ಕೈ-ದಳ ನಾಯಕರೊಂದಿಗೆ ಕೆಜಿ ಕೊಪ್ಪಲಿನಲ್ಲಿ ವಿಜಯಶಂಕರ್ ರೋಡ್ ಶೋ
ಮೈಸೂರು

ಕೈ-ದಳ ನಾಯಕರೊಂದಿಗೆ ಕೆಜಿ ಕೊಪ್ಪಲಿನಲ್ಲಿ ವಿಜಯಶಂಕರ್ ರೋಡ್ ಶೋ

April 13, 2019

ಮೈಸೂರು: ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಶುಕ್ರವಾರ ಮೈಸೂರಿನ ಕೆಜಿ ಕೊಪ್ಪಲಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ, ಜೆಡಿಎಸ್ ಮಾಜಿ ನಗರಾಧ್ಯಕ್ಷ ರಾಜಣ್ಣ ಸೇರಿ ದಂತೆ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರೊಂದಿಗೆ ತೆರೆದ ವಾಹನ ದಲ್ಲಿ ಪ್ರಚಾರ ನಡೆಸಿ ಅಲ್ಲಲ್ಲಿ ಪಾದಯಾತ್ರೆ ಮೂಲಕವೂ ಮತದಾರರ ಮನವೊಲಿ ಸುವ ಪ್ರಯತ್ನ ಮಾಡಿದರು.

ನ್ಯೂ ಕಾಂತರಾಜ ಅರಸ್ ರಸ್ತೆ ಸೇರಿ ದಂತೆ ವಿವಿಧೆಡೆ ಪ್ರಚಾರ ನಡೆಸಿ ಅಂತಿಮ ವಾಗಿ ಇಲ್ಲಿನ ಚಾಮುಂಡೇಶ್ವರಿ ಅಮ್ಮನ ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಇದೇ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಲವಾಗಿದ್ದು, ಇಲ್ಲಿನ ಜನತೆ ಮೈತ್ರಿ ಪರವಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮಣಿಸಲು ಹವಣಿಸುತ್ತಿರುವ ಬಿಜೆಪಿ, ಚುನಾವಣೆ ಬಳಿಕ ರಾಜ್ಯದ ಮೈತ್ರಿ ಸರ್ಕಾರ ಅಭದ್ರಗೊಳಿಸುವ ಭ್ರಮೆ ಯಲ್ಲಿದೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ನನ್ನನ್ನು ಆಯ್ಕೆ ಮಾಡುವ ಮೂಲಕ ಜನತೆ ಮೈತ್ರಿಕೂಟಕ್ಕೆ ಬೆಂಬಲ ನೀಡು ವರು. ಹೆಚ್ಚಿನ ಮತಗಳ ಅಂತರದಿಂದ ಆಯ್ಕೆಯಾಗುವ ಭರವಸೆ ಇದೆ. ಮೈತ್ರಿ ಕೂಟದಲ್ಲಿದ್ದ ಭಿನ್ನಾಭಿಪ್ರಾಯ ಸಂಪೂರ್ಣ ನಿವಾರಣೆಗೊಂಡಿದ್ದು, ಉಭಯ ಪಕ್ಷಗಳ ಕಾರ್ಯಕರ್ತರು ಒಂದಾಗಿ ಕೆಲಸ ಮಾಡು ತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ದೀನ ದಲಿತರು ಸೇರಿದಂತೆ ಎಲ್ಲಾ ವರ್ಗದ ಹಿತಕಾಯಲಾಯಿತು. ಆದರೆ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳ ಪರವಾಗಿ ಆಡಳಿತ ನಡೆಸಿತು. ಬಿಜೆಪಿ ಮುಖವಾಡ ಇದೀಗ ಕಳಚಿದ್ದು, ಈ ಚುನಾವಣೆಯಲ್ಲಿ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹೆಸರೇಳಲಿಲ್ಲ: ಚುನಾವಣಾ ಪ್ರಚಾರಕ್ಕಾಗಿ ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ತಮ್ಮ ಅಭ್ಯರ್ಥಿ ಪ್ರತಾಪ್ ಸಿಂಹ ಹೆಸರನ್ನೇ ಹೇಳಲಿಲ್ಲ. ಬದಲಾಗಿ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಬೆಂಬ ಲಿಸಿ ಎಂದು ಕರೆ ನೀಡಿದ್ದಾರೆ. ಅವರ ದೃಷ್ಟಿ ಮಂಡ್ಯದತ್ತ ಇದೆ. ಹೀಗಾಗಿ ಮೋದಿ ಮೈಸೂರು ಭೇಟಿಯಿಂದ ನಮಗೆ ಯಾವುದೇ ಹಾನಿ ಇಲ್ಲ ಎಂದು ವಿಶ್ಲೇಷಿಸಿದರು.

ಮಾಜಿ ಮೇಯರ್ ಆರ್.ಲಿಂಗಪ್ಪ, ಪಾಲಿಕೆ ಸದಸ್ಯ ಶಿವಕುಮಾರ್, ಮಾಜಿ ಸದಸ್ಯ ಬಾಲು, ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಬಸವರಾಜು, ಕಾಂಗ್ರೆಸ್ ಮುಖಂಡ ನಾಗರಾಜು ಅಂಬರೀಶ್ ಮತ್ತಿತರರು ಪಾಲ್ಗೊಂಡಿದ್ದರು.

Translate »