ಕ್ಯಾನ್ಸರ್ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಎನ್‍ಐಇ ಮತ್ತು ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆ ಜಂಟಿಯಾಗಿ ಆಯೋಜಿ ಸಿದ್ದ `ಟೆಕ್‍ನೀಕ್ಸ್ ರನ್’ನಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ ನಾನಾ ಕಡೆಗಳಿಂದ ಆಗಮಿಸಿದ್ದವರು ಓಡಿದರು. 5 ಕಿ.ಮೀ. ಮತ್ತು 10 ಕಿ.ಮೀ. ಓಟದಲ್ಲಿ ವಿವಿಧ ವಯೋಮಾನದ ಪುರುಷರು, ಮಹಿಳೆಯರು, ಯುವಕ, ಯುವತಿಯರು ಪಾಲ್ಗೊಂಡಿದ್ದರು. ಎನ್‍ಐಇ ಕಾಲೇಜು ಆವರಣದಲ್ಲಿ ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆ ಫೌಂಡೇಷನ್‍ನ ವಿ.ಆರ್.ಬಾಲಸುಬ್ರ ಹ್ಮಣ್ಯ ಓಟಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ದರು. ಓಟದಲ್ಲಿ 600ಕ್ಕೂ ಹೆಚ್ಚು ಮಂದಿ ಭಾಗವಹಿ ಸಿದ್ದರು. 5 ಕಿ.ಮೀ. ಓಟ ಎನ್‍ಐಇ ಕಾಲೇಜಿನಿಂದ ಹೊರಟು ಅಶೋಕ ವೃತ್ತ, ಆರ್‍ಟಿಓ ವೃತ್ತ ಮೂಲಕ ಕೆಲ ರಸ್ತೆಗಳನ್ನು ದಾಟಿ ಮತ್ತೆ ಅಶೋಕ ವೃತ್ತದಿಂದ ಕಾಲೇಜು ಆವರಣಕ್ಕೆ ವಾಪಸಾಯಿತು. 10 ಕಿ.ಮೀ. ಓಟವು ಕಾಲೇಜು ಆವರಣದಿಂದ ಉದಯರವಿ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ಕುಕ್ಕರಹಳ್ಳಿ ಕೆರೆ, ನ್ಯೂ ಕಾಂತರಾಜ ಅರಸು ರಸ್ತೆ, ಚಾಮರಾಜಪುರಂ ಮೂಲಕ ಮತ್ತೆ ಕಾಲೇಜು ಆವರಣಕ್ಕೆ ವಾಪಸಾ ಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಅರವಿಂದ ಯಾಡ್‍ವರ್ಡ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಸದಾಶಿವ ಮೂರ್ತಿ, ಸಹಾಯಕ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿ ಕಾರಿ ವನಮಾಲ, ದೈಹಿಕ ಶಿಕ್ಷಣ ನಿರ್ದೇಶಕ ಹೆಚ್. ಎನ್.ಶಂಕರನಾರಾಯಣ, ಸಂಯೋಜಕ ರವಿಕುಮಾರ್
ಬೀರೆನೂರ್ ಇನ್ನಿತರರು ಉಪಸ್ಥಿತರಿದ್ದರು.
ಮೈಸೂರು: ಸಂಬಂಧಿಗಳಲ್ಲಿ ಮದುವೆ ಆಗುವು ದರಿಂದ ಅನುವಂಶಿಕ ಕಾಯಿಲೆಗಳ ಸಂಖ್ಯೆ ಹೆಚ್ಚು ತ್ತಿದ್ದು, ಮೌಢ್ಯ ಮತ್ತು ಆರ್ಥಿಕ ಸಮಸ್ಯೆಗಳಿಂದ ಇಂತಹ ರೋಗಗಳಿಗೆ ತುತ್ತಾಗುವವರ ಪ್ರಮಾಣವು ಹೆಚ್ಚುತ್ತಿದೆ. ಇದರ ಬಗ್ಗೆ ಜನಜಾಗೃತಿ ಮೂಡಿಸಲು ಓಆರ್‍ಡಿಐ (ಆರ್ಗನೈಜೇಷನ್ ಫಾರ್ ರೇರ್ ಡಿಸೀ ಸಸ್ ಇಂಡಿಯಾ) ವತಿಯಿಂದ ರೇಸ್ ಫಾರ್ 7 ಓಟ ನಡೆಸಲಾಯಿತು.
ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ರಾಜವಂಶಸ್ಥ ಯದು ವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಸಿರು ನಿಶಾನೆ ತೋರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿವಿಧ ವಯೋಮಾನದ 700ಕ್ಕೂ ಹೆಚ್ಚು ಮಂದಿ ಓಟದಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಅಪರೂಪದ ಕಾಯಿಲೆಗಳುಳ್ಳವರು ಸಹ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ನಂತರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಿಂದ ಆರಂಭವಾದ 7 ಕಿ.ಮೀ. ಉದ್ದದ ಓಟ ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಕ್ರಾಫರ್ಡ್ ಹಾಲ್, ಮುಡಾ ವೃತ್ತ, ಬನುಮಯ್ಯ ವೃತ್ತ, ಮಹಾ ನಗರಪಾಲಿಕೆ ಕಚೇರಿ ಬಳಿಯಿಂದ ಮತ್ತೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹಿಂತಿರು ಗಿತು. ಓಟದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಪದಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಬಸವನ ಗೌಡಪ್ಪ, ಓಆರ್‍ಡಿಐನ ಮದನ್‍ಕುಮಾರ್, ವಲಯ ಮುಖ್ಯಸ್ಥ ನರಸಿಂಹಮೂರ್ತಿ, ಜೆಎಸ್‍ಎಸ್ ಆಸ್ಪತ್ರೆಯ ಡೆಪ್ಯುಟಿ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಸಿ.ಕೆ.ಘೋರಿ, ಡಾ.ಜಗದೀಶ್, ಡಾ.ದೀಪಾ ಭಟ್ ಇನ್ನಿತರರು ಪಾಲ್ಗೊಂಡಿದ್ದರು.