ಯೂತ್ ಹಾಸ್ಟೆಲ್ ಜನ್ಮ ತಾಳಿದ್ದೇ ಮೈಸೂರಲ್ಲಿ!
ಮೈಸೂರು

ಯೂತ್ ಹಾಸ್ಟೆಲ್ ಜನ್ಮ ತಾಳಿದ್ದೇ ಮೈಸೂರಲ್ಲಿ!

July 9, 2019

ಮೈಸೂರು, ಜು.8(ಆರ್‍ಕೆಬಿ)-ಜರ್ಮ ನಿಯ ರಿಚರ್ಸ್ ಷರ್ಮನ್ ಎಂಬ ಶಿಕ್ಷಕ ರೊಬ್ಬರ ಕನಸಿನ ಕೂಸಾಗಿ 1909ರಲ್ಲಿ ಆರಂಭಗೊಂಡ ಯೂತ್ ಹಾಸ್ಟೆಲ್ ಎಂಬ ಪರಿಕಲ್ಪನೆ, ಶಾಲಾ ಮಕ್ಕಳಲ್ಲಿ ಓದಿನ ಜೊತೆಗೆ ಪ್ರಾಕೃತಿಕ ತಾಣಗಳಲ್ಲಿ ತಿರು ಗಾಡುವ, ಸ್ವಯಂ ಆಸಕ್ತಿಯ ವಿಷಯಗಳನ್ನು ಸಂಚಾರದ ಮೂಲಕವೇ ಅರಿಯುವ ವಾಸ್ತವಿಕ ತಿಳಿವಳಿಕೆಯನ್ನು ಅನುಭವಿಸಿ ಕಲಿಯುವ ವಿಧಾನ ಇದಾಗಿತ್ತು.

ಭಾರತದಲ್ಲಿ ಈ ವ್ಯವಸ್ಥೆ ಅರಂಭ ಗೊಂಡಿದ್ದೇ ಮೈಸೂರಿನಲ್ಲಿ ಎನ್ನುವುದು ಮಹತ್ವದ ಸಂಗತಿ. ಇಂದು ಮೈಸೂರು ಘಟಕದಲ್ಲಿ 2 ದಿನಗಳ ಸಮ್ಮೇಳನ ನಡೆಸು ವುದಕ್ಕೆ ಪೂರಕ ಸಂಗತಿ, 1949ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಇಂಗ್ಲೆಂಡಿನ ಪ್ರೊ. ಈಗಲ್‍ಟನ್ ಅವರು ಕಾಲೇಜು ವಿದ್ಯಾರ್ಥಿ ಗಳಿಗೆ ಇಂತಹ ಪ್ರಾಯೋಗಿಕ, ಅನೌಪ ಚಾರಿಕ ಹಾಗೂ ಅನುಭವಜನ್ಯ ಶಿಕ್ಷಣ ಒದ ಗಿಸುವ ಆಶಯದೊಂದಿಗೆ ಮೈಸೂರಿನಲ್ಲಿ ಯೂತ್ ಹಾಸ್ಟೆಲಿಂಗ್ ಪರಿಕಲ್ಪನೆ ಆರಂಭಿಸಿ ದರು. 1954ರಲ್ಲಿ ಮೈಸೂರಿನಲ್ಲಿ ಯೂತ್ ಹಾಸ್ಟೆಲ್ ನೋಡಿಕೊಳ್ಳುತ್ತಿದ್ದ ಪ್ರೊ.ಆರ್. ಜಿ.ಪದಕಿ, ಇದನ್ನು ದೆಹಲಿಗೆ ವರ್ಗಾಯಿಸಿ ದರು. ಅಲ್ಲಿಯೂ ಹಾಸ್ಟೆಲ್ಲಿನ ನೇತೃತ್ವ ವಹಿಸಿ ಕೊಂಡು ಸಂಸ್ಥಾಪಕ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದರು. ಅಲ್ಲಿ ಯೂತ್ ಹಾಸ್ಟೆಲ್ ಚಟುವಟಿಕೆಗೆ ಇನ್ನಷ್ಟು ವಿಸ್ತøತತೆ ದೊರೆತು ಹಿಮಾಲಯದ ಹಿಮಾಚ್ಛಾದಿತ ಪರ್ವತ ಶ್ರೇಣಿಗಳಲ್ಲಿ ಯುವ ಜನರ ಚಾರಣ, ಜಾರಾಟ, ಮುಂತಾದ ಸಾಹಸ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದರು. ಹೀಗೆ ಸಾಹಸ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವ ಯುವಕರ ಬಿಡಾರ, ವಾಸ್ತವ್ಯಕಾಗಿ ದೆಹಲಿಯ ಚಾಣಕ್ಯಪುರಿಯಲ್ಲಿ ಒಂದು ಯೂತ್ ಹಾಸ್ಟೆಲ್ ಕಟ್ಟಡ ನಿರ್ಮಿಸಿದರು. ಕ್ರಮೇಣ ರಾಷ್ಟ್ರಾದ್ಯಂತ ರಾಜ್ಯ ಘಟಕಗಳು, ಶಾಖೆಗಳು ರಚನೆಗೊಂಡವು. 500ಕ್ಕೂ ಹೆಚ್ಚು ಹಾಸ್ಟೆಲ್‍ಗಳು ಸ್ಥಾಪನೆಯಾದವು. ಒಂದು ಸರ್ಕಾರೇತರ ಸೇವಾ ಸಂಸ್ಥೆಯಾದ ಇದು ಇಂದು ಅತೀ ಹೆಚ್ಚು 1.5 ಲಕ್ಷ ಆಜೀವ ಸದಸ್ಯರನ್ನು ಹೊಂದಿರುವ ಸಂಘಟನೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅತ್ತ ದೇಶದೆಲ್ಲೆಡೆ ಹರಡಿ, ಇತ್ತ ಮೈಸೂ ರಿನಿಂದ ಕೈ ತಪ್ಪಿಹೋಗಿದ್ದ ಯೂತ್ ಹಾಸ್ಟೆಲ್ ಪದ್ಧತಿಯನ್ನು ಮತ್ತೆ ಮೈಸೂರಿಗೆ ಮರಳಿ ತಂದ ಕೀರ್ತಿ ಹಿರಿಯ ಮುತ್ಸದ್ಧಿ, ಸಾಮಾ ಜಿಕ ಕಳಕಳಿಯ ಶಿಸ್ತಿನ ಸಿಪಾಯಿ, `ಸ್ವಚ್ಛತಾ ಹೀ ಸೇವಾ’ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಡಿ. ಮಾದೇಗೌಡರಿಗೆ ಸಲ್ಲುತ್ತದೆ. 1975ರಲ್ಲಿ ಮತ್ತೆ ಮೈಸೂರಿನಲ್ಲಿ ಯೂತ್ ಹಾಸ್ಟೆಲ್ ಚಟು ವಟಿಕೆ ಚಾಲನೆಗೊಂಡು ಇದಕ್ಕಾಗಿ ಗೋಕುಲಂ ನಲ್ಲಿ ಪಡೆದ ನಿವೇಶನದಲ್ಲಿ ಅವರು ಚಿಕ್ಕ ಕಟ್ಟಡ ಕಟ್ಟಿ, ಸಾಹಸ ಕ್ರೀಡಾ ಚಟುವಟಿಕೆ ಗಳಲ್ಲಿ ಆಸಕ್ತ ಯುವಜನರು ಉಳಿದುಕೊಳ್ಳಲು ಅನುವು ಮಾಡಿಕೊಟ್ಟರು. ಹೆಚ್ಚುತ್ತಿದ್ದ ಅಗತ್ಯ ವನ್ನು ಮನಗಂಡು ಮತ್ತೆ 2014ರಲ್ಲಿ ಮತ್ತೊಂದು ಕಟ್ಟಡ ನಿರ್ಮಿಸುವ ಸಾಹಸಕ್ಕೆ ಕೈ ಹಾಕಿದರು. ವಿಧಾನ ಪರಿಷತ್ ಸದಸ್ಯ ರಾಗಿದ್ದ ಅವರು ನೀಡಿದ 4 ಲಕ್ಷ ರೂ. ಶಾಸಕರ ನಿಧಿಯೊಂದಿಗೆ ಕಟ್ಟಡ ನಿರ್ಮಿಸಿದ ಸ್ಥಳ ದಲ್ಲಿಯೇ 2016ರ ಡಿ.4ರಂದು ಯೂತ್ ಹಾಸ್ಟೆಲ್ ಅಸೋಷಿಯೇಷನ್ ಆಫ್ ಇಂಡಿ ಯಾದ ಬೃಹತ್ತಾದ ಕಟ್ಟಡ ತಲೆ ಎತ್ತಿತು. ಇದು ಕೇವಲ ಯೂತ್ ಹಾಸ್ಟೆಲ್ ಆಗಿರದೆ `ಅಕಾ ಡೆಮಿ ಆಫ್ ಸ್ಟಡಿ ಆಫ್ ಯೂತ್ ಹಾಸ್ಟೆಲ್ಲಿಂಗ್ ಫಾರ್ ಪೀಸ್ ಅಂಡ್ ಇಂಟರ್ ನ್ಯಾಷನಲ್ ಅಂಡರ್‍ಸ್ಟ್ಯಾಂಡಿಂಗ್’ ಎನ್ನುವ ಸಂಸ್ಥೆಯಾಗಿ ಬೆಳೆದು ನಿಂತಿದೆ. ಈ ಮೂಲಕ ಸೈಕ್ಲಿಂಗ್, ಟ್ರೆಕ್ಕಿಂಗ್ ಇನ್ನಿತರ ಸಾಹಸ ಕ್ರೀಡೆಗಳಲ್ಲಿ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್ ಮತ್ತು ಕ್ಷಿಪ್ರ ಅವಧಿಯ ವ್ಯಾಸಂಗಗಳನ್ನು ನೀಡುತ್ತಿದೆ.

Translate »