ಮತ್ತದೇ ‘ಮಾದರಿ’ ವಂಚನೆ  40 ಗ್ರಾಂ ಚಿನ್ನ ಕಳೆದುಕೊಂಡ ವೃದ್ಧ!
ಮೈಸೂರು

ಮತ್ತದೇ ‘ಮಾದರಿ’ ವಂಚನೆ 40 ಗ್ರಾಂ ಚಿನ್ನ ಕಳೆದುಕೊಂಡ ವೃದ್ಧ!

January 14, 2019

ಮೈಸೂರು: ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿ ಎಂದು ನಂಬಿಸಿ, ವ್ಯಕ್ತಿಯೋರ್ವನನ್ನು ಹಾಡಹಗಲೇ ವಂಚಿಸಿ ಚಿನ್ನಾಭರಣ ದೋಚಿರುವ ಘಟನೆ ಸಿದ್ದಾರ್ಥ ನಗರದಲ್ಲಿ ನಡೆದಿದೆ.

ಸಿದ್ದಾರ್ಥನಗರ ನಿವಾಸಿ ಮಹದೇವ್(62) ಚಿನ್ನಾಭರಣ ಕಳೆದುಕೊಂಡವರು. ಇವರು ಜ.12 ರಂದು ಬೆಳಿಗ್ಗೆ ಸಿದ್ದಾರ್ಥ ನಗರದ ವಿನಯ ಮಾರ್ಗದ ಕಾಪೆರ್Ç ರೇಷನ್ ಬ್ಯಾಂಕ್‍ನ ಮುಂಭಾಗ ವಾಕಿಂಗ್ ಹೋಗುವಾಗ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ‘ಸರ್ ನೀವು ಈ ರೀತಿ ಚಿನ್ನ ಹಾಕಿಕೊಂಡು ಓಡಾಡಬಾರದು, ಚಿನ್ನಕ್ಕಾಗಿ ಕೊಲೆ ಮಾಡುತ್ತಾರೆ. ನಾನು ಕ್ರೈಂ ಬ್ರಾಂಚ್ ಪೆÇಲೀಸ್’ ಎಂದು ಹಿಂದಿಯಲ್ಲಿ ಹೇಳಿ, ನಕಲಿ ಗುರುತಿನ ಚೀಟಿ ತೋರಿಸಿ ನಂಬಿಸಿದ್ದಾನೆ. ಬಳಿಕ, ‘ನಿಮ್ಮ ಬಳಿ ಇರುವ ಚಿನ್ನಾಭರಣಗಳನ್ನು ಖರ್ಚಿಫ್‍ನಲ್ಲಿ ಹಾಕಿಕೊಂಡು ಹೋಗಿ’ ಎಂದು ಹೇಳಿದ್ದಾನೆ.

ಇದನ್ನು ನಂಬಿದ ಮಹದೇವ್ ತಮ್ಮ ಬಳಿ ಇದ್ದ 15ಗ್ರಾಂಗಳ ಒಂದು ಚಿನ್ನದ ಸರ, 8, 14 ಮತ್ತು 3ಗ್ರಾಂನ ಮೂರು ಉಂಗುರಗಳನ್ನು ತೆಗೆದು ವಂಚಕನ ಕೈಯಲ್ಲಿದ್ದ ಖರ್ಚಿಫ್‍ನಲ್ಲಿ ಹಾಕಿದ್ದಾರೆ. ಖರ್ಚಿಫ್ ಸುತ್ತಿ ಗಂಟು ಕಟ್ಟುವ ನಾಟಕ ವಾಡಿದ ವಂಚಕ ಒಂದು ನಿಮಿಷದ ನಂತರ ವಾಪಸ್ಸ್ ಕೊಟ್ಟು ಇದನ್ನು ಕೈಯಲ್ಲಿ ಹುಷಾರಾಗಿ ಹಿಡಿದುಕೊಂಡು ಹೋಗಿ ಎಂದು ಹೇಳಿ ಖಾಲಿ ಖರ್ಚಿಫ್ ನೀಡಿ ಜಾಗಖಾಲಿ ಮಾಡಿದ್ದಾನೆ. ಈ ಸಂಬಂಧ ನಜರ್‍ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »