`ದೇಶ ಕಟ್ಟಲು ನಾವು ಮಾನಸಿಕ-ದೈಹಿಕವಾಗಿ ಸದೃಢವಾಗಿದ್ದೇವೆ’
ಮೈಸೂರು

`ದೇಶ ಕಟ್ಟಲು ನಾವು ಮಾನಸಿಕ-ದೈಹಿಕವಾಗಿ ಸದೃಢವಾಗಿದ್ದೇವೆ’

January 19, 2020

ಮೈಸೂರು, ಜ. 18 (ಆರ್‍ಕೆ)- `ದೇಶ ಕಟ್ಟಲು ನಾವು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿದ್ದೇವೆ’ ಎಂಬ ಸಂದೇಶ ಸಾರಲು ಶಾಲಾ-ಕಾಲೇಜು ವಿದ್ಯಾರ್ಥಿಗಳು ಇಂದು ಮೈಸೂರಲ್ಲಿ ಸೈಕ್ಲೋಥಾನ್ ನಡೆಸಿದರು.

ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತಾ ಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಫಿಟ್ ಇಂಡಿಯಾ ಅಭಿಯಾನದಡಿ ಶನಿವಾರ ಏರ್ಪಡಿಸಿದ್ದ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಮೈಸೂ ರಿನ ಚಾಮುಂಡಿವಿಹಾರ ಕ್ರೀಡಾಂಗಣ ಬಳಿ ನೆಹರು ಯುವ ಕೇಂದ್ರದ ಜಂಟಿ ನಿರ್ದೇಶಕ ಯು.ಪಿ.ಸಿಂಗ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಚಾಮುಂಡಿ ವಿಹಾರ ಕ್ರೀಡಾಂಗಣ ಬಳಿಯಿಂದ ಬೆಳಿಗ್ಗೆ 9.15 ಗಂಟೆಗೆ ಸೈಕಲ್‍ಗಳಲ್ಲಿ ಹೊರಟ ವಿದ್ಯಾರ್ಥಿಗಳು ಎಸ್‍ಪಿ ಆಫೀಸ್ ಸರ್ಕಲ್, ನಜರ್‍ಬಾದ್ ರಸ್ತೆ, ಹಾರ್ಡಿಂಜ್ ಸರ್ಕಲ್, ಕೆ.ಆರ್. ಸರ್ಕಲ್, ಸಯ್ಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಕಾಲೇಜು, ಇರ್ವಿನ್ ರಸ್ತೆ, ಗ್ರಾಮಾಂತರ ಬಸ್ ನಿಲ್ದಾಣದ ಮಾರ್ಗ ವಾಗಿ 5 ಕಿ.ಮೀ. ದೂರ ಸಾಗಿ ಬೆಳಿಗ್ಗೆ 10 ಗಂಟೆ ವೇಳೆಗೆ ಮರಳಿ ಕ್ರೀಡಾಂಗಣ ತಲುಪಿದರು. ಎನ್‍ಎಸ್‍ಎಸ್, ಎನ್‍ಸಿಸಿ ಮತ್ತು ಕೆಲ ಶಾಲಾ ವಿದ್ಯಾರ್ಥಿಗಳು ಸೇರಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೈಕ್ಲೋ ಥಾನ್‍ನಲ್ಲಿ ಪಾಲ್ಗೊಂಡಿದ್ದರು. ಕಾರ್ಯ ಕ್ರಮ ಆಯೋಜಕರೇ ಟ್ರಿಣ್ ಟ್ರಿಣ್ ಸೈಕಲ್‍ಗಳನ್ನು ಒದಗಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಂಬುಲೆನ್ಸ್ ಹಾಗೂ ನಜರ್‍ಬಾದ್ ಠಾಣೆ ಪೊಲೀಸ್ ಇನ್ಸ್‍ಪೆಕ್ಟರ್ ಜಿ.ಎನ್. ಶ್ರೀಕಾಂತ ಅವರು ಪೊಲೀಸ್ ಸಿಬ್ಬಂದಿ ಗಳನ್ನು, ಬೆಂಗಾವಲು ವಾಹನವನ್ನು ಒದಗಿಸಿ ಸೈಕಲ್ ಜಾಥಾಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಆರ್.ಶಿವಪ್ಪ, ಕೇಂದ್ರ ಕಾರಾಗೃಹದ ಚೀಫ್ ಸೂಪ ರಿಂಟೆಂಡೆಂಟ್ ದಿವ್ಯಶ್ರೀ, ನ್ಯಾಷನಲ್ ಅಡ್ವೆಂಚರ್ ಫೌಂಡೇಷನ್ ನಿರ್ದೇಶಕಿ ರುಕ್ಮಿಣಿ ಚಂದ್ರನ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಸುರೇಶ್, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಜನ ಸಮನ್ವಯಾಧಿಕಾರಿ ಎಸ್. ಸಿದ್ದ ರಾಮಪ್ಪ, ಮೈಸೂರು ವಿಶ್ವವಿದ್ಯಾನಿಲ ಯದ ಎನ್‍ಎಸ್‍ಎಸ್ ಅಧಿಕಾರಿ ಡಾ. ಬಿ. ಚಂದ್ರಶೇಖರ್, ಕ್ರೆಡಿಟ್-ಐ ಮ್ಯಾನೇ ಜಿಂಗ್ ಟ್ರಸ್ಟಿ ಡಾ. ಎಂ.ಪಿ. ವರ್ಷ, ಮಹಾರಾಣಿ ಸರ್ಕಾರಿ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಮನೋನ್ಮಣಿ ಹಾಗೂ ಮೈಸೂರು ಟ್ರಾವೆಲ್ ಅಸೋಸಿಯೇಷನ್‍ನ ಎ.ಸಿ. ರವಿ ಅವರು ಸೈಕ್ಲೋಥಾನ್ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.

Translate »