ಧರ್ಮ, ಜಾತಿ ರಾಜಕಾರಣಕ್ಕೆ ಸೀಮಿತವಾದ ಕೇಂದ್ರ ಸರ್ಕಾರ
ಮೈಸೂರು

ಧರ್ಮ, ಜಾತಿ ರಾಜಕಾರಣಕ್ಕೆ ಸೀಮಿತವಾದ ಕೇಂದ್ರ ಸರ್ಕಾರ

October 10, 2018

ತಿ.ನರಸೀಪುರ:  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐದು ವರ್ಷಗಳ ಆಡಳಿತಾವಧಿ ಯನ್ನು ಧರ್ಮ ಮತ್ತು ಜಾತಿಯ ಹೆಸರಿ ನಲ್ಲಿ ರಾಜಕಾರಣಕ್ಕೆ ಬಳಕೆ ಮಾಡಿ ಕೊಂಡು ಅಭಿವೃದ್ಧಿ ಮತ್ತು ಬಡವರನ್ನು ಸಂಪೂರ್ಣವಾಗಿ ಮರೆತಿದೆ ಎಂದು ಬಹುಜನ ಸಮಾಜ ಪಕ್ಷದ ಕ್ಷೇತ್ರಾಧ್ಯಕ್ಷ ಬಿ.ಆರ್.ಪುಟ್ಟಸ್ವಾಮಿ ಹೇಳಿದರು.

ಪಟ್ಟಣದ ಬಹುಜನ ಸಮಾಜ ಪಕ್ಷದ ಕಛೇರಿಯಲ್ಲಿ ಮಂಗಳವಾರ ನಡೆದ ಬಿಎಸ್ಪಿ ಸಂಸ್ಥಾಪಕ ಕಾನ್ಷಿರಾಂ ಅವರ ಪರಿನಿಬ್ಬಾಣ ದಿನಾಚರಣೆಯಲ್ಲಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿ, ನಾಲ್ಕುಮುಕ್ಕಾಲು ವರ್ಷದ ಆಡಳಿತವನ್ನು ಪೂರ್ಣಗೊಳಿಸಿ ಲೋಕ ಸಭಾ ಚುನಾವಣಾ ಹೊಸ್ತಿಲಲ್ಲಿ ಇರುವ ಕೇಂದ್ರ ಸರ್ಕಾರ ತನ್ನ ಆಡಳಿತವನ್ನು ಧರ್ಮ ಮತ್ತು ಜಾತಿಗೆ ಮೀಸಲಿಟ್ಟಿತೆ ಹೊರತು ಮತ್ಯಾವ ಸಾಧನೆಯನ್ನು ಮಾಡಲಿಲ್ಲ. ಬಡವರು ಮತ್ತು ರೈತರನ್ನು ಸಂಪೂರ್ಣವಾಗಿ ಮರೆತಿದೆ ಎಂದು ಆರೋಪಿಸಿದರು.

ಉತ್ತರ ಪ್ರದೇಶದಂತಹ ಬಹುದೊಡ್ಡ ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷದ ಚಳುವಳಿಯನ್ನು ಕಾನ್ಷಿರಾಂ ಅವರು ಹುಟ್ಟು ಹಾಕಿದ್ದರ ಪರಿಣಾಮ ರಾಜಕಾರಣದಲ್ಲಿ ಹೊಸ ಸಂಚಲನಕ್ಕೆ ಕಾರಣವಾಯಿತು.

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಯಿತು. ಮುಂಬರುವ ಲೋಕಸಭಾ ಚುನಾವಣೆ ಯಲ್ಲೂ ಬಿಎಸ್ಪಿ ಪ್ರಮುಖ ಪಾತ್ರವನ್ನು ವಹಿಸಲಿದ್ದು, ರಾಜ್ಯ ದಲ್ಲಿಯೂ ವರಿಷ್ಠೆ ಮಾಯಾವತಿ ಅವರು ನೀಡಿರುವ ಟಾಸ್ಕ್‍ನಂತೆ ಕೆಲವು ಕ್ಷೇತ್ರಗಳಲ್ಲಿ ಬಿಎಸ್ಪಿ ಸಂಸದರು ಆಯ್ಕೆ ಗೊಳ್ಳುವುದು ಬಹು ತೇಕ ಖಚಿತವೆಂದು ಬಿ.ಆರ್.ಪುಟ್ಟ ಸ್ವಾಮಿ ತಿಳಿಸಿದರು.
ತಾ.ಪಂ ಮಾಜಿ ಸದಸ್ಯ ಕುಕ್ಕೂರು ಪುಟ್ಟಣ್ಣ, ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಯರಗನಹಳ್ಳಿ ಬಿ.ಮಹದೇವಸ್ವಾಮಿ, ಖಜಾಂಚಿ ಪುಟ್ಟಮರುಡಯ್ಯ, ಮುಖಂಡ ರಾದ ಶ್ರೀನಿವಾಸಮೂರ್ತಿ, ಸೋಮೇಶ, ಸೀನಪ್ಪ, ಕೆಬ್ಬೇಹುಂಡಿ ನಾಗರಾಜು, ಬಸವರಾಜು, ಎಂ.ಟಿ.ಮಹೇಂದ್ರ ಕುಮಾರ್, ಇಮ್ರಾನ್, ನಾಸೀರ್, ಅಂಕನಹಳ್ಳಿ ಪುಟ್ಟ ರಾಜು, ಕಲಿಯೂರು ರಾಜೀವ್, ಸಿದ್ದಯ್ಯ, ಸಿದ್ದರಾಜು, ರವಿ ಇನ್ನಿತರರು ಹಾಜರಿದ್ದರು.

Translate »