ವೀರಾಜಪೇಟೆ: ನೆರೆ ಸಂತ್ರಸ್ತರಿಗೆ ನೆರವು
ಕೊಡಗು

ವೀರಾಜಪೇಟೆ: ನೆರೆ ಸಂತ್ರಸ್ತರಿಗೆ ನೆರವು

December 11, 2018

ವಿರಾಜಪೇಟೆ: ವಿರಾಜಪೇಟೆ ಅಖಿಲ ಕೊಡವ ಸಮಾಜ ಮತ್ತು ಅಜ್ಜಿ ಕುಟ್ಟಿರ ಕುಟುಂಬಸ್ಥರು ನೀಡಿದ ರೂ,1 ಲಕ್ಷ ಸಹಾಯಧನ ಹಾಗೂ ಮಂಡೆಪಂಡ ಸುಗುಣ ಮುತ್ತಣ್ಣ ಅವರ ಪುತ್ರಿ ಶಾಂತಲ ಅವರು ನಿರಾಶ್ರಿತರಿಗೆ ನೀಡಿದ ಉಡುಪು ಗಳನ್ನು ಕೊಡಗಿನ ನೆರೆ ಸಂತ್ರಸ್ತ 10 ಕುಟುಂಬ ಗಳಿಗೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತನಾಡಿ, ಸುಮಾರು 60 ವರ್ಷಗಳ ಹಿಂದೆ ಭಾರಿ ಮಳೆಯಾಗಿತ್ತು. ಆನಂತರ ಈ ವರ್ಷ ಸುರಿದ ಮಳೆಯನ್ನು ನಾವುಗಳು ಎಂದು ಕಂಡಿಲ್ಲ. ಆದರೆ ಈ ವರ್ಷ ಪ್ರಕೃತಿ ವಿಕೋಪದಿಂದ ಕೊಡಗಿನಲ್ಲಿ ಮಹಾ ಮಳೆ ಸುರಿದು ಮಡಿಕೇರಿ ಭಾಗದಲ್ಲಿ ಮನೆ ಆಸ್ತಿ ಕಳೆದುಕೊಂಡವರು ಅನೇಕರಿದ್ದಾರೆ. ಆದರೆ ನಾವುಗಳು ಅಜ್ಜಿಕುಟ್ಟಿರ ಕುಟುಂಬದ ದಾನಿಗಳಿಂದ ಪಡೆದ ರೂ,1 ಲಕ್ಷವನ್ನು ಸಹಾಯಧನವಾಗಿ 10 ಮಂದಿಗೆ ನೀಡಲಾಗುತ್ತಿದೆ ಎಂದರು.

ನಿರಾಶ್ರಿತರಾದ ಗರಗಂದೂರು ಶಾಂತಿ ರಾಜ, ಇಗ್ಗೂಡ್ಲು ಕಾವೇರಮ್ಮ, ಗರ್ವಾಲೆಯ ಬಿ.ರಾಣಿ, ಮುವತ್ತೊಕ್ಲು ಚೋಂದಮ್ಮ, ಸೂರ್ಲಬಿಯ ಕುಂಬರ ಗಡಿಗೆಯ ಪಾರ್ವತಿ, ಗರ್ವಾಲೆಯ ತಾಚಮಂಡ ಭಾಗ್ಯವತಿ, ಐಮುಡಿಯಂಡ ಶಾರದ ಸುಬ್ಬಯ್ಯ , ಮೇಗತಾಳುವಿನ ಕನ್ನಿಕಂಡ ಪಾರ್ವತಿ, ಕಾಲೂರು ಕಾರೇರ ಜೋಯಪ್ಪ ಮತ್ತು ಸಿ.ಕೆ.ಪೊನ್ನಪ್ಪ ಅವರುಗಳು ಸಹಾಯಧನ ಪಡೆದು ಕೊಂಡರು. ಬಳಿಕ ಕೆಲವು ನಿರಾಶ್ರಿತರು ಮಾತನಾಡಿ, ಮನೆ ಆಸ್ತಿ ಕಳೆದುಕೊಂಡ ಸಂದರ್ಭ ಸ್ಥಳೀಯ ಗ್ರಾಮ ಪಂಚಾಯಿತಿ ಯಿಂದ ರೂ,3,800 ರಂತೆ ಕೆಲವು ಮನೆ ಗಳಿಗೆ ಪರಿಹಾರ ನೀಡಿದ್ದರು. ನಂತರ ಇದುವರೆಗೂ ಅಧಿಕಾರಿಗಳು- ಜನಪ್ರತಿ ನಿಧಿಗಳು ಯಾವುದೇ ಸಹಾಯ ಮಾಡಿಲ್ಲ ಎಂದು ದೂರಿದರು.

ಈ ಸಂದರ್ಭ ಅಜ್ಜಿಕುಟ್ಟಿರ ಕುಟುಂಬದ ಪ್ರಮುಖರಾದ ಶಾಂತು ಪೂಣಚ್ಚ, ಮಂಡೆ ಪಂಡ ಸುಗುಣ ಮುತ್ತಣ್ಣ ಮಾತನಾಡಿದರು. ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾತನಾಡಿ, ಈ ಹಿಂದೆ ಮಂಡೆಪಂಡ ಸುಗುಣ ಅವರ ಪುತ್ರಿ ಶಾಂತಲ ಅಖಿಲ ಕೊಡವ ಸಮಾಜಕ್ಕೆ ನೀಡಿದ ಬಟ್ಟೆಗಳನ್ನು 30 ಮಂದಿ ನಿರಾ ಶ್ರಿತರಿಗೆ ವಿತರಿಸಿರುವುದಾಗಿ ತಿಳಿಸಿದರು. ಸಭೆಯಲ್ಲಿ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಜಂಟಿ ಕಾರ್ಯದರ್ಶಿ ಅಪ್ಪು ಮಣಿಯಂಡ ತುಳಸಿ, ಅಜ್ಜಿಕುಟ್ಟಿರ ಕೆ.ಅಚ್ಚಯ್ಯ, ಎ.ಟಿ.ಉತ್ತಪ್ಪ, ಮುಂತಾ ದವರು ಉಪಸ್ಥಿತರಿದ್ದರು.

Translate »