ಪಶ್ಚಿಮ ಬಂಗಾಳ 15 ವರ್ಷಗಳ ಹಿಂದಿನ ಬಿಹಾರದಂತಾಗಿದೆ
ಮೈಸೂರು

ಪಶ್ಚಿಮ ಬಂಗಾಳ 15 ವರ್ಷಗಳ ಹಿಂದಿನ ಬಿಹಾರದಂತಾಗಿದೆ

April 22, 2019

ಕೋಲ್ಕತಾ: ಹಾಲಿ ಪಶ್ಚಿಮ ಬಂಗಾಳ ರಾಜ್ಯ ಈ ಹಿಂದೆ ಅಂದರೆ 10-15 ವರ್ಷಗಳ ಹಿಂದಿನ ಬಿಹಾರದಂತಾಗಿದ್ದು, ಇಲ್ಲಿನ ಪ್ರಜೆಗಳಿಗೆ ಚುನಾವಣೆ ಮತ್ತು ಜನಪ್ರತಿನಿಧಿಗಳ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ವಿಶೇಷ ವೀಕ್ಷ ಕರು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ಆಯೋಗದ ವತಿಯಿಂದ ಪಶ್ಚಿಮ ಬಂಗಾಳಕ್ಕೆ ವಿಶೇಷ ವೀಕ್ಷಕ ರಾಗಿ ನೇಮಕರಾಗಿರುವ ಅಜಯ್ ವಿ. ನಾಯಕ್ ಅವರು ಖಾಸಗಿ ಮಾಧ್ಯಮದೊಂದಿಗೆ ಈ ಬಗ್ಗೆ ಮಾತನಾಡಿದ್ದು, ಚುನಾವಣಾ ಆಯೋಗದ ವಿಶೇಷ ವೀಕ್ಷಕನಾಗಿ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ನನ್ನ ಅನುಭವಕ್ಕೆ ಬಂದಂತೆ ಪ್ರಸ್ತುತ ಪಶ್ಚಿಮ ಬಂಗಾಳ 10-15 ವರ್ಷಗಳ ಹಿಂದಿನ ಬಿಹಾರದಂತಾಗಿದೆ. ಇಲ್ಲಿನ ಪ್ರಜೆಗಳಿಗೆ ಚುನಾವಣೆ, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸ್ಥಳೀಯ ಪೆÇಲೀಸರ ಮೇಲೆ ನಂಬಿಕೆಯೇ ಇಲ್ಲ. ಹೀಗಾಗಿ ಚುನಾ ವಣೆ ಎಂದರೆ ಮೂಗು ಮುರಿಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಚುನಾವಣಾ ಭದ್ರತೆ ಕುರಿತು ಮಾತನಾಡಿದ ಅವರು, ಇಲ್ಲಿನ ಪರಿಸ್ಥಿತಿ ಅವಲೋಕಿಸಿಯೇ ನಾವು ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಮಟ್ಟಿಗೆ ಕೇಂದ್ರೀಯ ಪಡೆಗಳನ್ನು ಭದ್ರತೆ ನಿಯೋಜನೆ ಮಾಡುವಂತೆ ಚುನಾವಣಾ ಅಯೋಗಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಎಲ್ಲಾ ಬೂತ್‍ಗಳ ಲ್ಲಿಯೂ ಕೇಂದ್ರೀಯ ಭದ್ರತಾ ಪಡೆಗಳೇ ಭದ್ರತೆಗೆ ನಿಯೋಜನೆಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು. ಇನ್ನು ಪಶ್ಚಿಮ ಬಂಗಾಳ ವಿಶೇಷ ವೀಕ್ಷಕರಾಗಿ ನೇಮಕರಾಗಿ ರುವ ಅಜಯ್ ವಿ. ನಾಯಕ್ ಅವರ ವಿರುದ್ಧ ತೃಣಮೂಲ ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಅಜಯ್ ವಿ.ನಾಯಕ್ ಅವರು ಪಕ್ಷಪಾತಿಯಾಗಿ ಕಾರ್ಯ ನಿರ್ಲವಹಿಸುತ್ತಿದ್ದು, ರಾಜಕೀಯವಾಗಿ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿ ದ್ದಾರೆ. ಹೀಗಾಗಿ ಅವರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದೆ.

Translate »