ಮೈಸೂರಲ್ಲಿ ಕಿಡ್ನಿ ಆರೋಗ್ಯಕ್ಕಾಗಿ ನಡಿಗೆ
ಮೈಸೂರು

ಮೈಸೂರಲ್ಲಿ ಕಿಡ್ನಿ ಆರೋಗ್ಯಕ್ಕಾಗಿ ನಡಿಗೆ

March 15, 2019

ಮೈಸೂರು: ವಿಶ್ವ ಕಿಡ್ನಿ ದಿನದ ಅಂಗವಾಗಿ ಮೈಸೂರಿನಲ್ಲಿ ಸಿಗ್ಮಾ ಆಸ್ಪತ್ರೆ ಮತ್ತು ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆ ಗುರುವಾರ ಪ್ರತ್ಯೇಕ ವಾಕಥಾನ್ ಏರ್ಪಡಿದ್ದವು.

ಸಿಗ್ಮಾ ಆಸ್ಪತ್ರೆ: ಸಿಗ್ಮಾ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ, ಅಪೋಲೋ ಬಿಜಿಎಸ್ ನರ್ಸಿಂಗ್ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಮೈಸೂ ರಿನ ಸರಸ್ವತಿಪುರಂ ಸಂಜೀವಿನಿ ಉದ್ಯಾನವನದಿಂದ ನಡಿಗೆ ಆರಂಭಿಸಿದರು. ವಿಶ್ವಶಾಂತಿ ಸಂಸ್ಥೆ ಟ್ರಸ್ಟ್ ಅಧ್ಯಕ್ಷ ಡಾ.ಮೂರ್ತಿ ನಡಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ನಡಿಗೆ ವಿಶ್ವ ಮಾನವ ಜೋಡಿ ರಸ್ತೆ, ನ್ಯೂ ಕಾಂತರಾಜ ಅರಸು ರಸ್ತ್ರೆ, ಕಾಮಾಕ್ಷಿ ಆಸ್ಪತ್ರೆ ರಸ್ತೆ ಮೂಲಕ ಸಿಗ್ಮಾ ಆಸ್ಪತ್ರೆ ತಲುಪಿದರು.

ಉದ್ದಕ್ಕೂ ಕಿಡ್ನಿ ಉಳಿಸಿ- ಜೀವ ಉಳಿಸಿ, ಕಿಡ್ನಿ ಆರೋಗ್ಯ-ನಿಮ್ಮ ಆರೋಗ್ಯ, ಜಂಕ್‍ಫುಡ್, ಧೂಮ ಪಾನ, ಮದ್ಯಪಾನ ಬಿಡಿ- ಕಿಡ್ನಿ ರಕ್ಷಿಸಿಕೊಳ್ಳಿ ಎಂಬಿ ತ್ಯಾದಿ ಘೋಷವಾಕ್ಯಗಳುಳ್ಳ ಫಲಕಗಳನ್ನು ಪ್ರದರ್ಶಿಸಿದರು.

ಸಿಗ್ಮಾ ಆಸ್ಪತ್ರೆಯ ಮೂತ್ರ ಶಾಸ್ತ್ರಜ್ಞ ಡಾ.ಮಾದಪ್ಪ ಮಾತನಾಡಿ, ಮಾನವನ ಪ್ರಮುಖ ಅಂಗವಾದ ಕಿಡ್ನಿ ಉಳಿಸಲು ಹಾಗೂ ಕಿಡ್ನಿ ಕಾಯಿಲೆ ತಪ್ಪಿಸಲು ಅಗತ್ಯ ಮುಂಜಾಗ್ರತೆ ಅಗತ್ಯ. ಒಮ್ಮೆ ಕಿಡ್ನಿ ವಿಫಲವಾದರೆ ಕಷ್ಟ. ಹಾಗಾಗಿ ಕಿಡ್ನಿಯನ್ನು ಆರೋಗ್ಯಕರವಾಗಿಟ್ಟುಕೊಳ್ಳುವ ಕುರಿತು ಜನಜಾಗೃತಿಗಾಗಿ ನಡಿಗೆ ನಡೆಸಿದ್ದಾಗಿ ತಿಳಿಸಿದರು.
ಆಸ್ಪತ್ರೆಯ ನೆಫ್ರಾಲಜಿಸ್ಟ್ ಬಿಪಿನ್ ಕಾವೇರಪ್ಪ, ಮೆಡಿಕಲ್ ಡೈರೆಕ್ಟರ್ ಜ್ಞಾನಶಂಕರ್, ಡಾ.ರಾಜೇಶ್ವರಿ ಮಾದಪ್ಪ, ಡಾ.ಸಿದ್ದೇಶ್ ಇನ್ನಿತರರು ಉಪಸ್ಥಿತರಿದ್ದರು.

ಕ್ಲಿಯರ್‍ಮೆಡಿ ರೇಡಿಯಂಟ್ ಆಸ್ಪತ್ರೆ: ಮೈಸೂರಿನ ವಿಜಯನಗರ 3ನೇ ಹಂತದ ಕ್ಲಿಯರ್‍ಮೆಡಿ ರೇಡಿ ಯಂಟ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ನಟರಾಜ ನರ್ಸಿಂಗ್ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಕಿಡ್ನಿ ಆರೋಗ್ಯ ಕುರಿತು ಜನ ಜಾಗೃತಿಗಾಗಿ ವಾಕಥಾನ್ ನಡೆಸಿದರು.

ಆಸ್ಪತ್ರೆ ಆವರಣದಿಂದ ಹೊರಟ ವಾಕಥಾನ್‍ಗೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ.ಸಿ.ಪಿ.ನಂಜರಾಜ್ ಚಾಲನೆ ನೀಡಿ ದರು. ಅಲ್ಲಿಂದ ಹೊರಟ ನಡಿಗೆ ರಿಂಗ್‍ರಸ್ತೆ ಬಳಸಿ ಮತ್ತೆ ಆಸ್ಪತ್ರೆ ಆವರಣಕ್ಕೆ ಬಂದು ತಲುಪಿತು.

ವಾಕಥಾನ್ ವೇಳೆ ಅತಿಯಾದ ಮಾಂಸಾಹಾರ ಸೇವನೆ, ಹೆಚ್ಚು ಪ್ರಮಾಣದ ಔಷಧ ಸೇವನೆ, ಹೆಚ್ಚು ಉಪ್ಪು ಬಳಕೆ, ಮದ್ಯಪಾನ ಮಾಡುವುದು, ಮೂತ್ರ ತಡೆ ಹಿಡಿಯು ವುದು, ಸರಿಯಾಗಿ ನಿದ್ದೆ ಮಾಡದಿರುವುದು ಕಿಡ್ನಿಗೆ ಹಾನಿ ಉಂಟು ಮಾಡುತ್ತದೆ. ನಿಮ್ಮ ಕಿಡ್ನಿ ನೀವೇ ರಕ್ಷಿಸಿಕೊಳ್ಳ ಬೇಕು. ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಬೇಕು ಇತ್ಯಾದಿ ಘೋಷ ವಾಕ್ಯಗಳುಳ್ಳ ಫಲಕಗಳನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ನೆಫ್ರಾಲಜಿಸ್ಟ್ ಡಾ. ಪಿ.ಶ್ರೀನಿವಾಸನ್, ಯೂರಾಲಜಿಸ್ಟ್ ಡಾ. ಕಿರಣ್ ಕುಮಾರ್, ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಎ.ವೇಣುಗೋಪಾಲ್, ಫೆಸಿಲಿಟಿ ಡೈರೆಕ್ಟರ್ ಎ.ಆರ್. ಮಂಜುನಾಥ್, ನಟರಾಜ ನರ್ಸಿಂಗ್ ಶಾಲೆಯ sಸಂಯೋಜಕ ಡಾ.ರಾಜೇಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Translate »