ಮೈಸೂರು, ಜ.12(ಆರ್‍ಕೆಬಿ)- ಮೈಸೂರಿನ ಜ್ಯೋತಿನಗರದಲ್ಲಿ ಹೊಂಗೆ ಸಸಿಗಳನ್ನು ನೆಡುವ ಮೂಲಕ ಪರಿಸರ ಸ್ನೇಹಿ ತಂಡದ ಕಾರ್ಯಕರ್ತರು ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾ ಚರಣೆಯನ್ನು ವಿಶಿಷ್ಟವಾಗಿ ಆಚರಿಸಿದರು.
ಮಾಜಿ ಮೇಯರ್ ಸಂದೇಶ್‍ಸ್ವಾಮಿ ಹೊಂಗೆ ಗಿಡಗಳನ್ನು ನೆಟ್ಟು, ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಪ್ರತಿಮ ನಾಯಕ ವಿವೇಕಾನಂದರು, ಕನ್ಯಾಕುಮಾರಿಗೆ ಹೋದರೆ ವಿವೇಕಾನಂದರ ವಿವೇಕ ಸ್ಮಾರಕ, ಅವರು ಬಿಟ್ಟು ಹೋದ ತತ್ವ ಗಳನ್ನು ಕಾಣಬಹುದಾಗಿದೆ ಎಂದರು.
ನಗರಪಾಲಿಕೆ ಸದಸ್ಯರಾದ ಉಷಾ ನಾರಾಯಣ್ ಲೋಲಪ್ಪ ಮಾತನಾಡಿ, ವಿವೇಕಾನಂದರ ಮಾರ್ಗದಲ್ಲಿ ನಾವೆ ಲ್ಲರೂ ನಡೆಯಬೇಕು. ಯುವಜನರು ಉತ್ತಮ ಗುರಿಯೊಂದಿಗೆ ದೇಶದ ಅಭಿ ವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಡಿ.ಲೋಹಿತ್, ಮಧು ಎನ್.ಪೂಜಾರ್, ಜೀವನ್, ನವೀನ್‍ಶೆಟ್ಟಿ, ಚಂದ್ರು ಶಿವಾನಂದ, ರಾಜು, ನಾಗರಾಜು, ಕಿರಣ್, ವೆಂಕಟೇಶ್, ಇನ್ನಿತರರು ಉಪಸ್ಥಿತರಿದ್ದರು.