ನಿಂದನೆ: ಮೂವರಿಗೆ ಜೈಲು
ಮಂಡ್ಯ

ನಿಂದನೆ: ಮೂವರಿಗೆ ಜೈಲು

April 17, 2019

ಪಾಂಡವಪುರ: ಲಾರಿ ತಡೆದು ಜಖಂಗೊಳಿಸಿ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮೂವರು ವ್ಯಕ್ತಿಗಳಿಗೆ ಪಟ್ಟಣದ ಹಿರಿಯ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾ ಲಯವು 5 ವರ್ಷ ಜೈಲುವಾಸ ಹಾಗೂ 20 ಸಾವಿರ ರೂ. ದಂಡ ವಿಧಿಸಿದೆ.

ಪಾಂಡವಪುರ ತಾಲೂಕಿನ ಬಿಂಡಹಳ್ಳಿ ಚಂದ್ರು, ಶಿವು ಮತ್ತು ಗುರು ಶಿಕ್ಷೆಗೊಳಗಾದವರು. 2015ರ ಆ.9ರಂದು ಬಿಂಡಹಳ್ಳಿಯ ಸಮಾಧಿ ಹಳ್ಳದ ಬಳಿ ನಾಗೇಶ್ ಎಂಬವರು ಲಾರಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಬೈಕ್‍ಗೆ ಡಿಕ್ಕಿ ಯಾಗಿದೆ. ಇದರಿಂದ ಸಿಟ್ಟಿಗೆದ್ದ ಚಂದ್ರು, ಶಿವು, ಗುರು ಲಾರಿ ಅಡ್ಡಗಟ್ಟಿ ಜಖಂಗೊಳಿಸಿ, ಚಾಲಕ ನಾಗೇಶ್‍ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.

ಈ ಸಂಬಂಧ ನಾಗೇಶ್ ಕೆ.ಆರ್.ಎಸ್. ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೆಆರ್‍ಎಸ್ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾ ರಣೆ ನಡೆಸಿದ ನ್ಯಾಯಾಧೀಶ ಬಿ.ಕೆ.ರವಿಕಾಂತ್ ಅವರು ಎಲ್ಲಾ ಆರೋಪಗಳು ಸಾಕ್ಷ್ಯಾಧಾರ ಗಳಿಂದ ರುಜುವಾತಾಗಿದೆ ಎಂದು ಅಭಿಪ್ರಾಯ ಪಟ್ಟು ಚಂದ್ರು, ಶಿವು ಮತ್ತು ಗುರು ಐಪಿಸಿ ಕಲಂ 504, 427, 114ರಡಿ ಅಪರಾಧಿಗಳು ಎಂದು ತೀರ್ಪು ನೀಡಿದರು. ಸಹಾಯಕ ಸರಕಾರಿ ಅಭಿಯೋಜಕ ಎಸ್.ಶಿವಕುಮಾರ್ ವಾದ ಮಂಡಿಸಿದರು.

Translate »