ವನ್ಯಜೀವಿಗಳ ಶಾಪ ತಟ್ಟುವ ಮುನ್ನ ವನ್ಯ ಸಂಪತ್ತಿನ ಮೇಲಿನ ದೌರ್ಜನ್ಯ ತಡೆಯಬೇಕು
ಮೈಸೂರು

ವನ್ಯಜೀವಿಗಳ ಶಾಪ ತಟ್ಟುವ ಮುನ್ನ ವನ್ಯ ಸಂಪತ್ತಿನ ಮೇಲಿನ ದೌರ್ಜನ್ಯ ತಡೆಯಬೇಕು

March 4, 2019

ಮೈಸೂರು: ಮಾನವನಿಂದ ನೋವು ಮತ್ತು ಸಂಕಟ ಅನುಭವಿಸುತ್ತಿರುವ ವನ್ಯಜೀವಿಗಳ ಶಾಪ ನಮ್ಮ ಮಕ್ಕಳಿಗೆ ತಟ್ಟುವ ಮುನ್ನ ವನ್ಯ ಸಂಪತ್ತಿನ ಮೇಲಿನ ದೌರ್ಜನ್ಯ ತಡೆಗಟ್ಟ ಬೇಕೆಂದು ವನ್ಯಜೀವಿ ತಜ್ಞ ಸೇನಾನಿ ಸಲಹೆ ನೀಡಿದ್ದಾರೆ.

ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಭಾನುವಾರ ಅರಣ್ಯ ಇಲಾಖೆ ಆಯೋಜಿಸಿದ್ದ `ವಿಶ್ವ ವನ್ಯಜೀವಿ ದಿನಾಚರಣೆ ಹಾಗೂ ಕಳೆದ ವರ್ಷ ಆನೆ ದಾಳಿಗೆ ತುತ್ತಾಗಿ ಮೃತಪಟ್ಟ ನಾಗರಹೊಳೆ ಸಿಎಫ್ ಮಣಿಕಂದನ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೈಗಾರಿಕಾ ಕ್ರಾಂತಿ ಆರಂಭವಾದ ದಿನದಿಂದ ಅರಣ್ಯ ನಾಶ ವ್ಯಾಪಕವಾಗುತ್ತಿದೆ. ವರ್ಷಕ್ಕೆ 18 ಮಿಲಿ ಯನ್ ಎಕರೆ ಅರಣ್ಯ ನಾಶವಾಗುತ್ತಿದೆ. ಮಾನವ ನಿರ್ಮಿತ ಅಭಿವೃದ್ಧಿ ಕಾರ್ಯಗ ಳಿಂದಾಗಿ ವನ್ಯಸಂಪತ್ತಿನ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿ ನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವನ್ಯಜೀವಿಗಳು ನೋವು ಹಾಗೂ ಸಂಕಟವನ್ನು ತಾಳದೆ ಶಪಿಸುತ್ತವೆ. ಅದರ ಶಾಪ ನಮ್ಮ ಮಕ್ಕಳಿಗೆ ತಟ್ಟುವ ಆತಂಕವಿದೆ ಎಂದು ವಿಷಾದಿಸಿದರು.

ಇತ್ತೀಚಿನ ದಿನಗಳಲ್ಲಿ ನದಿ ಜೋಡ ಣೆಯ ಮಾತು ವ್ಯಾಪಕವಾಗಿ ಕೇಳಿಬರು ತ್ತಿದೆ. 20 ವರ್ಷದ ಹಿಂದೆಯೇ ನದಿ ಜೋಡಣೆ ಮಾತು ಕೇಳಿ ಬಂದಿತ್ತು. ಗಂಗಾ, ಕಾವೇರಿ ಯನ್ನು ಜೋಡಿಸಬೇಕೆಂಬ ಕೂಗು ಕೇಳು ತ್ತಿದೆ. ಪ್ರತಿಯೊಂದು ನದಿಯಲ್ಲಿಯೂ ತನ್ನದೇ ಆದ ಜೀವ ವೈವಿಧ್ಯತೆಯಿರುತ್ತದೆ. ವಿವಿಧ ನದಿಗಳನ್ನು ಜೋಡಿಸಿದಾಗ ವೈವಿಧ್ಯತೆಗಳು ನಾಶವಾಗಿ ಮತ್ತೊಂದು ಸಮಸ್ಯೆ ಸೃಷ್ಟಿಯಾಗುತ್ತದೆ ಎಂದರು.

ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ, ಅರಣ್ಯಗಳಲ್ಲಿ ಮುಂಚೂಣಿ ಸಾಲಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ದೈಹಿಕ ಸಾಮಥ್ರ್ಯ ಚೆನ್ನಾಗಿರಬೇಕು. ಕಾಡಿನಲ್ಲಿ ಹೆಚ್ಚು ಕಾಲ್ನಡಿಗೆಯಲ್ಲಿ ಓಡಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಸ್ಥಳ ಪರಿಚಯವಾಗಿ, ಎಲ್ಲೆಲ್ಲಿ ಹಳ್ಳವಿದೆ, ಕೆರೆ, ರಸ್ತೆಯಿದೆ ಎಂಬ ಮಾಹಿತಿ ಪಡೆಯ ಬಹುದು. ಇದರಿಂದ ಉತ್ತಮವಾಗಿ ಕೆಲಸ ಮಾಡುವುದಕ್ಕೆ ಸಹಕಾರಿಯಾಗಲಿದೆ ಎಂದರು.

ಕಾಡ್ಗಿಚ್ಚು ಸಂಭವಿಸಿದಾಗ ತಕ್ಷಣ ಕಾರ್ಯಾಚರಣೆ ಆರಂಭಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಘಟನೆ ನಡೆದ ಮೊದಲ ಒಂದು ಗಂಟೆಯಲ್ಲಿ ಕಾರ್ಯಾಚರಣೆ ನಡೆಸಿದರೆ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿಸಬಹುದು. ಬೆಂಕಿ ಬಿದ್ದಾಗ ಸಿಬ್ಬಂದಿಗಳಿಗೆ ಏನೂ ತೋಚ ದಂತಾಗುತ್ತದೆ. ಆ ಸಂದರ್ಭದಲ್ಲಿ ಯಾರಾ ದರೂ ಗೈಡ್ ಮಾಡುವ ಅವಶ್ಯಕತೆಯಿದೆ. ವಿವಿಧ ವಿಷಯಗಳಲ್ಲಿ ಪರಿಣತಿ ಹೊಂದಿ ರುವವರು ಸ್ವಯಂ ಸೇವಕರಾಗಿ ಕೆಲಸ ಮಾಡುವುದಕ್ಕೆ ಮುಂದೆ ಬರುತ್ತಾರೆ. ಸಂಘ ಸಂಸ್ಥೆಗಳು, ಸ್ಥಳೀಯ ಗ್ರಾಮಸ್ಥರು, ಸ್ವಯಂ ಸೇವಕರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕಾರ್ಯಾಚರಣೆ ನಡೆಸಬೇಕು. ಬೇಸಿಗೆ ಆರಂಭಕ್ಕೂ ಮುನ್ನವೇ ಮ್ಯಾಪ್ ತಯಾರಿಸಿ ಎಲ್ಲೆಲ್ಲಿ ರಸ್ತೆಯಿದೆ, ನೀರಿದೆ, ಬೇಟೆ ತಡೆ ಶಿಬಿರಗಳಿವೆ ಎನ್ನುವ ಮಾಹಿತಿ ಸಿದ್ಧಪಡಿಸಿಕೊಳ್ಳಬೇಕು. ಗಾಳಿಯ ರಭಸ, ದಿಕ್ಕನ್ನು ನೋಡಿ ಕಾರ್ಯಾಚರಣೆ ನಡೆಸಬೇಕು. ಹಗಲಿನ ವೇಳೆ ಬೆಂಕಿ ನಂದಿ ಸುವ ಕೆಲಸ ಕಷ್ಟವಾಗಲಿದ್ದು, ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಬ ಹುದು. ಸಿಬ್ಬಂದಿಗಳ ಬಳಿ ಮಚ್ಚು, ಕೊಡಲಿ, ಟಾರ್ಚ್ ಕಡ್ಡಾಯವಾಗಿರಬೇಕೆಂದು ಸಲಹೆ ನೀಡಿದರು.

ಸಮುದ್ರ ಮಟ್ಟದಿಂದ 300 ಮೀಟರ್ ಕೆಳಗೆ ಹರಿಯುತ್ತಿರುವ ಕಾವೇರಿ ನದಿ ಯಿಂದ 900 ಮೀಟರ್ ಎತ್ತರ ಪ್ರದೇಶ ದಲ್ಲಿರುವ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ತಂತ್ರಜ್ಞಾನ ನಮ್ಮಲ್ಲಿದೆ. ಈ ನಿಟ್ಟಿನಲ್ಲಿ ಗಾಳಿ ವೇಗ, ದಿಕ್ಕು, ಉಷ್ಣತೆ ಸೇರಿದಂತೆ ವಿವಿಧ ವಿಷಯಗಳಲ್ಲಿ ತಜ್ಞರಾಗಿರುವವರ ಸೇವೆ ಪಡೆದುಕೊಂಡು ಅರಣ್ಯ ಸಂಪತ್ತನ್ನು ರಕ್ಷಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ವನ್ಯ ಜೀವಿ ಸಂರಕ್ಷಣೆ ಕೇವಲ ಬಾಯಿ ಮಾತಿಗೆ ಸೀಮಿತವಾಗದೆ, ಕ್ಷೇತ್ರಕ್ಕಿಳಿದು ಕೆಲಸ ಮಾಡಿ ತೋರಿಸಬೇಕು. ಬೆಂಕಿ ಘಟನೆ ಸಂಭವಿಸಿದಾಗ ಕೌಂಟರ್ ಫೈರ್ ಕೊಡಬೇಡಿ. ಬೇಸಿಗೆಗೂ ಮುನ್ನ ತಮ್ಮ ವಲಯದಲ್ಲಿ ಫೈರ್ ಡ್ರಿಲ್ ಮಾಡುವುದು ಸೂಕ್ತ ಎಂದರು.

ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್ ಮಾತನಾಡಿ, ಕಳೆದ ವರ್ಷ ಕರ್ತವ್ಯದ ವೇಳೆ ಆನೆ ದಾಳಿಗೆ ತುತ್ತಾಗಿ ನಿಧನರಾದ ನಾಗರಹೊಳೆ ಸಿಎಫ್ ಮಣಿಕಂದನ್ ಅವರ ಬದ್ಧತೆ ನಮ್ಮೆಲ್ಲರಿಗೂ ಆದರ್ಶ. ಈ ಹಿಂದೆ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿ ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡಿದ್ದವರಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು. ನಾಗರಹೊಳೆ ಅಭಯಾರಣ್ಯದ ನಿರ್ದೇಶಕ ಹುದ್ದೆಯನ್ನು ಅಲಂಕರಿಸಿ ಹಲವು ಸುಧಾರಣೆ ತಂದಿದ್ದರು. ಖಡಕ್ ಅಧಿಕಾರಿಯಾಗಿದ್ದರೂ ತಳ ಹಂತದ ಸಿಬ್ಬಂದಿಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ವಿಶ್ವ ವನ್ಯಜೀವಿ ದಿನದಂದೇ ತಮ್ಮ ಜೀವವನ್ನು ಅರ್ಪಿಸಿದರು. ಹಿನ್ನೆಲೆಯಲ್ಲಿ ಪ್ರತಿ ವರ್ಷ ಮಾ.3ರಂದು ದಿವಂಗತ ಸಿಎಫ್ ಮಣಕಂದನ್ ಅವರ ಹೆಸರಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಇಲಾಖೆ ವತಿಯಿಂದ ಹಮ್ಮಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

ಡಿಎಸಿಎಫ್ ಸಿದ್ರಾಮಪ್ಪ ಚಳ್ಕಾಪುರೆ ಮಾತನಾಡಿ, ವಿಶ್ವ ವನ್ಯಜೀವಿ ದಿನಾ ಚರಣೆಯನ್ನು ಈ ಬಾರಿ ಜಲದೊಳಗಿನ ಜೀವನ: ಜನರಿಗಾಗಿ ಮತ್ತು ಜಗತ್ತಿಗಾಗಿ ಶೀರ್ಷಿಕೆಯಲ್ಲಿ ಆಚರಿಸಲಾಗುತ್ತಿದೆ. ಭೂಮಿಯಲ್ಲಿರುವ ನೀರಿನಲ್ಲಿ ಬಹು ಪಾಲ ಉಪ್ಪು ನೀರಾಗಿದೆ. ಶೇ.0.1ರಷ್ಟು ಮಾತ್ರ ಶುದ್ಧ ನೀರಿದೆ. ಇದರಲ್ಲಿ ಹಲವು ಜೀವ ವೈವಿಧ್ಯತೆಗಳಿವೆ. ಮಾನವನ ಚಟುವಟಿಕೆಯಿಂದ ನದಿ, ಕೆರೆ ಸೇರಿದಂತೆ ನೀರಿನ ಮೂಲದ ಮೇಲೆ ದೌರ್ಜನ್ಯ ನಡೆಯು ತ್ತಿದೆ. ಒತ್ತಡ ಹೆಚ್ಚಾದಾಗ ಜೀವ ವೈವಿಧ್ಯ ತೆಗೆ ಧÀಕ್ಕೆಯಾಗುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದರು.

ಹುಲಿ ಯೋಜನೆ ನಿರ್ದೇಶಕ ಜಗತ್ ರಾಮ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮ ದಲ್ಲಿ ದಿ.ಮಣಿಕಂದನ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾ ಚರಣೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು. ಸಿಸಿಎಫ್ ಅಂಬಾಡಿ ಮಾಧವ್, ಮೃಗಾಲಯದ ಕಾರ್ಯನಿರ್ವಾ ಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ, ವನ್ಯಜೀವಿ ತಜ್ಞ ಕೃಪಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »