ಮೈಸೂರು: ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್(ಸಿವಿಲ್) ಹುದ್ದೆಗಳ ನೇಮಕಾತಿ ಸಂಬಂಧ ಮೈಸೂರು ನಗರದಲ್ಲಿ ಭಾನುವಾರ ಲಿಖಿತ ಪರೀಕ್ಷೆ ನಡೆಯಿತು.
ನಗರದ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 3989 ಅಭ್ಯರ್ಥಿಗಳು ಹಾಜರಾಗ ಬೇಕಿದ್ದು, ಬೆಳಗಿನ ಲಿಖಿತ ಪರೀಕ್ಷೆಗೆ 3653 ಮಂದಿ ಹಾಜರಾಗಿದ್ದು, 336 ಮಂದಿ ಮಾತ್ರ ಗೈರು ಹಾಜರಾಗಿದ್ದರು. ಮಧ್ಯಾಹ್ನ ನಡೆದ ಪರೀಕ್ಷೆಯಲ್ಲಿ 3602 ಮಂದಿ ಹಾಜರಾಗಿದ್ದರು. 387 ಮಂದಿ ಗೈರು ಹಾಜರಾದರು. ಕುವೆಂಪುನಗರದ ಜ್ಞಾನಗಂಗಾ ವಿದ್ಯಾಪೀಠ, ನಂಜು ಮಳಿಗೆಯ ಗೋಪಾಲಸ್ವಾಮಿ ಶಿಶುವಿಹಾರ, ವಿಜಯ ನಗರ 2 ನೇ ಹಂತದಲ್ಲಿರುವ ಸದ್ವಿದ್ಯಾ ಸೆಮಿ ರೆಸಿಡೆನ್ಷಿಯಲ್ ಕಾಲೇಜು, ಜಯಲಕ್ಷ್ಮೀಪುರಂ ಮಹಾಜನ ಪಿಯು ಕಾಲೇಜು, ಮಹಾಜನ ಪ್ರಥಮ ದರ್ಜೆ ಕಾಲೇಜು, ಪಡುವಾರ ಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಿತು. ಪರೀಕ್ಷಾ ಕೇಂದ್ರದ ಸುತ್ತ ಬಿಗಿ ಪೆÇಲೀಸ್ ಬಂದೋಬಸ್ತ್ ವಹಿಸಲಾಗಿತು.