ಮೈಸೂರು: ರಾಮಕೃಷ್ಣ ಪರಮಹಂಸರ ಜನ್ಮ ಶತ ಮಾನೋತ್ಸವದ ಹಿನ್ನೆಲೆಯಲ್ಲಿ ಮೈಸೂ ರಿನ ರಾಮಕೃಷ್ಣ ಆಶ್ರಮದಲ್ಲಿ ಭಾನುವಾರ ನಡೆದ `ವಿದೇಶಿಗರಿಗೆ ಯೋಗ’ ಕುರಿತ ಕಾರ್ಯಾಗಾರದಲ್ಲಿ 12 ದೇಶಗಳ 58 ವಿದೇಶಿಗರು ಪಾಲ್ಗೊಂಡು ಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದರು.
ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯಾಗಾರ ದಲ್ಲಿ ಮೈಸೂರಿನ ವಿವಿಧ ಯೋಗಶಾಲೆ ಗಳಲ್ಲಿ ಯೋಗ ಕಲಿಯುತ್ತಿರುವ ವಿದೇಶಿ ಗರಿಗೆ ಮೊದಲು ಆಶ್ರಮದ ಆತ್ಮನಂದಜಿ ಮಹಾರಾಜ್ ಭಜನೆ ಹಾಗೂ ಪ್ರಾರ್ಥನೆ ನಡೆಸಿಕೊಟ್ಟರು. ನಂತರ ಸ್ವಾಮಿ ಮುಕ್ತಿ ದಾನಂದಜೀ ಮಹಾರಾಜ್ ಅವರು ಉಪನ್ಯಾಸ ನಡೆಸಿಕೊಟ್ಟರು. ಸಿಂಗಾಪುರದಲ್ಲಿರುವ ರಾಮಕೃಷ್ಣ ಆಶ್ರಮದ ಮಾಜಿ ಅಧ್ಯಕ್ಷ ಸ್ವಾಮೀ ಮುಕ್ತಿರೂಪಾನಂದಾಜಿ ಮಹಾರಾಜ್ ಅವರು ಸಂತೋಷದ ಜೀವನಕ್ಕಾಗಿ ಯೋಗ ವಿಷಯ ಕುರಿತಂತೆ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯೋಗ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಕ್ರಮಬದ್ಧವಾಗಿ ಯೋಗಾ ಭ್ಯಾಸ ಮಾಡಬೇಕು. ಆಲಸ್ಯ, ದುರಾಸೆ, ವ್ಯಾಧಿ ಸೇರಿದಂತೆ ಇನ್ನಿತರ ಗುಣಗಳು ಆರೋಗ್ಯವಂತ ಮನುಷ್ಯರನ್ನು ಕುಗ್ಗಿಸು ತ್ತವೆ. ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಯೋಗ ಮಾಡಬೇಕಾಗಿದೆ. ಕೇವಲ ಆಸನಗಳನ್ನು ಪ್ರದರ್ಶಿಸುವುದಕ್ಕೆ ಯೋಗಾಸನ ಎನ್ನುವುದಕ್ಕೆ ಸಾಧ್ಯವಿಲ್ಲ. ತನ್ನದೇ ಆದ ರೀತಿ-ನೀತಿ, ನಿಯಮ ಯೋಗಾಸನಕ್ಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದೇಶಿಗರು, ಯೋಗಾ ಸನ, ಯೋಗದ ಭಂಗಿ, ಅನುಸರಿಸ ಬೇಕಾದ ನಿಯಮ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ಪಡೆದರು. ಸ್ವಾಮಿ ಶಾಂತಿ ವಿರತಾನಂದ ಮಹಾ ರಾಜ್ ಸಂವಾದ ನಡೆಸಿ ವಿದೇಶಿಗರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಮತ್ತಷ್ಟು ಮಾಹಿತಿ ಒದಗಿಸಿದರು. ಕಾರ್ಯಕ್ರಮದಲ್ಲಿ ಯೋಗ ಗುರು ರಾಘವೇಂದ್ರ ಪೈ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.