‘ವಿಕ್ರಮ್ ಲ್ಯಾಂಡರ್ ಕ್ರಾಶ್ ಆಗಿಲ್ಲ, ಲ್ಯಾಂಡರ್-ಆರ್ಬಿಟರ್ ನಡುವಿನ ಸಂಪರ್ಕ ಇನ್ನೂ ಜೀವಂತ’
ಮೈಸೂರು

‘ವಿಕ್ರಮ್ ಲ್ಯಾಂಡರ್ ಕ್ರಾಶ್ ಆಗಿಲ್ಲ, ಲ್ಯಾಂಡರ್-ಆರ್ಬಿಟರ್ ನಡುವಿನ ಸಂಪರ್ಕ ಇನ್ನೂ ಜೀವಂತ’

September 8, 2019

ಬೆಂಗಳೂರು, ಸೆ.7- ಕೋಟ್ಯಾಂತರ ಭಾರತೀಯರಲ್ಲಿ ಹೆಮ್ಮೆಯ ಭಾವನೆ ಮೂಡಿಸಿದ್ದ ಚಂದ್ರಯಾನ 2 ಯೋಜ ನೆಯ ವಿಕ್ರಮ್ ಲ್ಯಾಂಡರ್ ಅಪಘಾತಕ್ಕೀ ಡಾಗಿಲ್ಲ. ವಿಕ್ರಮ್ ಲ್ಯಾಂಡರ್ ಮತ್ತು ಚಂದ್ರ ಯಾನ-2 ಆರ್ಬಿಟರ್ ನಡುವಿನ ಸಂಪರ್ಕ ಇನ್ನೂ ಜೀವಂತವಾಗಿದೆ ಎಂದು ಹೇಳ ಲಾಗಿದೆ. ಈ ಕುರಿತಂತೆ ಸ್ವತಃ ಇಸ್ರೋ ಮಾಜಿ ನಿರ್ದೇಶಕ ಡಿ.ಸಸಿಕುಮಾರ್ ಅವರು ಅಚ್ಚರಿ ಹೇಳಿಕೆ ನೀಡಿದ್ದು, ‘ಚಂದ್ರಯಾನ-2 ಸಂಪೂರ್ಣವಾಗಿ ಗುರಿ ಮುಟ್ಟಿರದೇ ಇರಬಹುದು. ಆದರೆ ವಿಫಲವಾಗಿಲ್ಲ. ಚಂದ್ರನಿಂದ 2.1 ಕಿ.ಮೀ. ದೂರದಲ್ಲಿ ಇದ್ದಾಗ ವಿಕ್ರಂ ಲ್ಯಾಂಡರ್ ನೆಟ್‍ವರ್ಕ್ ಸಂಪರ್ಕ ಕಡಿತಗೊಂಡಿದೆ. ಆದರೆ, ಇದರಿಂದ ನಿರಾಶೆಗೊಳ್ಳಬೇಕಿಲ್ಲ ಎಂದು ಇಸ್ರೋ ಮಾಜಿ ನಿರ್ದೇಶಕ ಡಿ. ಸಸಿಕುಮಾರ್ ಹೇಳಿದ್ದಾರೆ. ಈ ಕುರಿತಂತೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಸಸಿ ಕುಮಾರ್ ಅವರು, ನಾವು ಮೊದಲು ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಿದೆಯೋ ಅಥವಾ ಕ್ರಾಶ್ ಲ್ಯಾಂಡಿಂಗ್ ಆಗಿದೆಯೋ ಎಂಬು ದನ್ನು ತಿಳಿಯಬೇಕು. ನನ್ನ ಅಭಿಪ್ರಾಯ ದಂತೆ ಇದು ಕ್ರಾಶ್ ಲ್ಯಾಂಡಿಂಗ್ ಅಗಿರಲು ಸಾಧ್ಯವಿಲ್ಲ. ಏಕೆಂದರೆ ಚಂದ್ರಯಾನ-2 ಆರ್ಬಿಟರ್ ಮತ್ತು ವಿಕ್ರಮ್ ಲ್ಯಾಂಡರ್ ನಡುವಿನ ಸಂಪರ್ಕ ಇನ್ನೂ ಜೀವಂತ ವಾಗಿದೆ. ಈ ಸಂಪರ್ಕ ಹಾಗೆಯೇ ಇರುವಂತೆ ನಾವು ನೋಡಿಕೊಳ್ಳಬೇಕು. ಈ ಕುರಿತಂತೆ ನಿಯಂತ್ರಣ ಕೊಠಡಿಯಿಂದ ವಿಶ್ಲೇಷಣೆ ಮಾಡಬೇಕು. ಬಳಿಕವಷ್ಟೇ ಈ ಕುರಿತ ಸ್ಪಷ್ಟ ಉತ್ತರ ದೊರೆಯಲಿದೆ ಎಂದರು. ಅಂತೆಯೇ ಪ್ರಸ್ತುತ ಸಂವಹನ ಕಡಿತವಾ ಗಿದ್ದು, ಈ ಕಡಿತದ ಕುರಿತು ವಿಶ್ಲೇಷಣಾ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸಂಪರ್ಕ ಕಡಿತಗೊಂಡಿದ್ದು ಯಾವ ಕಾರಣಕ್ಕೆ ಎಂಬುದನ್ನು ನಾವು ಮೊದಲು ಕಂಡು ಹಿಡಿಯಬೇಕು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಮೃದು ಲ್ಯಾಂಡಿಂಗ್ ಆಗಿದೆಯೋ ಅಥವಾ ಕ್ರಾಶ್ ಲ್ಯಾಂಡಿಂಗ್ ಆಗಿದೆಯೋ ಎಂಬುದನ್ನು ಲ್ಯಾಂಡರ್ ಕಳಿಸಿದ ದತ್ತಾಂಶಗಳ ಅಧ್ಯಯನದಿಂದ ನಾವು ತಿಳಿಯಬೇಕು ಎಂದರು.

 

Translate »