ಹಾಸನ: ನಮ್ಮನ್ನು ಒಡೆದು ಆಳುವ ಶಕ್ತಿಗಳ ವಿರುದ್ಧ ಜಾಗೃತರಾದಾಗ ಮಾತ್ರ ಎಲ್ಲರೂ ಒಂದಾಗಿ ಬಾಳುವ ಆದರ್ಶದ ಕನಸು ನನಸಾಗುತ್ತದೆ ಎಂದು ವಾಗ್ಮಿ ಪ್ರೊ.ಕೃಷ್ಣೇಗೌಡ ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ವತಿಯಿಂದ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ 58ನೇ ಹುಣ ್ಣಮೆ ಕಾರ್ಯಕ್ರಮದಲ್ಲಿ ‘ಒಂದಾಗಿ ಬಾಳು’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಮನುಷ್ಯರ ರೂಪ, ಬಣ್ಣ ಬೇರೆ ಇದ್ದರೂ ನಾವೆಲ್ಲಾ ಮೂಲತಃ ಒಂದೇ ಎಂಬ ಸತ್ಯ ಅರಿಯಬೇಕು ಎಂದರು.
ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥಸಾಧನೆಗಾಗಿ ಜನರಲ್ಲಿ ಭೇದಭಾವ ಹುಟ್ಟು ಹಾಕುತ್ತಿವೆ. ಮನುಷ್ಯರು, ಧರ್ಮ, ಜಾತಿ, ಪಕ್ಷ, ಪಕ್ಷ, ಭಾಷೆ ಮತ್ತಿತರ ಗುಂಪು ಗಳಾಗಿ ಹೊಡೆದಾಡಿಕೊಂಡಾಗ ಲಾಭ ಮಾಡಿಕೊಳ್ಳುವವರು ಯಾರು ಎಂಬು ದನ್ನು ಅರಿತರೆ ನಮ್ಮ ನಡುವಿನ ವೈಷಮ್ಯ ಮರೆತು ಎಲ್ಲರೂ ಒಂದಾಗಿ ಬಾಳಬಹುದು ಎಂದರು. ಹಣ ಗಳಿಕೆಯಷ್ಟೇ ಬದುಕಿನ ಉದ್ದೇಶವಾಗಬಾರದು. ಇಂದು ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಮಕ್ಕಳನ್ನು ಅಂಕಗಳ ಬೆನ್ನು ಹತ್ತುವಂತೆ ಬೆಳೆಸಲಾಗು ತ್ತಿದೆ. ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಬದಲು ವಿದ್ಯಾವಂತರನ್ನಾಗಿ ಮಾಡಲು ಬಯಸುತ್ತಿದ್ದೇವೆ. ಪ್ರಸ್ತುತದಲ್ಲಿ ಸುಸಂಸ್ಕøತ ವ್ಯಕ್ತಿತ್ವ ರೂಪುಗೊಳ್ಳುವ ಶಿಕ್ಷಣದ ಅಗತ್ಯ ಎಂದು ಅಭಿಪ್ರಾಯಪಟ್ಟರು.
ತಮಗೆ ಕನ್ನಡ ಎಲ್ಲವನ್ನೂ ಕೊಟ್ಟಿದೆ. ಇಡೀ ಜಗತ್ತನ್ನು ಸುತ್ತುವ ಅವಕಾಶ, ಅರಿ ಯುವ ಜಾಣ್ಮೆ ಎಲ್ಲವನ್ನೂ ಕನ್ನಡ ಸಾಹಿತ್ಯ ಕಲ್ಪಿಸಿದೆ. ಕನ್ನಡದ ಕಣ ್ಣನಿಂದಲೇ ಇಡೀ ಜಗತ್ತನ್ನು ಅರಿಯುವ ಸಾಮಥ್ರ್ಯ ಬರುವುದಕ್ಕೆ ಕುವೆಂಪು, ದ.ರಾ. ಬೇಂದ್ರೆ, ಬಿಎಂಶ್ರೀ, ಮಾಸ್ತಿ ಮತ್ತಿತರ ಕನ್ನಡ ಸಾಹಿತಿಗಳು ಕಾರಣ. ಆದ್ದರಿಂದ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಬೇಕು ಎಂದು ಇದೇ ವೇಳೆ ಸಲಹೆ ನೀಡಿದರು.
ಸಮಾರಂಭ ಉದ್ಘಾಟಿಸಿದ ಆದಿಚುಂಚನ ಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಆಶೀ ರ್ವಚನ ನೀಡಿ, ಶುದ್ಧ ಮನಸ್ಸಿನಿಂದ ಸಮಾಜ ದೊಂದಿಗೆ ಒಡನಾಟ ಇಟ್ಟುಕೊಂಡರೆ ಎಲ್ಲರೂ ಒಂದಾಗಿ ಬಾಳುವ ಕನಸು ಸಾಕಾರ ಗೊಳ್ಳುತ್ತದೆ. ದಾರ್ಶನಿಕರೆಲ್ಲರೂ ಜನರಿಗೆ ಒಂದಾಗಿ ಬಾಳಿ ಎಂಬ ಉಪದೇಶ ನೀಡಿ ದ್ದಾರೆಯೇ ಹೊರತು ಪ್ರತ್ಯೇಕಗೊಳಿಸುವ ಮಾತುಗಳನ್ನಾಡಿಲ್ಲ. ಇದನ್ನು ಪ್ರತಿ ಯೊಬ್ಬರೂ ಅರಿಯಬೇಕು ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಹುಣ ್ಣಮೆ ಕಾರ್ಯಕ್ರಮಗಳ ಪ್ರಧಾನ ಸಂಚಾಲಕ ಹೆಚ್.ಬಿ.ಮದನಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಮತ್ತು ಶ್ರೀಮಠದ ವ್ಯವಸ್ಥಾಪಕ ಹೆಚ್.ಕೆ. ಚಂದ್ರಶೇಖರ್ ಉಪಸ್ಥಿತರಿದ್ದರು.