ಮಡಿಕೇರಿ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನೆ
ಕೊಡಗು

ಮಡಿಕೇರಿ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನೆ

February 2, 2019

ಮಡಿಕೇರಿ: ಮಡಿಕೇರಿ ತಾಲೂಕು ಪಂಚಾಯಿತಿಯ 2018-19ನೇ ಸಾಲಿನ ಜನ ವರಿ ಅಂತ್ಯದವರೆಗಿನ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ಕರೆಯಲಾ ಗಿತ್ತು. ನಗರದ ಎಸ್.ಜಿ.ಎಸ್.ವೈ ಸಭಾಂಗಣ ದಲ್ಲಿ ಆಯೋಜಿಸಲಾದ ಸಭೆ ನಿಗಧಿತ ಸಮ ಯಕ್ಕೆ ಪ್ರಾರಂಭವಾಗಿ ಗಂಭೀರ ಚರ್ಚೆ ಗಳಿಗೆ ವೇದಿಕೆ ಒದಗಿಸಿತ್ತು. ವಿವಿಧ ಗ್ರಾಮ ಗಳ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಕೆಲ ಗ್ರಾಮ ಪಂಚಾ ಯಿತಿಗಳ ಅಧ್ಯಕ್ಷರು ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗಿದ್ದರು.

ಸಭೆಯ ಪ್ರಾರಂಭದಲ್ಲಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಗ್ರಾಮ ಪಂಚಾ ಯಿತಿಗಳ ಸ್ವಂತ ಕಟ್ಟಡ, ಸ್ಮಶಾನ ಜಾಗ, ನಿವೇಶನ ರಹಿತರಿಗೆ ಮೀಸಲಿಟ್ಟಿರುವ ಪ್ರದೇಶ ಮತ್ತು ತ್ಯಾಜ್ಯ ವಿಲೇವಾರಿಗೆ ಗುರು ತಿಸಿರುವ ಜಾಗದ ಪ್ರಕ್ರಿಯೆಗಳ ಬಗ್ಗೆ ಪಿ.ಡಿ.ಓ. ಗಳಿಂದ ಮಾಹಿತಿ ಬಯಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಯಿಂದ ಕೈಗೊಂಡಿರುವ ಕ್ರಮಗಳನ್ನು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸಭೆಗೆ ವಿವರಿಸಿದರು.

ಕೆಲ ಗ್ರಾಪಂಗಳಿಗೆ ಮಾತ್ರವೇ ಸ್ವಂತ ಕಟ್ಟಡವಿದ್ದರೆ ಮತ್ತೆ ಕೆಲವು ಬಾಡಿಗೆ ಕಟ್ಟ ಡಗಳಲ್ಲಿ ನಡೆಯುತ್ತಿವೆ. ಸ್ಮಶಾನಕ್ಕೆ, ಕಸ ವಿಲೇವಾರಿಗೆ ಸ್ಥಳ ಗುರುತಿಸಿದ್ದೇವೆ. ಕೆಲವು ಕಡೆಗಳಲ್ಲಿ ಸರ್ವೆ ನಂಬರ್ ಸಮಸ್ಯೆ ಇದೆ. ಮತ್ತೆ ಕೆಲವು ಕಡೆಗಳಲ್ಲಿ ಅರಣ್ಯ ಇಲಾ ಖೆಯಿಂದ ನಿರಾಪೇಕ್ಷಣ ಪತ್ರ ಸಿಗಲಿಲ್ಲ ಎಂದು ಪಿ.ಡಿ.ಓ.ಗಳು ಸಭೆಯಲ್ಲಿ ದೂರಿ ಕೊಂಡರು.

ಪಂಚಾಯಿತಿಯಿಂದ ಕೈಗೊಳ್ಳ ಲಾಗಿರುವ ಕ್ರಮಗಳ ಎಲ್ಲಾ ಕಡತಗಳನ್ನು ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ತಹಶೀಲ್ದಾರ್‍ಗೆ ಕಳುಹಿಸಿದ್ದೇವೆ.

ಮೇಲಾಧಿಕಾರಿಗಳ ಮುಂದಿನ ಕ್ರಮಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿ ಕಾರಿಗಳು ಸಭೆಗೆ ಉತ್ತರಿಸಿ ತಮ್ಮ ಕೈ ತೊಳೆದುಕೊಂಡರು.

ಪಿಡಿಓಗಳ ಅಸಹಾಯಕತೆಯ ಉತ್ತರಕ್ಕೆ ಅಸಮಧಾನಗೊಂಡ ಶಾಸಕ ಕೆ.ಜಿ. ಬೋಪಯ್ಯ, ಎಲ್ಲಾ ಗ್ರಾಮ ಪಂಚಾಯಿತಿ ಗಳು ಒಂದೇ ಸಮಸ್ಯೆ ಎದುರಿಸುತ್ತಿವೆ. 2025ರ ಒಳಗಾಗಿ ಪ್ರತಿಯೊಬ್ಬರಿಗೂ ಸೂರು ಒದಗಿ ಸಬೇಕೆನ್ನುವುದು ಕೇಂದ್ರ ಸರಕಾರದ ಗುರಿ ಯಾಗಿದೆ. ಸ್ಮಶಾನ ಜಾಗ ಕಾಯ್ದಿರಿಸು ವುದು ಕೂಡ ಮೂಲಭೂತ ಸೌಲಭ್ಯ ಗಳಲ್ಲಿ ಒಂದಾಗಿದೆ. ಈ ಎಲ್ಲಾ ಸಮಸ್ಯೆ ಗಳನ್ನು ಪರಿಹರಿಸಲು ಎದುರಾಗಿರುವ ಸಮಸ್ಯೆಗಳೇನು ಎಂದು ತಾಹಶೀಲ್ದಾರ್ ಮತ್ತು ತಾಪಂ ಕಾರ್ಯ ನಿರ್ವಹ ಣಾಧಿಕಾರಿ ಅವರುಗಳೊಂದಿಗೆ ಗಂಭೀರ ಚರ್ಚೆಯಲ್ಲಿ ತೊಡಗಿದರು.

ಸಿಇಓ ಮತ್ತು ತಹಶೀಲ್ದಾರ್ ಅವರು ಗಳೊಂದಿಗೆ ದೀರ್ಘ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಪ್ರತಿ ಗ್ರಾಮ ಪಂಚಾಯಿ ತಿಗಳ ಸಮಸ್ಯೆಯನ್ನು ಪಟ್ಟಿ ಮಾಡಿ ತನಗೆ ನೀಡಬೇಕು. ಬಹುತೇಕ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಯಾದ ಕಾರಣ ತಾನು ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳೊಂದಿಗೆ ವ್ಯವ ಹರಿಸಿ ಸಮಸ್ಯೆ ಬಗೆಹರಿಸಲು ಪ್ರಯ ತ್ನಿಸುತ್ತೇನೆ. ಗ್ರಾಮ ಪಂಚಾಯಿತಿ ಅಭಿ ವೃದ್ದಿ ಅಧಿಕಾರಿಗಳೂ ಕೂಡ ಈಗಾ ಗಲೇ ಮೇಲಾಧಿಕಾರಿಗಳಿಗೆ ಸಲ್ಲಿಸಿರುವ ಕಡತಗಳ ಕುರಿತು ಮೇಲ್ವಿ ಚಾರಣೆ ನಡೆಸುತ್ತಿರಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಗಂಭೀರ ಚರ್ಚೆ ವೇಳೆ ಪಿಡಿಓಗಳ ಮೊಬೈಲ್ ಗೇಮ್
ತಮ್ಮ ತಮ್ಮ ಪಂಚಾಯಿತಿ ವತಿಯಿಂದ ಮಾಡಲಾಗಿರುವ ಪ್ರಾಥಮಿಕ ಕ್ರಮಗಳನ್ನು ಸಭೆಗೆ ವಿವರಿಸಿ ನಿರುಮ್ಮಳರಾದ ಪಿ.ಡಿ.ಓ.ಗಳು, ಗಂಭೀರ ಚರ್ಚೆ ನಡೆಯುತ್ತಿದ್ದ ಸಂದರ್ಭ ಮೊಬೈಲ್‍ಗಳಲ್ಲಿ ಮುಳುಗಿ ಹೋಗಿದ್ದರು. ಕೆಲವು ಪಿ.ಡಿ.ಓ.ಗಳು ಫೇಸ್‍ಬುಕ್‍ನಲ್ಲಿ ಕಾಲ ಕಳೆದರೆ, ಮತ್ತೆ ಕೆಲವರು ಕ್ಯಾಂಡಿಕ್ರಷ್ ಆಟದಲ್ಲಿ ತಲ್ಲೀನರಾಗಿದ್ದರು.

ಇನ್ನು ಮಹಿಳಾ ಪಿ.ಡಿ.ಓ. ಒಬ್ಬರು ತಾವೂ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ‘ಪಬ್ ಜೀ’ ಗೇಮ್ ಆಡುವ ಮೂಲಕ ತಮ್ಮ ಪ್ರತಿಭೆ ಯನ್ನು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರದರ್ಶಿಸಿದರು. ಶಾಸಕರು ನೀಡಿದ ಸೂಚನೆಯನ್ನು ಪಾಲಿ ಸುವುದಾಗಿ ತಲೆ ಆಡಿಸಿದ ಕೆಲವು ಪಿ.ಡಿ.ಓ.ಗಳು ತಮ್ಮ ಮೊಬೈ ಲ್‍ಗಳಲ್ಲಿ ಆಡಲಾಗುತ್ತಿದ್ದ ಆಟಗಳನ್ನು ಮುಂದುವರಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದರು..!

ಪ್ರಕೃತಿ ವಿಕೋಪಕ್ಕೆ ಸಿಲುಕಿರುವ ಗ್ರಾಮಗಳ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಚಡಪಡಿಸುತ್ತಿರುವ ಸಂದರ್ಭದಲ್ಲಿ ಗ್ರಾಮಸ್ಥರ ನೆರವಿಗೆ, ಅವರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ತಮ್ಮ ಕರ್ತವ್ಯವನ್ನು ಮೀಸಲಿಡಬೇಕಿದ್ದ ಕೆಲವು ಪಿ.ಡಿ.ಓ.ಗಳು, ಮೊಬೈಲ್ ಗೇಮ್ ಆಡುವ ಮೂಲಕ ತ್ರೈ ಮಾಸಿಕ ಸಭೆಯಲ್ಲಿ ಟೈಂ ಪಾಸ್ ಮಾಡಿ ಸಭೆಯ ಗೌರವಕ್ಕೆ ಮಸಿ ಬಳಿದರು.

Translate »