ಫಲ-ತಾಂಬೂಲ, ವಿಶೇಷ ಕರೆಯೋಲೆ ನೀಡಿ ಕಡ್ಡಾಯ ಮತದಾನಕ್ಕೆ ಮನವಿ
ಮೈಸೂರು

ಫಲ-ತಾಂಬೂಲ, ವಿಶೇಷ ಕರೆಯೋಲೆ ನೀಡಿ ಕಡ್ಡಾಯ ಮತದಾನಕ್ಕೆ ಮನವಿ

August 31, 2018

ಮೈಸೂರು: ನಾಳೆ (ಶುಕ್ರವಾರ) ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‍ನ ಕಾರ್ಯ ಕರ್ತರು ಗುರುವಾರ ಮೈಸೂರಿನಲ್ಲಿ ಮನೆ ಮನೆಗೆ ತೆರಳಿ ಮತದಾರರಿಗೆ ಫಲ ತಾಂಬೂಲ ಮತ್ತು ವಿಶೇಷ ಮತದಾನದ ಕರೆಯೋಲೆ ನೀಡಿ ಕಡ್ಡಾಯವಾಗಿ ಮತದಾನದ ಹಕ್ಕು ಚಲಾಯಿಸುವಂತೆ ಆಹ್ವಾನ ನೀಡಿದರು.

ಸಮಾಜ ಸೇವಕ ಕೆ.ರಘುರಾಂ ವಾಜ ಪೇಯಿ, ಟ್ರಸ್ಟ್‍ನ ಅಧ್ಯಕ್ಷ ವಿಕ್ರಂ ಐಯ್ಯಂ ಗಾರ್ ಇನ್ನಿತರರು ಖಿಲ್ಲೆ ಮೊಹಲ್ಲಾದ ನಟ ರಾಜ ಕಾಲೇಜು ಬಳಿ ಮನೆ ಮನೆಗೆ ತೆರಳಿ ಮತದಾರರಿಗೆ ವಿಶೇಷ ಆಹ್ವಾನ ಪತ್ರಿಕೆ ನೀಡಿ, ಫಲ ತಾಂಬೂಲ ನೀಡಿ, ಕಡ್ಡಾಯವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.

ವಿವಾಹಕ್ಕೆ ಸಂಭ್ರಮದಿಂದ ಆಹ್ವಾನ ನೀಡುವ ರೀತಿಯಲ್ಲಿಯೇ ಮತದಾರರನ್ನು ಆಹ್ವಾನಿ ಸಿದ ಕಾರ್ಯಕರ್ತರು, ಸಂವಿಧಾನಾತ್ಮಕವಾಗಿ ನೀಡಿರುವ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸುವಂತೆ ಮನವಿ ಮಾಡಿದರು.
ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯು ವಷ್ಟು ಮತದಾನ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ನಡೆಯುವುದಿಲ್ಲ ಎಂಬ ದೂರಿದೆ. ಆದ್ದರಿಂದ ಮತದಾರರು ಮತದಾನ ದಿನ ದಂದು ಮನೆಯಲ್ಲಿ ಕಾಲಹರಣ ಮಾಡದೇ ತಪ್ಪದೇ ಮತಗಟ್ಟೆಗೆ ತೆರಳಿ ಮತ ಚಲಾಯಿ ಸಬೇಕು. ಮತದಾನ ಕೇವಲ ಹಕ್ಕು ಮಾತ್ರವಲ್ಲ, ನಮ್ಮ ಕರ್ತವ್ಯವೂ ಆಗಿದೆ. ಸಮಸ್ಯೆ ಬಂದಾಗ ನಾವೇ ಆರಿಸಿದ ಪ್ರತಿನಿಧಿಗಳನ್ನು ಬೈಯ್ಯುವ ಬದಲಿಗೆ ಅಭಿವೃದ್ಧಿ ಪರ ಇರುವ ಸೂಕ್ತರನ್ನು ಆಯ್ಕೆ ಮಾಡುವ ಮೂಲಕ ನಗರದ ಪ್ರಗತಿಗೆ ಮತದಾನ ಮಾಡಬೇಕು ಎಂದರು. ಯುವ ಮತದಾರರು ನಿರಾಸಕ್ತಿ ತೋರದೆ ಮತದಾನ ದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು. ಮುಖಂಡರಾದ ಆಶಾ ನಾಗ ಭೂಷಣ್, ಡಿ.ಕೆ.ನಾಗಭೂಷಣ್, ಕಿರಣ್, ಮುಳ್ಳೂರು ಗುರುಪ್ರಸಾದ್, ಶ್ರೀನಿವಾಸ್, ತೇಜಸ್ ಶಂಕರ್, ರಾಮಚಂದ್ರ, ಯತೀಶ್ ಇದ್ದರು.

Translate »