕ ಜಯ ಸಾಧಿಸಿದರೆ, ಚೆನ್ನೈನ ಡಾ.ಅಂಬೇಡ್ಕರ್ ಕಾನೂನು ವಿವಿ ತಂಡದ ವಿರುದ್ಧ ದಾವಣಗೆರೆ ವಿ.ವಿ ತಂಡ 8 ರನ್‍ಗಳಿಂದ ಜಯ ಸಾಧಿಸಿತು.

ಫಲಿತಾಂಶ: ಮೌಲಾನಾ ಆಜಾದ್ ಉರ್ದು ವಿವಿ, ಹೈದರಾಬಾದ್ 23.4 ಓವರ್‍ಗಳಲ್ಲಿ 106 (ಮೊಹಮ್ಮದ್ ರಫೀಕ್ 54, ಶ್ರೀ ಪ್ರಜ್ವಲ್ 12ಕ್ಕೆ 3) ರನ್ ಗಳಿಸಿದರೆ, ಬೆಂಗ ಳೂರು ವಿ.ವಿ 22.5 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 110 (ಪ್ರಜ್ವಲ್ ಪವನ್ 15, ಮೊಹ ಮ್ಮದ್ ಅಸ್ಗರ್ 18ಕ್ಕೆ 4)ರನ್ ಗಳಿಸುವ ಮೂಲಕ 1 ವಿಕೆಟ್ ಜಯ ಸಾಧಿಸಿತು.

ಡಾ.ಅಂಬೇಡ್ಕರ್ ಕಾನೂನು ವಿವಿ, ಚೆನ್ನೈ 25 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 156 (ವಿವೇಕ್ ತಿರುವೆಂಕಟಮ್ 33, ಎಚ್. ಶಶಿಧರ 36ಕ್ಕೆ 3) ರನ್ ಗಳಿಸಿದರೆ, ದಾವಣ ಗೆರೆ ವಿ.ವಿ 25 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 (ಬಿ.ಮಂಜುನಾಥ್ 58, ಮೊಹ ಮ್ಮದ್ ಅಲಿ ಖಾನ್ 43)ರನ್ ಗಳಿಸುವ ಮೂಲಕ 8 ರನ್‍ಗಳಿಂದ ಗೆಲುವು ಪಡೆಯಿತು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ, ಬಳ್ಳಾರಿ 16.3 ಓವರ್‍ಗಳಲ್ಲಿ 36 (ತಮೀಮ್ ಅನ್ಸಾರಿ 5ಕ್ಕೆ 2, ಶಫೀಕು ದ್ದೀನ್ 12ಕ್ಕೆ 2) ರನ್ ಗಳಿಸಿದರೆ, ಮದ್ರಾಸ್ ವಿವಿ, ಚೆನ್ನೈ 3.5 ಓವರ್‍ಗಳಲ್ಲಿ ವಿಕೆಟ್ ನಷ್ಟ ವಿಲ್ಲದೆ 37 (ಸಂಜಯ್ ಶ್ರೀನಿವಾಸ್ 20) ರನ್ ಗಳಿಸಿತು. ಆ ಮೂಲಕ 10 ವಿಕೆಟ್ ಗಳಿಂದ ಜಯ ಸಾಧಿಸಿತು. ಕರ್ನಾಟಕ ರಾಜ್ಯ ಕಾನೂನು ವಿವಿ ಹುಬ್ಬಳ್ಳಿ 7.5 ಓವರ್‍ಗಳಲ್ಲಿ 86 (ಸೈಯದ್ ಅಂದ್ರಾಬಿ 20, ಕೆ.ಮುತ್ತು ರಾಕ್ 14ಕ್ಕೆ 3) ರನ್ ಗಳಿಸಿದರೆ, ವಿನಾಯಕ ಮಿಷನ್ ವಿವಿ., ಸೇಲಂ 9 ಓವರ್‍ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 89 (ರಾಜೆನಿರಕುಮಾರ್ 48, ಪಳನಿಸ್ವಾಮಿ 24) ರನ್ ಗಳಿಸಿ, 10 ವಿಕೆಟ್‍ಗಳಿಂದ ಗೆಲುವು ಪಡೆಯಿತು.

Translate »