ವೃದ್ಧೆಯರಿಂದ ಆಭರಣ ಕದಿಯುತ್ತಿದ್ದ ಮಹಿಳೆ ಸೆರೆ
ಮೈಸೂರು

ವೃದ್ಧೆಯರಿಂದ ಆಭರಣ ಕದಿಯುತ್ತಿದ್ದ ಮಹಿಳೆ ಸೆರೆ

February 28, 2019

ಮೈಸೂರು: ಅಮಾಯಕ ವಯೋವೃದ್ಧೆಯರನ್ನೇ ಗುರಿಯಾಗಿಸಿಕೊಂಡು ನಿದ್ರೆ ಮಾತ್ರೆ ಹಾಕಿದ್ದ ಜ್ಯೂಸ್ ಕುಡಿಸಿ ಚಿನ್ನಾಭರಣ ಕಸಿದು ಪರಾರಿಯಾಗುತ್ತಿದ್ದ ನಯವಂಚಕಿಯನ್ನು ಲಷ್ಕರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಎನ್.ಆರ್. ಮೊಹಲ್ಲಾದ ಗಣೇಶನಗ ರದ ಸೆಂಟ್ ಮೇರಿಸ್ ರಸ್ತೆ, 12ನೇ ಕ್ರಾಸ್ ನಿವಾಸಿ ಮಣಿಕಂಠ ಎಂಬುವರ ಪತ್ನಿ ಸುವರ್ಣ(28) ಬಂಧಿತ ವಂಚಕಿಯಾಗಿದ್ದು, ಆಕೆಯಿಂದ 18 ಲಕ್ಷ ರೂ. ಮೌಲ್ಯದ 581 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೈಸೂರಿನ ರೂಪಾನಗರ ನಿವಾಸಿ 75 ವರ್ಷದ ಶ್ರೀಮತಿ ದಾಕ್ಷಾಯಿಣಿ ಎಂಬುವರು ಬೆಂಗಳೂರಿನ ಸ್ಯಾಟ ಲೈಟ್ ಬಸ್ ಸ್ಟ್ಯಾಂಡ್‍ನಿಂದ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಮೈಸೂರಿಗೆ ಬರುತ್ತಿದ್ದಾಗ ಪಕ್ಕದ ಸೀಟಿನಲ್ಲಿ ಬಂದು ಕುಳಿತುಕೊಂಡ ಮಹಿಳೆ, ಪರಿಚಯಸ್ಥರಂತೆ ಮಾತಿ ಗಿಳಿದು ಆತ್ಮೀಯತೆ ಬೆಳಸಿಕೊಂಡಿದ್ದಳು. ಮಾರ್ಗ ಮಧ್ಯೆ ಶ್ರೀರಂಗಪಟ್ಟಣದಲ್ಲಿ ನಿದ್ದೆ ಮಾತ್ರೆ ಮಿಶ್ರಿತ ಜ್ಯೂಸ್ ಕುಡಿಯು ವಂತೆ ಮಹಿಳೆಯನ್ನು ಪುಸಲಾಯಿಸಿ, ಕುಡಿಸಿದ್ದಳು.

ಜ್ಯೂಸ್ ಸೇವಿಸಿ ಪ್ರಜ್ಞೆ ತಪ್ಪಿದ ದಾಕ್ಷಾಯಿಣಿ ಅವ ರನ್ನು ಆಕೆಯೆ ಆಟೋದಲ್ಲಿ ರೂಪಾನಗರಕ್ಕೆ ತಂದು ಬಿಟ್ಟಿದ್ದಳು. ನಂತರ ಮನೆಗೆ ಹೋಗಿ ನೋಡಲಾಗಿ ಮೈಮೇಲಿದ್ದ 80 ಗ್ರಾಂ ಮಾಂಗಲ್ಯ ಹಾಗೂ ಹವಳದ ಸರ ಕಾಣೆಯಾಗಿದ್ದವು. ತನಗೆ ಜ್ಯೂಸ್ ಕೊಟ್ಟ ಮಹಿ ಳೆಯೇ ಆಭರಣ ಅಪಹಸಿರಬಹುದೆಂದು ದಾಕ್ಷಾಯಿಣಿ ಅವರು ಜ.30ರಂದು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಲಷ್ಕರ್ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದರು. ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳ ಸಹಕಾರದಿಂದ ಫೆ.23ರಂದು ಮೈಸೂ ರಿನ ಸಬರ್ಬನ್ ಬಸ್ ನಿಲ್ದಾಣದಲ್ಲಿ ಸುವರ್ಣಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ವೃದ್ಧೆಯರಿಗೆ ಜ್ಯೂಸ್‍ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟು, ಅವರು ನಿದ್ರೆಗೆ ಜಾರಿದಾಗ ಕಟಿಂಗ್ ಪ್ಲೇಯರ್‍ನಿಂದ ಕತ್ತರಿಸಿ ಚಿನ್ನದ ಆಭರಣಗಳನ್ನು ಕಳವು ಮಾಡಿದ್ದಾಗಿ ಆಕೆ ಒಪ್ಪಿಕೊಂಡಿ ದ್ದಾಳೆ. ಈಕೆಯ ಬಂಧನದಿಂದ ಲಷ್ಕರ್ ಠಾಣೆಯ 6, ವಿಜಯನಗರದ 1, ಮಂಡ್ಯ ಗ್ರಾಮಾಂತರ ಠಾಣೆಯ 1, ಮದ್ದೂರು ಠಾಣೆಯ 1, ಬೆಂಗಳೂರಿನ ಬ್ಯಾಟ ರಾಯನಪುರದ 3 ಸೇರಿ ಒಟ್ಟು 13 ವಂಚನೆ ಪ್ರಕರಣ ಗಳು ಬೆಳಕಿಗೆ ಬಂದಿವೆ. ಈಕೆ ಕಳವು ಮಾಡಿದ ಆಭರಣ ಗಳನ್ನು ಮೈಸೂರಿನ ಮಣಪ್ಪುರಂ ಫೈನಾನ್ಸ್, ಮುತ್ತೂಟ್ ಫೈನಾನ್ಸ್ ಹಾಗೂ ಫೆಡ್ ಬ್ಯಾಂಕ್‍ಗಳಲ್ಲಿ ಅಡಮಾನ ಇರಿಸಿ ಪಡೆದಿದ್ದ ಹಣದಿಂದ ಸುವರ್ಣ ಐಷಾರಾಮಿ ಜೀವನ ನಡೆಸುತ್ತಿದ್ದಳು ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆಕೆಯು ಬಸ್‍ಗಳಲ್ಲಿ ಪ್ರಯಾಣಿಸುವ ವೇಳೆ ತನ್ನ ವ್ಯಾನಿಟಿ ಬ್ಯಾಗ್‍ನಲ್ಲಿ ಕಟಿಂಗ್ ಪ್ಲೇಯರ್, ಜ್ಯೂಸ್ ಬಾಟಲ್ ಹಾಗೂ ನಿದ್ದೆ ಮಾತ್ರೆಗಳನ್ನು ಸದಾ ಇಟ್ಟುಕೊಂಡಿದ್ದು, ವಂಚಿಸುವ ವೇಳೆ ಜ್ಯೂಸ್ ಬಾಟಲ್‍ಗೆ 5ಕ್ಕೂ ಹೆಚ್ಚು ನಿದ್ದೆ ಮಾತ್ರೆಗಳನ್ನು ಪುಡಿ ಮಾಡಿ ಬೆರೆಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯರು ಮೈಮೇಲೆ ಹೆಚ್ಚಿನ ಆಭರಣ ಧರಿಸಿ ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸುತ್ತಾ, ಓಡಾಟ ಮಾಡುವುದಾಗಲಿ, ಒಬ್ಬಂಟಿಯಾಗಿ ತಿರುಗಾಡಬಾ ರದು. ಅಪರಿಚಿತರು ನೀಡಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂದು ಪೊಲೀಸರು ಮನವಿ ಮಾಡಿ ದರು. ದೇವರಾಜ ಉಪ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಲಷ್ಕರ್ ಠಾಣೆ ಇನ್ಸ್‍ಪೆಕ್ಟರ್ ಎನ್.ಮುನಿಯಪ್ಪ, ಸಬ್ ಇನ್ಸ್‍ಪೆಕ್ಟರ್ ಎಸ್.ಹೆಚ್. ಪೂಜಾ, ಎಎಸ್‍ಐ ಶ್ರೀನಿವಾಸ, ಸಿಬ್ಬಂದಿಗಳಾದ ಪರ ಶಿವಮೂರ್ತಿ, ಲೋಕೇಶ್, ಲಿಂಗರಾಜು, ಮಹದೇವ ಸ್ವಾಮಿ, ವಿಜಯಕುಮಾರ್, ಪ್ರದೀಪ್, ಸತ್ಯ, ಪ್ರತೀಪ್, ಗೀತಾ ಉಪಸ್ಥಿತರಿದ್ದರು.

Translate »