ಮೈತ್ರಿ ಧರ್ಮ ಪಾಲನೆ ಹಿನ್ನೆಲೆ: ಸಚಿವ ಸಾರಾ ಮಹೇಶ್ ಭೇಟಿ ಮಾಡಿದ ಮೈತ್ರಿ ಸಂಭಾವ್ಯ ಅಭ್ಯರ್ಥಿ ವಿಜಯಶಂಕರ್
ಮೈಸೂರು

ಮೈತ್ರಿ ಧರ್ಮ ಪಾಲನೆ ಹಿನ್ನೆಲೆ: ಸಚಿವ ಸಾರಾ ಮಹೇಶ್ ಭೇಟಿ ಮಾಡಿದ ಮೈತ್ರಿ ಸಂಭಾವ್ಯ ಅಭ್ಯರ್ಥಿ ವಿಜಯಶಂಕರ್

March 23, 2019

ಮೈಸೂರು: ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ಮೈತ್ರಿಯ ಸಂಭಾವ್ಯ ಅಭ್ಯರ್ಥಿಯೂ ಆದ ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಶುಕ್ರವಾರ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವ ರನ್ನು ಭೇಟಿ ಮಾಡಿ, ಬೆಂಬಲ ಯಾಚಿಸಿದ್ದಾರೆ. ಮೈಸೂರಿನ ಚಾಮರಾಜ ಮೊಹಲ್ಲಾದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಿ.ಹೆಚ್.ವಿಜಯ ಶಂಕರ್, ಮೈತ್ರಿಧರ್ಮ ಪಾಲನೆ ವಿಚಾರ ಚರ್ಚಿಸಿದರು. ಇದೇ ವೇಳೆ ಮಾಧ್ಯಮದ ವರಿಗೆ ಪ್ರತಿಕ್ರಿಯೆ ನೀಡಿದ ಸಿ.ಹೆಚ್.ವಿಜಯ ಶಂಕರ್, ಕಳೆದ 9 ತಿಂಗಳಿಂದ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ. ಇದೀಗ ಜಾತ್ಯಾತೀತ ಶಕ್ತಿಗಳು ಒಗ್ಗಟ್ಟಾಗಿ ದೇಶದ ಆಡಳಿತ ಹಿಡಿ ಯುವ ಕಾಲ ಬಂದಿದೆ. ಮೈತ್ರಿ ಧರ್ಮ ಪಾಲನೆಯ ಲಾಭ ಎರಡು ಪಕ್ಷಗಳಿಗೂ ಸಿಗಬೇಕಿದೆ. ಇಲ್ಲವಾದರೆ ಯಾವುದೇ ಪ್ರಯೋ ಜನವಿಲ್ಲ. ಹೀಗಾಗಿ ಎರಡೂ ಪಕ್ಷಗಳ ಸ್ಥಳೀಯ ಕಾರ್ಯಕರ್ತರು ಒಂದಾಗಬೇಕು ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ವರಿಗೆ ಮೈಸೂರನ್ನು ಗೆಲ್ಲಿಸುವ ಭರವಸೆ ಯನ್ನು ಹೆಚ್.ಡಿ.ದೇವೇಗೌಡರು ನೀಡಿದ್ದಾರೆ. ಭಿನ್ನಾಭಿಪ್ರಾಯಕ್ಕೆ ನಾವು ಅವಕಾಶ ಕೊಡುವುದಿಲ್ಲ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಬಗೆ ಹರಿಸಿಕೊಳ್ಳುತ್ತೇವೆ. ಈ ಸಂಬಂಧ ಸಾ.ರಾ.ಮಹೇಶ್ ಜೊತೆ ಮಾತ ನಾಡಿದ್ದೇನೆ. ಮೈಸೂರಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಜಂಟಿ ಸಭೆ ನಡೆಯಲಿದೆ. ಮೈಸೂರಿಗೆ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಪ್ರಚಾರಕ್ಕೆ ಬರಲಿ ದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ನಾಯಕರನ್ನು ಕರೆತರುವ ಭರವಸೆ ನೀಡಿ ದ್ದಾರೆ. ಮೈಸೂರಿನಲ್ಲಿ ಜಿ.ಟಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಒಂದೇ ವೇದಿಕೆ ಯಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಸಿ.ಹೆಚ್.ವಿಜಯಶಂಕರ್ ತಿಳಿಸಿದರು.

ಮಾಜಿ ಶಾಸಕ ಹೆಚ್.ಪಿ.ಮಂಜು ನಾಥ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮತ್ತಿತರರು ಈ ವೇಳೆ ಹಾಜರಿದ್ದರು.

ಮೈತ್ರಿ ಧರ್ಮಕ್ಕೆ ಭಂಗ ತಂದರೆ ಕಠಿಣ ಕ್ರಮ: ಸಚಿವ ಸಾರಾ

ಮೈಸೂರು: ಮೈತ್ರಿ ಧರ್ಮ ಪಾಲಿಸದ ಪಕ್ಷದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ವಿಧಾನಸಭಾ ಕ್ಷೇತ್ರದ ಹಿಂದಿನ ಚುನಾವಣೆ ಮತ ಪ್ರಮಾ ಣದ ಆಧಾರದಲ್ಲಿ ಈ ಚುನಾವಣೆ ಮತ ಗಳಿಕೆಯನ್ನು ವರಿಷ್ಠರು ಪರಿಗಣಿಸಲಿ ದ್ದಾರೆ. ಕಾಂಗ್ರೆಸ್ ಕೂಡ ತನ್ನ ಸಚಿವರು ಹಾಗೂ ಶಾಸಕರಿಗೆ ಮೈತ್ರಿ ಧರ್ಮ ಪಾಲನೆ ವಿಚಾರದಲ್ಲಿ ಖಡಕ್ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದರು.
ಮೈತ್ರಿ ಧರ್ಮ ಪಾಲಿಸದ ಸಚಿವರು, ಶಾಸಕರು ಹಾಗೂ ಕಾರ್ಯಕರ್ತರ ವಿರುದ್ಧ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳಲಿ ದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಮೈತ್ರಿ ಧರ್ಮ ಪಾಲನೆಯಲ್ಲಿ ಬದ್ಧತೆ ತೋರದಿದ್ದರೆ, ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲಾಗದು ಎಂದು ಹೇಳಿದರು.

ಯಾವುದೇ ಪಕ್ಷದ ಬೆಂಬ ಲಿತರ ಬಗ್ಗೆ ಯಾರೂ ವೈಯಕ್ತಿ ಕವಾಗಿ ಮಾತನಾಡಬಾರದು. ನಟರಾದ ದರ್ಶನ್, ಯಶ್ ವಿಚಾರದಲ್ಲಿ ನಮ್ಮ ಪಕ್ಷದ ಮುಖಂಡರು ಮಾತನಾಡಿರುವ ಸಂಬಂಧ ಪಕ್ಷ ಗಂಭೀರವಾಗಿ ಪರಿಗಣಿ ಸುತ್ತದೆ ಎಂದರು.

ಕೆಆರ್ ನಗರದ ಕೈ ನಾಯಕರು: ಇದೇ ವೇಳೆ ಕೆಆರ್ ನಗರದಲ್ಲಿ ಕಾಂಗ್ರೆಸ್ ನಾಯ ಕರು ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾಂಗ್ರೆಸ್ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಮಾಜಿ ಸಿಎಂ ಸಿದ್ದರಾ ಮಯ್ಯ ಕೂಡ ಅವರಿಗೆಲ್ಲಾ ಸೂಚನೆ ನೀಡುವ ಭರವಸೆ ನೀಡಿದ್ದಾರೆ ಎಂದರು.

ಮೈಸೂರಿನಲ್ಲಿ ಸಿ.ಹೆಚ್.ವಿಜಯ ಶಂಕರ್ ಹಾಗೂ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿ ದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಾ.ರಾ. ಮಹೇಶ್, ಮಾಜಿ ಸಿಎಂ ಸಿದ್ದ ರಾಮಯ್ಯ ಹಾಗೂ ಸಚಿವ ಜಿ.ಟಿ.ದೇವೇಗೌಡರು ಒಟ್ಟಾಗಿ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಯಾವುದೇ ಸಂದೇಹ ಬೇಡ ಎಂದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿ ದಂತೆ ಎರಡೂ ಪಕ್ಷಗಳ ರಾಷ್ಟ್ರೀಯ ನಾಯ ಕರು ತೀರ್ಮಾನ ಮಾಡಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಹೀಗಾಗಿ ರಾಷ್ಟ್ರೀಯ ನಾಯಕರ ನಿರ್ಧಾರದ ಮೈತ್ರಿಯಂತೆ ನಾವು ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತೇವೆ. ಮಂಡ್ಯದಲ್ಲಿ ನಿಖಿಲ್, ಚಾಮರಾಜನಗರದಲ್ಲಿ ಆರ್.ಧೃವನಾರಾ ಯಣ್, ಮೈಸೂರು-ಕೊಡಗಿನಲ್ಲಿ ವಿಜಯಶಂಕರ್ ಜೆಡಿಎಸ್-ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿಗಳಾಗಲಿದ್ದಾರೆ. ಮೈತ್ರಿ ಧರ್ಮ ಪಾಲನೆ ಮಾಡದಿದ್ದವರ ವಿರುದ್ಧ ಎರಡೂ ಪಕ್ಷದಲ್ಲೂ ನಿರ್ದಾಕ್ಷಿಣ್ಯ ಕ್ರಮ ಆಗಬೇಕು ಎಂದು ತಿಳಿಸಿದರು.

Translate »