ಕಿರ್ಲೋಸ್ಕರ್ ಕಂಪನಿಯ ನೌಕರರಿಗೆ ಮತದಾನ ಜಾಗೃತಿ
ಮೈಸೂರು

ಕಿರ್ಲೋಸ್ಕರ್ ಕಂಪನಿಯ ನೌಕರರಿಗೆ ಮತದಾನ ಜಾಗೃತಿ

March 17, 2019

ಮೈಸೂರು: ಮೈಸೂರು ತಾಲೂಕು ಸ್ವೀಪ್ ಸಮಿತಿಯು ಶನಿವಾರ ತಾಲೂಕಿನ ಬೆಳವಾಡಿ ಗ್ರಾಮ ವ್ಯಾಪ್ತಿಯಲ್ಲಿರುವ ಕಿರ್ಲೋಸ್ಕರ್ ಕಂಪನಿಯ ನೌಕರರು ಹಾಗೂ ಸಿಬ್ಬಂದಿಗೆ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಮಂಜುಳಾ ಪಾಟೀಲ್ ಅವರು ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ವಿವಿ ಪ್ಯಾಟ್ ಮತ್ತು ಇ.ವಿ.ಎಂಗಳ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತÀು. ಕಿಲೋ ಸ್ಕರ್ ಕಂಪನಿ ಸುಮಾರು 150ಕ್ಕೂ ಅಧಿಕ ನೌಕರರು ಭಾಗವಹಿಸಿದ್ದರು. ನೌಕರರಿಂದ ಅಣಕು ಮತದಾನ ಮಾಡಿಸಲಾಯಿತು. ಜೊತೆಗೆ ಯಾವ ಚಿಹ್ನೆಗೆ ಮತ ಚಲಾಯಿಸಿದ್ದೇವೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ನೈತಿಕ ಮತದಾನಕ್ಕೆ ಬೆಂಬಲ ನೀಡಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಸಾಗುವುದು ಅನಿ ವಾರ್ಯವಾಗಿದೆ. ಆಗಾಗಿ ಪ್ರತಿಯೊಬ್ಬ ಮತದಾರ ಜಾಗೃತರಾಗಿ ಚುನಾವಣೆಯ ದಿನ ತಮ್ಮ ಕೆಲಸಗಳನ್ನು ಬದಿಗೊತ್ತಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ನೌಕರರಿಗೆ ಜಾಗೃತಿ ಮೂಡಿಸಲಾಯಿತು. ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಕೃಷ್ಣ, ಚುನಾವಣಾ ಸೆಕ್ಟರ್ ಅಧಿಕಾರಿ ಹರೀಶ್, ತಾಲೂಕು ಸಂಯೋಜಕ ಕರೀಗೌಡ ಬೆಳವಾಡಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಕಿರ್ಲೋಸ್ಕರ್ ಕಂಪನಿಯ ಸಿಬ್ಬಂದಿ ಮತ್ತು ಇನ್ನಿತರ
ಅಧಿಕಾರಿಗಳು ಉಪಸ್ಥಿತರಿದ್ದರು.

ಚೆಕ್‍ಪೆÇೀಸ್ಟ್‍ಗಳಲ್ಲಿ ನಾಗರಿಕರಿಗೆ ಮತದಾನದ ಅರಿವು
ಮೈಸೂರು: ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ 2019ರ ಏಪ್ರಿಲ್ 18 ರಂದು ನಡೆಯಲಿರುವ ಮೈಸೂರು ಮತ್ತು ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಇರುವ ಚೆಕ್‍ಪೆÇೀಸ್ಟ್‍ಗಳಲ್ಲಿ ಚುನಾವಣಾ ತಪಾಸಣಾ ಕೇಂದ್ರ(ಎಸ್.ಎಸ್.ಟಿ)ಗಳನ್ನು ತೆರೆಯಲಾಗುತ್ತಿದೆ.

ನೈತಿಕ ಚುನಾವಣಾ ಬೆಂಬಲಿಸಿ ಅಭಿಯಾನ ಕೈಗೊಳ್ಳಲೂ ಚೆಕ್‍ಪೆÇೀಸ್ಟ್‍ಗಳಲ್ಲಿ ಚುನಾವಣೆಯ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ತಂಡಗಳು ರಸ್ತೆಯಲ್ಲಿ ಸಂಚಾರ ಮಾಡುವ ನಾಗರಿಕರಿಗೆ ಮತದಾನದ ಅರಿವು ಮೂಡಿಸಲು ಕ್ರಮವಹಿಸಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ರಸ್ತೆ ಮೂಲಕ ಪ್ರತಿನಿತ್ಯ ವಾಹನ ಸಂಚಾರ ನಡೆಸುವವರೂ 18 ವರ್ಷ ತುಂಬಿ ರುವ ಮತದಾರರ ಪಟ್ಟಿಯಲ್ಲಿ ನೋದಾಯಿಸಿಕೊಂಡಿರುವವರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನದ ಕಡೆ ನಮ್ಮ ನಡೆ, ನಮ್ಮ ಮತ ನಮ್ಮ ಹಕ್ಕು, ಪ್ರಜಾಪ್ರಭುತ್ವದ ಉಳಿವಿಗೆ ಮತ ಚಲಾಯಿಸಿ, ಜಾಗೃತ ಮತದಾರ ಪ್ರಜಾ ಪ್ರಭುತ್ವದ ನೇತಾರ ಹೀಗೆ ಅರಿವು ಮೂಡಿಸುವ ಅಭಿಯಾನವನ್ನು ಕೈಗೊಂಡಿದೆ.

1950 ಸಂಖ್ಯೆಗೆ ಕರೆ ಮಾಡಿ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿ ಯಲ್ಲಿ ಇದೆಯಾ, ತಮ್ಮ ಮತದಾನ ಕೇಂದ್ರ ಹಾಗೂ ಮತದಾರರ ಪಟ್ಟಿಯಲ್ಲಿ ತಮ್ಮ ವಿಳಾಸ, ಹೆಸರುಗಳ ಬಗ್ಗೆ ಪರಿಶೀಲನೆ ಮಾಡಿಕೊಳ್ಳಬಹುದು ಎಂಬ ಮಾಹಿತಿ ಯನ್ನು ನಾಗರಿಕರಿಗೆ ತಿಳಿಸಲಾಗುತ್ತದೆ. ಯಾವುದೇ ಮತದಾರ ಮತದಾನದಿಂದ ಹೊರಗುಳಿ ಬಾರದು, ಮತಚಲಾಯಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ತಪ್ಪದೇ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬೇಕು. ನಿಮ್ಮ ಮತ ಅಮೂಲ್ಯ ಅದನ್ನು ವ್ಯರ್ಥ ಮಾಡ ಬೇಡಿ ಸೂಕ್ತ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯನ್ನು ಆರಿಸಲು ಮತದಾನ ಅಸ್ತ್ರವಾಗಿದೆ.

ಮತದಾನ ಜಾಗೃತಿ ಕವಿಗೋಷ್ಠಿ
ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂವಿಧಾನದ ಆಶಯ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಾರುವುದರೊಂದಿಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮೈಸೂರಿನ ಸ್ಪಂದನಾ ಸಾಂಸ್ಕøತಿಕ ಪರಿಷತ್ತು ಹಾಗೂ ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಸಹಯೋಗದಲ್ಲಿ `ಮತದಾನ ಜಾಗೃತಿ ಕವಿಗೋಷ್ಠಿ’ ಏರ್ಪಡಿಸಲಾಗಿದೆ. ಮೈಸೂರಿನ ಕೆ.ಜಿ.ಕೊಪ್ಪಲಿನಲ್ಲಿರುವ ನೇಗಿಲಯೋಗಿ ಮರಳೇಶ್ವರ ಸೇವಾಭವನದಲ್ಲಿ ಮಾ.23ರಂದು ಸಂಜೆ 4ಕ್ಕೆ ಕವಿಗೋಷ್ಠಿ ನಡೆಯ ಲಿದ್ದು, ಮತದಾನ ಜಾಗೃತಿ ಕುರಿತ ಸ್ವರಚಿತ ಕವನಗಳನ್ನು(20 ಸಾಲು ಮೀರದಂತೆ) ಮಾ.19ರೊಳಗೆ 9880264678ಗೆ ವಾಟ್ಸಾಪ್ ಕಳುಹಿಸುವಂತೆ ಸ್ಪಂದನ ಸಾಂಸ್ಕøತಿಕ ಪರಿಷತ್ತಿನ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »