ನಾಪೋಕ್ಲು: ನಾಪೋಕ್ಲುದಿಂದ ಅಜ್ಜಿಮುಟ್ಟಕ್ಕೆ ಹೋಗುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಕಳೆದ ಹಲವು ವರ್ಷಗ ಳಿಂದ ಈ ಅಜ್ಜಿಮುಟ್ಟ ಗ್ರಾಮದ ರಸ್ತೆಯು ತೀರಾ ಹದಗೆಟ್ಟಿದ್ದು, ಇದನ್ನು ಡಾಂಬರೀಕರಣಗೊಳಿಸಲು ರೂ. 50 ಲಕ್ಷವನ್ನು ಬಿಡುಗಡೆಗೊಳಿ ಸಿದೆ. ವಿಶೇಷ ಪ್ಯಾಕೇಜ್‍ನಡಿಯಲ್ಲಿ 20 ಲಕ್ಷದಂತೆ ಒಟ್ಟು 70 ಲಕ್ಷ ವೆಚ್ಚದಲ್ಲಿ ಕೂಡಲೇ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದÀರು. ರಸ್ತೆ ಅಗಲೀಕರಣಗೊಳಿಸಲು ರಸ್ತೆ ಬದಿಯ ಜಾಗ ವನ್ನು ಬಿಟ್ಟುಕೊಟ್ಟು ನಾಗರಿಕರು ಸಹಕರಿಸಬೇಕು ಮತ್ತು ಕಾಮ ಗಾರಿ ಕಳಪೆಯಾದಂತೆ ನೋಡಿಕೊಳ್ಳುವ ಜವಬ್ದಾರಿ ಎಲ್ಲರ ಮೇಲಿದೆ ಎಂದರು. ಅದರಂತೆ ನಾಪೋಕ್ಲು ಚೆರಿಯಪರಂಬು ಗಾಗಿ ಕಲ್ಲುಮೊಟ್ಟೆಗೆ ಹೋಗುವ ರಸ್ತೆ, ಹಳೇತಾಲೂಕು ಕುರುಳಿ ಸಂಪರ್ಕ ರಸ್ತೆ, ನಾಪೋಕ್ಲು ಇಂದಿರಾ ನಗರ ರಸ್ತೆ. ಕೋಕೇರಿ, ಕೊಳಕೇರಿ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ಪಾಡಿಯಮ್ಮಂಡ ಮುರುಳೀಧರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ತಳೂರ್ ಕಿಶೋರ್ ಕುಮಾರ್, ಎಪಿಸಿಎಂ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕೋಡಿ ಪ್ರಶನ್ನ, ಕೊಡವ ಸಮಾಜ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್, ಸದಸ್ಯರಾದ ಇಂದಿರಾ ಹರೀಶ್, ಉಮ ಪ್ರಭು, ಗ್ರಾಮ ಪಂಚಾಯತ್ ಸದಸ್ಯ ಶಿವಚಾಳಿಯಂಡ ಜಗದೀಶ್, ಅಂಬಿ, ಕುಲ್ಲೇಟೀರ ಜ್ಯೋತಿ ನಾಚಪ್ಪ, ಪಾಡಿಯಮ್ಮಂಡ ಮನು ಮಹೇಶ್, ಸಜೀತ್, ಗ್ರಾಮಸ್ಥರಾದ ಕಂಗಾಂಡ ಉತ್ತಪ್ಪ, ಅರೆಯಡ ಅಶೋಕ, ಮತ್ತಿತರರು ಇದ್ದರು.