ಸಿಐಎಸ್‍ಎಫ್ ಸುವರ್ಣ ಮಹೋತ್ಸವ  ಅಂಗವಾಗಿ ಸಿಬ್ಬಂದಿಯಿಂದ ಸಂಭ್ರಮದ ನಡಿಗೆ
ಮೈಸೂರು

ಸಿಐಎಸ್‍ಎಫ್ ಸುವರ್ಣ ಮಹೋತ್ಸವ ಅಂಗವಾಗಿ ಸಿಬ್ಬಂದಿಯಿಂದ ಸಂಭ್ರಮದ ನಡಿಗೆ

January 14, 2019

ಮೈಸೂರು: `ನಾವು ದೈಹಿಕವಾಗಿ ಸದೃಢರಾಗಿದ್ದರೆ, ಭಾರತವೂ ಸದೃಢವಾಗಿರುತ್ತದೆ’ ಎಂಬ ಸಂದೇಶ ದೊಂದಿಗೆ ಸಿಐಎಸ್‍ಎಫ್ (ಸೆಂಟ್ರಲ್ ಇಂಡ ಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್)ನ ನೂರಾರು ಸಿಬ್ಬಂದಿ ಭಾನುವಾರ ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಆರ್‍ಬಿಐ ನೋಟು ಮುದ್ರಣಾಲಯ ಘಟಕದ ಬಳಿ ವಾಕಥಾನ್ (ನಡಿಗೆ) ಕೈಗೊಂಡರು.

ಸಿಐಎಸ್‍ಎಫ್‍ನ ಸಂಸ್ಥಾಪನಾ ದಿನ ಹಾಗೂ 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮಾಚರಣೆ ಅಂಗ ವಾಗಿ ಏರ್ಪಡಿಸಿದ್ದ ನಡಿಗೆ ಕಾರ್ಯಕ್ರಮ ದಲ್ಲಿ ಮೈಸೂರಿನ ಸಿಐಎಸ್‍ಎಫ್‍ನ ಬಿಆರ್ ಬಿಎನ್‍ಎಂಪಿಎಲ್ (ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣಾಲಯ ಪ್ರೈವೇಟ್ ಲಿಮಿಟೆಡ್), ಬಿಎನ್‍ಪಿಎಂ (ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ.), (ಆರ್‍ಎಂಪಿ) ರೇರ್ ಮೆಟಿರಿಯಲ್ಸ್ ಪ್ಲಾಂಟ್ ಮತ್ತು ಸಿಐಎಸ್‍ಎಫ್ ಇನ್ಫೋಸಿಸ್)ನ ನಾಲ್ಕು ಘಟಕಗಳ ನೂರಾರು ಸಿಬ್ಬಂದಿ ನಡಿಗೆ ಯಲ್ಲಿ ಪಾಲ್ಗೊಂಡಿದ್ದರು.

ಕೆಆರ್‍ಎಸ್ ರಸ್ತೆಯ ಆರ್‍ಬಿಐ ನೋಟು ಮುದ್ರಣಾಲಯ ಘಟಕದ 2ನೇ ದ್ವಾರದ ಬಳಿಯಿಂದ ಆರಂಭವಾದ ನಡಿಗೆ ಹೆಬ್ಬಾಳ, ಮೇಟಗಳ್ಳಿ ರಸ್ತೆಗಳ ಮೂಲಕ ಮತ್ತೆ 1ನೇ ದ್ವಾರದ ಬಳಿ ಬಂದು ತಲುಪಿ ದರು. ಭಾರತೀಯ ನೋಟು ಮುದ್ರ ಣಾಲಯ ಮೈಸೂರು ವಿಭಾಗದ ಡೆಪ್ಯುಟಿ ಕಮಾಂಡೆಂಟ್ ಮಂಜಿತ್‍ಕುಮಾರ್, ಅಸಿ ಸ್ಟೆಂಟ್ ಕಮಾಂಡೆಂಟ್ ಸಂಜಯ್ ಕುಮಾರ್, ಭಾರತೀಯ ನೋಟ್ ಪೇಪರ್ ಮಿಲ್‍ನ ಅಸಿಸ್ಟೆಂಟ್ ಕಮಾಂ ಡೆಂಟ್ ಡಿ.ಡೇವಿಡ್, ಎ.ಎನ್.ಉತ್ತಪ್ಪ ಇನ್ನಿತರರು ಉಪಸ್ಥಿತರಿದ್ದರು.

Translate »