ಹಕ್ಕು ಚಲಾಯಿಸಿದ ಗಣ್ಯರು..!
ಚಾಮರಾಜನಗರ

ಹಕ್ಕು ಚಲಾಯಿಸಿದ ಗಣ್ಯರು..!

August 1, 2018

ಕೊಳ್ಳೇಗಾಲ; ವಿವಿಧ ವಾರ್ಡ್‍ಗಳಲ್ಲಿ ಆಗಮಿಸಿದ ಗಣ್ಯರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುವ ಮೂಲಕ ಗಮನ ಸೆಳೆದರು. ಜಿಪಿ ಮಲ್ಲಪ್ಪಪುರ ಬಡಾವಣೆಯ ಎಂಸಿಕೆಸಿ ಶಾಲೆಯ ಮತಗಟ್ಟೆ 2ರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ತಮ್ಮ ಹಕ್ಕು ಚಲಾಯಿಸಿದರು.

ತಮ್ಮ ಬೆಂಬಲಿಗರ ಜೊತೆ ಬೆಳಗ್ಗೆ 9.30ರ ಸಮಯದಲ್ಲಿ ಆಗಮಿಸಿದ ಸಚಿವರು ಮತ ಚಲಾಯಿಸಿ ಮುಗುಳುನಗೆ ಬೀರುವ ಮೂಲಕ ಗಮನ ಸೆಳೆದರು. ಮಂಜುನಾಥ ನಗರ ಬಡಾವಣೆಯ ಸರ್ಕಾರಿ ಶಾಲೆಗೆ ಆಗಮಿಸಿದ ಮಾಜಿ ಶಾಸಕ ಜಿ.ಎನ್.ನಂಜುಂಡ ಸ್ವಾಮಿ ಅವರು ತಮ್ಮ ಪತ್ನಿ ಶೋಭರಾಣಿ ಹಾಗೂ ಪುತ್ರ ಲೋಕೇಶ್ ಜೊತೆ ತಮ್ಮ ಹಕ್ಕು ಚಲಾಯಿಸಿದರು. ಮತಗಟ್ಟೆಗೆ ಆಗಮಿಸಿ ಅಲ್ಲಿದ್ದ ನಾಗರಿಕರ ಉಭಯ ಕುಶಲೋಪರಿ ವಿಚಾರಿಸಿದ ಬಳಿಕ ನಂಜುಂಡಸ್ವಾಮಿ ನಸುನಗುತ್ತಲೇ ಮತ ಚಲಾಯಿಸಿದರು. 1ನೇ ವಾರ್ಡ್‍ನಲ್ಲಿ ಆಗಮಿಸಿದ ಚೇತವನದ ಮನೋರಕ್ಖಿತ ಬಂತೇಜಿ ಅವರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದರು.

Translate »