ಕೇಂದ್ರ ರಕ್ಷಣಾ ಇಲಾಖೆಯ ಹೆಚ್ಚುವರಿ ನಿಯಂತ್ರಣಾಧಿಕಾರಿ ಸಚಿವ ಸಂಜೀವ್ ಮಿತ್ತಲ್ ಅಭಯ
ಮಡಿಕೇರಿ: ದೇಶ ರಕ್ಷಣೆಗೆ ಕೊಡಗು ಜಿಲ್ಲೆ ಅತೀ ಹೆಚ್ಚು ಸೈನಿಕರನ್ನು ಕೊಡುಗೆಯಾಗಿ ನೀಡಿದ್ದು, ಇಂತಹ ಸಾಹಸಿ ಜಿಲ್ಲೆಯ ನಿವೃತ್ತ ಸೈನಿಕರಿಗೆ ಪಿಂಚಣಿ ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಯಾಗದಂತೆ ಕ್ರಮ ವಹಿಸಲಾಗುತ್ತದೆ ಎಂದು ಕೇಂದ್ರ ರಕ್ಷಣಾ ಇಲಾಖೆಯ ಹೆಚ್ಚುವರಿ ನಿಯಂತ್ರಣಾಧಿಕಾರಿ (ಪಿಂಚಣಿ) ಸಂಜೀವ್ ಮಿತ್ತಲ್ ಅಭಯ ನೀಡಿದ್ದಾರೆ.
ಆಂಧ್ರ ಪ್ರದೇಶದ ಅಲಹಬಾದ್‍ನಲ್ಲಿ ರುವ ಕೇಂದ್ರ ರಕ್ಷಣಾ ಇಲಾಖೆಯ ಲೆಕ್ಕ ಪತ್ರ (ಪಿಂಚಣಿ) ವಿಭಾಗದ ವತಿಯಿಂದ ನಗರದ ಕೆಳಗಿನ ಗೌಡ ಸಮಾಜದಲ್ಲಿ ಏರ್ಪಡಿಸಲಾಗಿರುವ 2 ದಿನಗಳ 164ನೇ ರಕ್ಷಣಾ ಪಿಂಚಣಿ ಅದಾಲತ್‍ಗೆ ರಕ್ಷಣಾ ಇಲಾಖೆಯ ಹೆಚ್ಚುವರಿ ನಿಯಂತ್ರಣಾಧಿ ಕಾರಿ ಸಂಜೀವ್ ಮಿತ್ತಲ್ ದೀಪ ಬೆಳ ಗುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ರಕ್ಷಣಾ ವಿಭಾಗಗಳ ಸೈನಿಕರ ನಿವೃತ್ತಿ ನಂತರ ಅವರಿಗೆ ಅಥವಾ ಅವರ ಕುಟುಂಬದವ ರಿಗೆ ಸಿಗಬೇಕಾದ ಪಿಂಚಣಿ ಹಾಗೂ ಇನ್ನಿ ತರ ಸೌಲಭ್ಯಗಳನ್ನು ಒದಗಿಸುವುದು ರಕ್ಷಣಾ ಸಚಿವಾಲಯದ ಜವಾಬ್ದಾರಿಯಾಗಿದೆ. ಪಿಂಚಣಿಗೆ ಸಂಬಂಧಿಸಿದಂತೆ ನ್ಯೂನತೆ ಗಳು ಇದ್ದಲ್ಲಿ ಅವುಗಳಿಗೆ ಸ್ಥಳದಲ್ಲಿಯೇ ಪರಿ ಹಾರ ಕಂಡುಕೊಳ್ಳಲು ಪಿಂಚಣಿ ಅದಾಲತ್ ನೆರವಾಗಲಿದೆ. ಇದರ ಸೌಲಭ್ಯವನ್ನು ಜಿಲ್ಲೆಯ ಎಲ್ಲಾ ಮಾಜಿ ಸೈನಿಕರು ಪಡೆದುಕೊಳ್ಳ ಬೇಕು ಎಂದು ಮನವಿ ಮಾಡಿದರು.
ಆಗಸ್ಟ್ ತಿಂಗಳಲ್ಲಿ ಮೈಸೂರಿನಲ್ಲಿ ನಡೆದ ಪಿಂಚಣಿ ಅದಾಲತ್‍ಗೆ ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ಇದ್ದ ಕಾರಣ ಹಲವು ಮಂದಿ ಬರಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಯಲ್ಲಿ ಮಡಿಕೇರಿಯಲ್ಲಿ ಅದಾಲತ್ ಆಯೋ ಜಿಸಿರುವುದಾಗಿ ತಿಳಿಸಿದರು. ನಿವೃತ್ತ ಸೈನಿಕ ರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿ ಸಲು ಇಲಾಖೆ ಬದ್ಧವಾಗಿದೆ ಎಂದು ಸಂಜೀವ್ ಮಿತ್ತಲ್ ಅಭಯ ನೀಡಿದರು.
ಬೆಂಗಳೂರಿನ ರಕ್ಷಣಾ ಇಲಾಖೆ ಲೆಕ್ಕ ಪತ್ರ ವಿಭಾಗದ ಐಡಿಎಸ್ ಅಧಿಕಾರಿ ಕೆ. ಸತೀಶ್‍ಬಾಬು ಮಾತನಾಡಿ, ರಕ್ಷಣಾ ಇಲಾ ಖೆಯ ಅಡಿಯಲ್ಲಿ 28 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿದ್ದಾರೆ. ಅವರಿಗೆ ಪಿಂಚಣಿ ನೀಡಲು ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ. 1.8 ಲಕ್ಷ ಕೋಟಿಯಷ್ಟು ರೂ. ಹಣವನ್ನು ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿ ದರು. ಮಾಜಿ ಸೈನಿಕರ ಪಿಂಚಣಿ ಸಮಸ್ಯೆ ಗಳಿಗೆ ಶೀಘ್ರವಾಗಿ ಪರಿಹಾರ ನೀಡಲು ಹಾಗೂ ಪಿಂಚಣಿಗೆ ಸಂಬಂಧಿಸಿದ ಮಾಹಿತಿ ಗಳನ್ನು ನೀಡಲು ಪ್ರತ್ಯೇಕ ಆನ್‍ಲೈನ್ ಹಾಗೂ ಟೋಲ್ ಫ್ರೀ ಸಹಾಯವಾಣಿ ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಟೋಲ್ ಫ್ರೀ ಸಂಖ್ಯೆ 1800-180-5325ಕ್ಕೆ ಕರೆ ಮಾಡಿ, ಪಿಂಚಣಿದಾರರು ತಮ್ಮ ಸಮಸ್ಯೆ ಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಸತೀಶ್ ಬಾಬು ವಿವರಿಸಿದರು.
ಕೊಡಗು ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕಿ ಗೀತಾ ಎಂ. ಶೆಟ್ಟಿ ಮಾತನಾಡಿ, ಭೂ ಸೇನೆ, ವಾಯುದಳ, ನೌಕಾದಳ ಸೇರಿ ದಂತೆ ಸೇನೆಯ ವಿವಿಧ ವಿಭಾಗ ಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಾಜಿ ಸೈನಿಕರ ಪಿಂಚಣಿಗೆ ಸಂಬಂಧಿಸಿ ದಂತೆ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಇತ್ಯ ರ್ಥಪಡಿಸಲು ಇಲಾಖೆ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ. ಪೆನ್ಷನ್ ಸಂಬಂ ಧಿತ ಯಾವುದೇ ಸಮಸ್ಯೆಗಳಿದ್ದರೆ ನಿಗದಿತ ಅರ್ಜಿ ನಮೂನೆ ಯಲ್ಲಿ ಮಾಹಿತಿ ನೀಡಿ ಕೂಪನ್ ಪಡೆದು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಿಕೊಂಡು ಅದಾಲತ್‍ನ ಉಪ ಯೋಗ ಪಡೆದುಕೊಳ್ಳುವಂತೆ ಗೀತಾ ಸಲಹೆ ನೀಡಿದರು. ರಕ್ಷಣಾ ಇಲಾಖೆಯ ಪಿಂಚಣಿ ವಿಭಾಗದ ಪ್ರಭಾರ ನಿಯಂತ್ರಣಾ ಧಿಕಾರಿ ಪ್ರವೀಣ್ ಕುಮಾರ್ ಮಾತನಾಡಿ, ಪಿಂಚಣಿ ಅದಾಲತ್ ಒಂದು ಪರಿಣಾಮ ಕಾರಿ ಆಂದೋಲನವಾಗಿದೆ. ದೇಶದೆÀಲ್ಲೆಡೆ ನಡೆಯುವ ಪಿಂಚಣಿ ಅದಾಲತ್‍ನಲ್ಲಿ ಭಾಗ ವಹಿಸುವ ಮೂಲಕ ನಿವೃತ್ತ ಸೈನಿಕ ಪಿಂಚ ಣಿದಾರರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು ಎಂದು ತಿಳಿಸಿದರು. ಸಭೆಯ ಆರಂಭ ದಲ್ಲೇ ಕೆಲವು ಪಿಂಚಣಿದಾರರು ತಮ್ಮ ನಿವೃತ್ತಿ ವೇತನದ ಸಮಸ್ಯೆಗಳ ಕುರಿತು ಅಳಲುಗಳನ್ನು ತೋಡಿಕೊಂಡರೇ, ಮತ್ತೆ ಕೆಲ ವರು ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಈ ಸಂದರ್ಭ ಪಿಂಚ ಣಿಗೆ ಸಂಬಂಧಿಸಿದ ಅಹವಾಲುಗಳನ್ನು ಅಧಿಕಾರಿಗಳು ಆಲಿಸಿ ಸ್ಥಳದಲ್ಲೇ ಇತ್ಯರ್ಥ ಪಡಿಸಲು ಮುಂದಾದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ರಕ್ಷಣಾ ಇಲಾಖೆ ಲೆಕ್ಕಪತ್ರ ವಿಭಾಗದ ಅಧಿಕಾರಿ ವಿಭಾಸೂದ್, ಡಿಎಆರ್‍ಎಲ್ ಅಧಿಕಾರಿ ಗಳಾದ ಎಂ.ಎಸ್. ಲೋಲಕ್ಷ, ಬಿ.ಎಂ.ರಾವ್, ರಂಜನ್ ಕುಮಾರ್ ಇತರರಿದ್ದರು.