ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ರೂಪಾ ಅಯ್ಯರ್ ನಿರ್ಧಾರ
ಮೈಸೂರು

ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ರೂಪಾ ಅಯ್ಯರ್ ನಿರ್ಧಾರ

January 14, 2019

ಮೈಸೂರು: ಮೈಸೂರು, ಬೆಂಗಳೂರು ಅಥವಾ ಮಂಗಳೂರು ಲೋಕಸಭಾ ಕ್ಷೇತ್ರ ದಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಚಿತ್ರ ನಿರ್ದೇಶಕಿ ರೂಪಾಅಯ್ಯರ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಎಲ್ಲ ಪಕ್ಷದ ವರೂ ಆಹ್ವಾನ ನೀಡಿದ್ದಾರೆ. ಎಲ್ಲ ಪಕ್ಷದ ವರೊಂದಿಗೂ ಸಂಪರ್ಕದಲ್ಲಿರುವ ನಾನು ಮಾತುಕತೆ ನಡೆಸಿದ್ದೇನೆ. ಆದರೆ ಯಾವ ಪಕ್ಷದಿಂದ ಸ್ಪರ್ಧೆ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಆದರೆ ಸಿದ್ದತೆ ಮಾಡಿಕೊಳ್ಳು ತ್ತಿದ್ದೇನೆ ಎಂದು ಹೇಳಿದರು.

ಮೈಸೂರು ಕೆ.ಆರ್.ಕ್ಷೇತ್ರದಿಂದ ಸ್ಪರ್ಧಿ ಸಲು ಬಿಜೆಪಿ ಆಕಾಂಕ್ಷಿಯಾಗಿದ್ದ ರೂಪಾ ಅಯ್ಯರ್ ಕೊನೆ ಗಳಿಗೆಯಲ್ಲಿ ಟಿಕೆಟ್ ವಂಚಿತರಾಗಿ ದ್ದರು. ಇದೀಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ನಾನೇ ಸಮರ್ಥ ಅಭ್ಯರ್ಥಿ:
ಮಾಜಿ ಸಂಸದ ವಿಜಯಶಂಕರ್ ಹೇಳಿಕೆ
ಮೈಸೂರು: ಮೈಸೂರು ಜಿಲ್ಲೆಯ ಪಕ್ಷ ರಾಜಕಾರಣ ಮತ್ತು ವ್ಯಕ್ತಿ ರಾಜಕಾರಣದಲ್ಲಿ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ನಾನೇ ಸಮರ್ಥ ಅಭ್ಯರ್ಥಿ ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಸಿ.ವಿಜಯಶಂಕರ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಈ ಕ್ಷೇತ್ರದಲ್ಲಿ ಟಿಕೆಟ್ ಕೇಳುವುದ ರಲ್ಲಿ ತಪ್ಪಿಲ್ಲ. ಆದರೆ ಜಿಲ್ಲೆಯಲ್ಲಿ ಜೆಡಿಎಸ್ ಒಮ್ಮೆಯೂ ಗೆಲುವು ಸಾಧಿಸಿಲ್ಲ. ಬಿಜೆಪಿ ಮೂರು ಬಾರಿ ಗೆದ್ದಿದ್ದು ಬಿಟ್ಟರೆ ಉಳಿದ ಅವದಿಯಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿಯೇ ಸಂಸದರಾಗಿದ್ದಾರೆ. ಬಿಜೆಪಿ ಗೆಲುವು ಸಾಧಿಸಿದ 3 ಬಾರಿಯಲ್ಲಿ ಎರಡು ಬಾರಿ ನಾನೇ ಸಂಸದನಾಗಿ ಆಯ್ಕೆಯಾಗಿದ್ದೇನೆ. ಆದ್ದರಿಂದ ಕಾಂಗ್ರೆಸ್‍ನಲ್ಲಿರುವ ನಾನೇ ಎಲ್ಲಾ ಆಕಾಂಕ್ಷಿಗಳಿಗಿಂತ ಸೂಕ್ತ, ಸಮರ್ಥ ಅಭ್ಯರ್ಥಿ ಎಂದು ಅವರು ಸ್ಪಷ್ಪಪಡಿಸಿದರು.
ಈಗಾಗಲೇ ಎರಡೂ ಪಕ್ಷದ ಹಿರಿಯರು ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರೂ ಮಾತು ಕೊಟ್ಟಂತೆ ನನಗೆ ಅವಕಾಶ ಕಲ್ಪಿಸಿಕೊಡುತ್ತಾರೆ. ಚುನಾವಣೆ ಸಮೀಪಿಸುತ್ತಿದ್ದು, ಮಾರ್ಚ್ ಮೊದಲ ವಾರ ಚುನಾವಣಾ ಆಯೋಗದ ಅಧಿ ಸೂಚನೆ ಹೊರಬೀಳುವ ಸಾಧ್ಯತೆಗಳಿವೆ. ಅಷ್ಟರಲ್ಲಿ ನಾವು ಎಲ್ಲ ಸಿದ್ಧತೆ ಮಾಡಿಕೊಳ್ಳ ಬೇಕಾಗಿದೆ ಎಂದು ಹೇಳಿದರು.

Translate »