ಮೈಸೂರು:ಮೈಸೂರು-ಟಿ.ನರಸೀಪುರ ರಸ್ತೆಯ ವರಕೋಡು ಗೇಟ್ ಬಳಿ ಭಾನುವಾರ ಮಧ್ಯಾಹ್ನ ಕಬ್ಬಿನ ಲಾರಿಯೊಂದು ಮಗುಚಿ ಬಿದ್ದಿದೆ.
ಸುದೈವವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ. ಶನಿವಾರ ಇದೇ ಸ್ಥಳದಲ್ಲಿ ಲಾರಿ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 10 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಅದೇ ಸ್ಥಳದಲ್ಲಿ ಕಬ್ಬಿನ ಲಾರಿ ಮಗುಚಿ ಬಿದ್ದಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ. ಆದರೆ, ಭಾನುವಾರದ ಅಪಘಾತ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.