ಪೊನ್ನಂಪೇಟೆ: ಕೊಡವರನ್ನು ನಿರ್ನಾಮ ಮಾಡುವ ಉದ್ದೇಶದಿಂದ ಸಹಸ್ರಾರು ಕೊಡ ವರ ಮಾರಣಹೋಮಕ್ಕೆ ಕಾರಣಕರ್ತ ಹಾಗೂ ಕೊಡಗಿನ ಮಣ್ಣಿಗೆ ದ್ರೋಹ ಬಗೆದ ಟಿಪ್ಪುವನ್ನು ವೈಭವೀಕರಿಸಿ ಆತನ ಜಯಂತಿಯ ಆಚ ರಣೆಗೆ ಮುಂದಾಗಿರುವ ಸರ್ಕಾರವು ಜನರ ಭಾವನೆಯನ್ನು ಅವಮಾನಿಸಿದೆ. ಆದ್ದರಿಂದ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ವಿರೋ ಧಿಸಿ ನ.10ರಂದು ಕರಾಳ ದಿನವನ್ನಾಗಿ ಆಚ ರಿಸಲು ಯುನೈಟೆಡ್ ಕೊಡವ ಆರ್ಗ ನೈಜೇóಷನ್ (ಯುಕೊ) ಸಂಚಾಲಕ ಕೊಕ್ಕಲೇ ಮಾಡ ಮಂಜುಚಿಣ್ಣಪ್ಪ ಕರೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿರುವ ಅವರು, ದೇವಾಟ್‍ಪರಂಬುವಿನಲ್ಲಿ ನಿರಾಯುಧರಾಗಿದ್ದ ಸಹಸ್ರಾರು ಸಂಖ್ಯೆಯ ಕೊಡವರನ್ನು ನರ ಮೇಧ ಮಾಡಿರುವುದು ಅಕ್ಷಮ್ಯ ಅಪರಾಧ. ಈ ಹತ್ಯಾಕಾಂಡದಿಂದ ಕೊಡವರು ಕೊಡಗು ಜಿಲ್ಲೆಯಲ್ಲಿಯೇ ಅಲ್ಪಸಂಖ್ಯಾತರಾಗಲು ಕಾರ ಣವಾಯ್ತು ಹಾಗೂ ಕೊಡವರ ಪೂರ್ವಾಜಿತ ಜಾಗವನ್ನು ಕಳೆದುಕೊಳ್ಳುವಂತಾಯಿತು. ಈ ನೋವು ಮತ್ತು ದುಃಖ ಕೊಡವರ ಪೀಳಿಗೆ ಯಿಂದ ಪೀಳಿಗೆಗೆ ಮುಂದುವರಿದಿದೆ ಎಂದು ನೆನಪಿಸಿದ ಮಂಜುಚಿಣ್ಣಪ್ಪ ಟಿಪ್ಪುವಿನ ಕ್ರೌರ್ಯ ಯಾವುದೇ ಒಂದು ಜಾತಿ-ಜನಾಂಗ, ಧರ್ಮಕ್ಕೆ ಸೀಮಿತವಾಗದೆ ಅದು ಮನುಕುಲದ ವಿರೋ ಧಿಯಾಗಿದೆ. ಆದರಿಂದ ಕೊಡಗಿನ ಮಣ್ಣಿ ನಲ್ಲಿ ವಾಸಿಸುವ, ಇಲ್ಲಿನ ಗಾಳಿ ನೀರನ್ನು ಸೇವಿ ಸುವ ಪ್ರತಿಯೊಬ್ಬರು ನ.10ರಂದು ಕರಾಳ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ಟಿಪ್ಪುಜಯಂತಿ ಆಚರಣೆ ಮಾಡಿದರೆ ದಂತಚೋರ ಹಾಗೂ ನರಹಂತಕ ವೀರಪ್ಪನ್‍ನ ಜಯಂತಿಯನ್ನು ಆಚರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.