ಅ.12ರಿಂದ 17ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ
ಮೈಸೂರು

ಅ.12ರಿಂದ 17ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ

September 18, 2018

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋ ತ್ಸವದ ಅಂಗವಾಗಿ ಯುವ ಸಂಭ್ರಮ ಕಾರ್ಯಕ್ರಮವನ್ನು ಸೆ.30ರಿಂದ ಅ.5ರ ವರೆಗೆ ಮಾನಸಗಂಗೋತ್ರಿ ಬಯಲು ರಂಗ ಮಂದಿರ ಹಾಗೂ ಯುವ ದಸರಾವನ್ನು ಅ.12ರಿಂದ 17ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಮಾನಸಗಂಗೋತ್ರಿಯ ಮೈಸೂರು ವಿವಿ ಮೌಲ್ಯಮಾಪನ ಭವನದಲ್ಲಿ ಯುವ ದಸರಾ ಉಪಸಮಿತಿ ಆಯೋಜಿಸಿದ್ದ ಕಾಲೇಜು ಪ್ರಾಂಶುಪಾಲರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಈ ಯುವ ಸಂಭ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಲೆಯನ್ನು ಪ್ರದರ್ಶಿಸಲು ಸ್ಫೂರ್ತಿ ಬರುತ್ತದೆ ಎಂದರು.

ಟ್ರಯಲ್‍ಗಾಗಿ ಕಳಿಸಬೇಡಿ: ನಿರಂತರ ಕಲಿಕೆಯೊಂದಿಗೆ ನೃತ್ಯವನ್ನು ಕರಗತ ಮಾಡಿಕೊಂಡಿರುವ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಆಯ್ಕೆ ಮಾಡಿ ಕಳುಹಿ ಸಬೇಕು. ಇದನ್ನು ಬಿಟ್ಟು ಟ್ರಯಲ್ ನೋಡೋಣವೆಂದು ನುರಿತವಲ್ಲದ ವಿದ್ಯಾರ್ಥಿಗಳನ್ನು ಕಳುಹಿಸುವುದು ಬೇಡ. ದಸರಾ ಸಮೀಪಿಸುತ್ತಿದ್ದು, ಇದು ಟ್ರಯಲ್ ನೋಡುವ ಸಮಯವಲ್ಲ. ಟ್ರಯಲ್ ನೋಡುವುದು ಬೇಡ ಎಂದು ಪ್ರಾಂಶುಪಾಲರಿಗೆ ಸಲಹೆ ನೀಡಿದರು.

ಯುವ ಸಂಭ್ರಮದಲ್ಲಿ ಭಾಗವಹಿಸುವ ಒಂದು ತಂಡಕ್ಕೆ 8ರಿಂದ 12 ನಿಮಿಷದ ಕಾಲಾವಕಾಶವಿದ್ದು, ಈ ವೇಳೆ ಪರಿಸರ ಸಂರಕ್ಷಣೆ ಮತ್ತು ಮಾನವ ನಿರ್ಮಿತ ಅಪತ್ತುಗಳು, ರಾಷ್ಟ್ರೀಯ ಭಾವೈಕ್ಯತೆ ಮತ್ತು ಪಾರಂಪರಿಕ ಆಸ್ತಿಗಳ ಸಂರಕ್ಷಣೆ. ಮಹಿಳಾ ಸಬಲೀಕರಣ ಮತ್ತು ಸಮಾನತೆ. ಭಾರತದ ಸ್ವಾತಂತ್ರ್ಯ ಚಳವಳಿ. ಕನ್ನಡ ಮತ್ತು ಸಂಸ್ಕøತಿ ಜಾನಪದ ಕಲೆ. ಸ್ವಚ್ಛ ಭಾರತ-ಸ್ವಚ್ಛ ಕರ್ನಾಟಕ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ನೃತ್ಯ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲಿದ್ದಾರೆ ಎಂದರು.

ಅ.14ರಂದು ಪೂರ್ವ ಸಿದ್ಧತಾ ಮೆರವಣಿಗೆ: ಇದೇ ಮೊದಲ ಭಾರಿಗೆ ಜಂಬೂ ಸವಾರಿ ಮೆರವಣಿಗೆಗೂ ಮುನ್ನ ಅ.14ರಂದು ಅರಮನೆಯಿಂದ ಬನ್ನಿಮಂಟ ಪದವರೆಗೆ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಯುವ ಸಂಭ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾ ತಂಡಗಳು ಭಾಗವಹಿಸಲಿದ್ದು, ಜಾನಪದ, ಕಂಸಾಳೆ ನೃತ್ಯ, ಡೊಳ್ಳುಕುಣಿತ ಪ್ರದರ್ಶನಗೊಳ್ಳಲಿವೆ. ಕುಡಿಯುವ ನೀರು, ಲೈಟ್ ಹಾಗೂ ಮತ್ತಿತರೆ ಸೌಲಭ್ಯಗಳನ್ನು ಒದಗಿಸಲಾಗುವುದು. ಜತೆಗೆ ಕಲಾತಂಡಗಳನ್ನು ಕರೆದೊಯ್ಯಯಲು ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಈ ಕಾರ್ಯಕ್ರಮದ ಸಮಯ ಇನ್ನು ನಿಗದಿಯಾಗಿಲ್ಲ. ನಿಗಧಿಯಾದ ನಂತರ ತಿಳಿಸಲಾಗುವುದು ಎಂದರು.
ಈ ಬಾರಿಯ ದಸರಾ ಮಹೋತ್ಸವವು ಪೊಲೀಸ್ ಲೆಸ್ ದಸರಾ ಆಗಬೇಕು. ಹಾಗಾಗಿ ಸಮಾರಂಭ, ಮೆರವಣಿಗೆಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿ ಸಬಾರದೆಂದು ನಗರಪೊಲೀಸ್ ಆಯುಕ್ತರಿಗೆ ಹೇಳಿದ್ದೇನೆ ಎಂದರು.

ವಿವಿ ವ್ಯಾಪ್ತಿಯ 412 ಸರ್ಕಾರಿ ಕಾಲೇಜುಗಳಿಗೂ ಮೂಲಭೂತ ಸೌಲಭ್ಯ ಗಳನ್ನು ಒದಗಿಸಬೇಕೆಂದು ಈಗಾಗಲೇ ಸಭೆ ನಡೆಸಿ ತೀರ್ಮಾನಿಸಿದ್ದು, 600 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗುವುದು ಎಂದರು.ಕಳೆದ ಬಾರಿ ಯುವ ದಸರಾದ ಹಣ ಬಂದಿಲ್ಲ: ಕಳೆದ ಬಾರಿಯ ಯುವ ಸಂಭ್ರಮದ ಹಣ ಬಂದಿದೆ ಹೊರತು ಯುವ ದಸರಾದ 1 ರೂ. ಹಣವೂ ಬಂದಿಲ್ಲ ಎಂದು ಪ್ರಾಂಶುಪಾಲರೊಬ್ಬರು ಆರೋಪಿಸಿದರು.

ಸಲಹೆಗಳು: ಸಹ ಪ್ರಾಧ್ಯಾಪಕ ನಾಗೇಶ್ ಮಾತನಾಡಿ, ಅ.14ರಂದು ನಡೆಯುವ ಮೆರವಣಿಗೆಯಲ್ಲಿ ಜಾನಪದ ಕಲೆಗಳು, ತಮಟೆ ವಾದ್ಯ, ಡೊಳ್ಳುಕುಣಿತ ಪ್ರದರ್ಶಿ ಸಬಹುದೇ ಹೊರತು ವೇದಿಕೆ ಪ್ರದರ್ಶನಗಳನ್ನು ದಾರಿಯುದ್ದಕ್ಕೂ ಪ್ರದರ್ಶಿಸಲು ಸಾಧ್ಯವಿಲ್ಲ. ಹಾಗಾಗಿ ಮೆರವಣಿಗೆಯ ಪ್ರಮುಖ ವೃತ್ತಗಳಾದ ಕೆ.ಆರ್.ವೃತ್ತ, ಆಯುರ್ವೇದಿಕ್ ವೃತ್ತ, ಹೈವೇ ಸರ್ಕಲ್ ವೃತ್ತಗಳಲ್ಲಿ ವೇದಿಕೆ ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂಬ ಸಲಹೆಗೆ ಜಿಟಿಡಿ ಪ್ರತಿಕ್ರಿಯಿಸಿ, ವ್ಯವಸ್ಥೆ ಮಾಡಲಾಗು ವುದು ಎಂದರು. ತಿ.ನರಸೀಪುರ ವಿದ್ಯೋದಯ ಕಾಲೇಜಿನ ರಾಮಚಂದ್ರ ಮಾತನಾಡಿ, ಮೆರವಣಿಗೆಯಲ್ಲಿ ಮಕ್ಕಳು ಪ್ರದರ್ಶನ ನೀಡಬೇಕಾದರೆ ಮೈಕ್ ಇರಬೇಕು.

ಜತೆಗೆ ಮಧ್ಯಾಹ್ನದ ವೇಳೆ ಬಿಸಿಲಿನ ಝಳಕ್ಕೆ ಮಕ್ಕಳು ಆಯಾಸಗೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಈ ವೇಳೆ ಕುಡಿಯುವ ನೀರು ಸೇರಿದಂತೆ ಮತ್ತಿತರೆ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಸಲಹೆಗೆ ಜಿಟಿಡಿ ಪ್ರತಿಕ್ರಿಯಿಸಿ, ಕುಡಿಯುವ ನೀರು, ಲೈಟಿಂಗ್ ಮತ್ತಿತರೆ ಸೌಲಭ್ಯ ಒದಗಿಸಲಾಗುವುದು ಎಂದರು. ಮೈವಿವಿ ಕುಲಸಚಿವ ಪ್ರೊ.ರಾಜಣ್ಣ, ಪಾಲಿಕೆ ಆಯುಕ್ತ ಜಗದೀಶ್, ಯುವದಸರಾ ಸಮಿತಿ ಉಪ ವಿಶೇ ಷಾಧಿಕಾರಿಗಳು ಆದ ಜಿಲ್ಲಾ ಪೊಲೀಸ್ ಅಧೀಕ್ಷಕ ಅಮಿತ್ ಸಿಂಗ್, ಕಾರ್ಯಾಧ್ಯಕ್ಷ ಎಂ.ಎನ್.ನಟರಾಜ್, ಕಾರ್ಯದರ್ಶಿ ಡಿ.ಬಿ.ಲಿಂಗಣ್ಣಯ್ಯ ಇನ್ನಿತರರಿದ್ದರು.

Translate »