ಸಾಹಸಸಿಂಹ ವಿಷ್ಣುವರ್ಧನ್ 10ನೇ ಪುಣ್ಯಸ್ಮರಣೆ
ಮೈಸೂರು

ಸಾಹಸಸಿಂಹ ವಿಷ್ಣುವರ್ಧನ್ 10ನೇ ಪುಣ್ಯಸ್ಮರಣೆ

January 14, 2019

ಮೈಸೂರು:ಸುಂದರ ಇಳಿ ಸಂಜೆಯಲಿ ಸಿಂಗಾರಗೊಂಡಿದ್ದ ವೇದಿಕೆ ಯಲ್ಲಿ ಡಾ.ವಿಷ್ಣುವರ್ಧನ್ ಅಭಿನಯದ ಜನಪ್ರಿಯ ಸುಮಧುರ ಕನ್ನಡ ಚಿತ್ರಗೀತೆಗಳ ಝೇಂಕಾರ ಮತ್ತು ಹಾಸ್ಯ ಕಲಾವಿದರ ಮೋಡಿ ಕಲಾರಸಿಕರ ಮನಗೆದ್ದಿತು.

ಮೈಸೂರಿನ ಅಗ್ರಹಾರ ವೃತ್ತದಲ್ಲಿ ಪಾತಿ ಫೌಂಡೇಶನ್ ವತಿಯಿಂದ ಸಾಹಸಸಿಂಹ ವಿಷ್ಣುವರ್ಧನ್ ಅವರ 10ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸ ಲಾಗಿದ್ದ ಸಂಗೀತ ರಸಸಂಜೆ ಕಾರ್ಯಕ್ರಮ ದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ತುಂಬಿದ್ದ ಪ್ರೇಕ್ಷಕರಿಂದ ಹಬ್ಬಿದ ವಿಷ್ಣು ಅಭಿಮಾನ.

ಮೊದಲಿಗೆ ಗಾಯಕರಾದ ಶ್ರೀನಿವಾಸ್, ಚಂದನ ಶ್ರೀನಿವಾಸ್, ರಮೇಶ್ ಏಕದಂತ ಚಿತ್ರದ ‘ಏಕದಂತ ಕರುಣಾಮಯಿ’ ಹಾಡನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕದಂಬ ಚಿತ್ರದ ‘ಪಂಚ ಕೋಟಿ ಕನ್ನಡಿಗರೇ ನಿಮಗೆ ನಮಸ್ಕಾರ’, ಕಿಲಾಡಿ ಗಳು ಚಿತ್ರದ ‘ಕಾಲ ಮತ್ತೊಮ್ಮೆ ನಮಗಾಗಿ ಬಂತು’, ಜಯಸಿಂಹ ಚಿತ್ರದ ‘ತಣ್ಣನೆ ಗಾಳಿ ಕಾಡೆಲ್ಲ ಅಲೆದು’, ದಾದಾ ಚಿತ್ರದ ‘ಈ ಮೋಸ ವಂಚನೆ ಕಂಡು ಈ ವ್ಯಕ್ತಿ ಹುಟ್ಟಿಹನು’, ‘ನನ್ನ ಮನದಲಿ ಆತುರ’ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ನಂತರ ವೇದಿಕೆಗೆ ಆಗಮಿಸಿದ ಜೂನಿ ಯರ್ ವಿಷ್ಣುವರ್ಧನ್ ಹೃದಯ ಗೀತೆ ‘ಯುಗ ಯುಗಗಳೆ ಸಾಗಲಿ ನಮ್ಮ ಪ್ರೇಮ ಶಾಶ್ವತ’, ಹಾಡನ್ನು ಹಾಡಿದರೆ, ಯಜ ಮಾನ ಚಿತ್ರದ ‘ಪ್ರೇಮ ಚಂದ್ರಮ ಕೈಗೆ ಸಿಗುವುದೆ’ ಹಾಡಿಗೆ ವಿಷ್ಣುವರ್ಧನ್ ಶೈಲಿ ಯಲ್ಲಿ ಅಭಿನಯಿಸಿ ನೆರೆದಿದ್ದವರನ್ನು ರಂಜಿಸಿ, ಶಿಳ್ಳೆ ಚಪ್ಪಾಳೆ ಗಿಟ್ಟಿಸಿದರು. ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥ ಸಾರಥಿ ಜಿಮ್ಮಿಗಲ್ಲು ಚಿತ್ರದ ‘ತುತ್ತು ಅನ್ನ ತಿನ್ನೋಕೆ’ ಹಾಡನ್ನು ಹಾಡಿ ಅಭಿಮಾನಿ ಗಳನ್ನು ರಂಜಿಸಿದರು.

ಬಳಿಕ ಕಾರ್ಯಕ್ರಮವನ್ನು ಉದ್ಘಾಟಿ ಸಿದ ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಕನ್ನಡ ಚಿತ್ರ ರಂಗಕ್ಕೆ ವಿಷ್ಣು ವರ್ಧನ್ ಅಪಾರÀ ಕೊಡುಗೆ ನೀಡಿದ್ದಾರೆ. ಅವರನ್ನು ಸ್ಮರಿಸುವುದು ಅಭಿಮಾನಿ ಗಳಾದ ನಮ್ಮೆಲ್ಲರ ಕರ್ತವ್ಯ. ಕನ್ನಡ ಚಿತ್ರರಂಗ ಎಂದೂ ಮರೆಯದ ಮೇರು ನಟ ಎಂದು ಗುಣಗಾನ ಮಾಡಿದರು.

ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಸಾಹಸಸಿಂಹ ಎಂದು ಅಭಿಮಾನಿಗಳು ಅಭಿಮಾನದಿಂದ ಬಿರುದು ನೀಡಿದ್ದಾರೆ. ಆದರೆ, ನಿಜ ಜೀವನದಲ್ಲಿ ಅವರು, ಪುಣ್ಯಕೋಟಿ ಗೋವಿನಂತಹ ಮೃದು ಹೃದಯ ಅವರಲ್ಲಿತ್ತು. ಅಭಿಮಾನಿಗಳನ್ನು ಕಂಡರೆ ತುಂಬಾ ವಾತ್ಸಲ್ಯದಿಂದ ಕಾಣುತ್ತಿದ್ದರು. ಅವರೊಂದಿಗಿನ ನನ್ನ ಒಡನಾಟ ಆವಿಸ್ಮರಣಿಯವಾಗಿದೆ. ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆಯನ್ನು ನೀಡಿರುವ ಅವರಿಗೆ ಸರ್ಕಾರ ಗೌರವ ಸಲ್ಲಿಸಬೇಕು. ಮೈಸೂರಿನಲ್ಲಿಯೇ ಅವರ ಸ್ಮಾರಕವಾಗ ಬೇಕು ಎಂದರು.

ಮೇಲುಕೋಟೆ ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಉದ್ಯಮಿ ಎಂ.ಮಹೇಶ್ ಶೆಣೈ, ನಗರಪಾಲಿಕೆ ಸದಸ್ಯ ಲೋಕೇಶ್ ಪಿಯಾ, ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಚಲನಚಿತ್ರ ನಿರ್ಮಾಪಕ ಶಿವಾಜಿ, ಮೈಕ್ ಚಂದ್ರು, ಸಮೀ ಉಲ್ಲಾ, ನವೀನ್ ಕುಮಾರ್, ಸುರೇಶ್, ಮದನ್ ಕುಮಾರ್, ನೀಲ ಕಂಠ ಉಪಸ್ಥಿತರಿದ್ದರು.

Translate »