ಮೈಸೂರು,ಫೆ.15(ವೈಡಿಎಸ್)-ಕಲಾ ಮಂದಿರದಲ್ಲಿ ಶನಿವಾರ ಪ್ರದರ್ಶನಗೊಂಡ `ಮುಖ್ಯಮಂತ್ರಿ’ ನಾಟಕದ 701ನೇ ಪ್ರದರ್ಶನ ವನ್ನು ಜನರು ಮುಗಿಬಿದ್ದು ವೀಕ್ಷಿಸಿದರು.
ಕಲಾಮಂದಿರದಲ್ಲಿ ಪ್ರದರ್ಶನಗೊಂಡ ಮುಖ್ಯಮಂತ್ರಿ ನಾಟಕ ಹೌಸ್‍ಫುಲ್ ಆಗಿತ್ತು. ಈವರೆಗೆ 7 ಶತಕ ಪ್ರದರ್ಶನ ಕಂಡಿರುವ ಮುಖ್ಯಮಂತ್ರಿ ನಾಟಕಕ್ಕೆ ರಂಗಾಸಕ್ತರು ಮುಗಿ ಬಿದ್ದು ವೀಕ್ಷಿಸಿದರು. ಆನ್‍ಲೈನ್, ಆಫ್‍ಲೈನ್ ಎರಡರಲ್ಲೂ ನಾಟಕದ ಟಿಕೆಟ್ ಬಿಕರಿ ಯಾಗಿತ್ತು. ಕೆಲವರು ಟಿಕೆಟ್ ಸಿಗದೆ ಹಿಂದಿರುಗಿದರು. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ 2ನೇ ದಿನವಾದ ಶನಿ ವಾರ, ಬೆಂಗಳೂರಿನ ಕಲಾಗಂಗೋತ್ರಿ ತಂಡವು ಟಿ.ಎಸ್.ಲೋಹಿತಾಶ್ವ ರಚನೆಯ ಡಾ.ಬಿ.ವಿ.ರಾಜಾರಾಂ ನಿರ್ದೇಶನದ `ಮುಖ್ಯಮಂತ್ರಿ’(ಕನ್ನಡ) ನಾಟಕದಲ್ಲಿ ಉದ ಯಾಚಲ ಪ್ರಾಂತ್ಯದ ಮುಖ್ಯಮಂತ್ರಿ ಕೃಷ್ಣ ದ್ವೈಪಾಯನ ಕೌಶಲ್, ಅಧಿಕಾರ ನಡೆಸುತ್ತಿ ರುವಾಗಲೇ ಪಕ್ಷದ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದರಿಂದ ಮುಖ್ಯ ಮಂತ್ರಿ ಹುದ್ದೆಯಿಂದ ಕೆಳಗಿಳಿಯುತ್ತಾರೆ. ಈ ಘಟನೆಯಲ್ಲಿ ರಾಜ್ಯ ರಾಜಕೀಯದಲ್ಲಿ ಒಂದು ರೀತಿಯ ಗೊಂದಲ ಉಂಟಾಗು ತ್ತದೆ. ಈ ವೇಳೆ ರಾಜ್ಯದ ಹಿತದೃಷ್ಟಿಯಿಂದ ಮತ್ತೋರ್ವನ ಆಯ್ಕೆಯಾಗುವರೆಗೂ 2 ದಿನ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ರಾಜ್ಯಪಾಲರು ಕೌಶಲರನ್ನು ಕೋರುತ್ತಾರೆ. ಅದರಂತೆ ಮರು ದಿನ ಬೆಳಿಗ್ಗೆ 6ರಿಂದ ರಾತ್ರಿ 12 ಗಂಟೆ ಅವಧಿಯಲ್ಲಿ ಪಕ್ಷದ ಸದಸ್ಯರ ವಿಶ್ವಾಸ ಗಳಿ ಸುವ ರಾಜಕಾರಣದ ಚಾಕಚಕ್ಯತೆ ಹಾಗೂ ಮುತ್ಸದ್ದಿತನವನ್ನು ಮೆರೆಯುವ ಮುಖ್ಯ ಮಂತ್ರಿ ಕೌಶಲ್, ರಾಜಕಾರಣಿಗಳ ರೂಪ ವನ್ನು ಬಯಲು ಮಾಡುವ ಸನ್ನಿವೇಶ ಗಳು ಪ್ರೇಕ್ಷಕರ ಮಚ್ಚುಗೆಗೆ ಪಾತ್ರವಾದವು.
ಲಖನೌನ ಎನ್‍ಐಪಿಎ ತಂಡವು ಬೋಧಾ ಯನ ರಚನೆಯ ಸೂರ್ಯಮೋಹನ ಕುಲ ಶ್ರೇಷ್ಠ ನಿರ್ದೇಶನದ `ಭಗವದಜ್ಜುಕೀಯಮ್’ (ಹಿಂದಿ) ನಾಟಕ ಕಿರುರಂಗಮಂದಿರದಲ್ಲಿ, ಮುಂಬೈನ ವರ್ಕಿಂಗ್ ಟೈಟಲ್ ತಂಡದ, ರಾಮು ರಾಮನಾಥನ್ ನಿರ್ದೆಶನದ `ಮಹ ದೇವಭಾಯ್’(ಇಂಗ್ಲಿಷ್/ಹಿಂದಿ) ನಾಟ ಕವು ಭೂಮಿಗೀತದಲ್ಲಿ, ಮುಂಬೈನ ರಾಹಿ ಥಿಯೇಟರ್ ಕಂಪೆನಿ ತಂಡವು ಪುನರ್ವಸು ಮಾಲ್ವಿಯಾ ರಚನೆಯ ನೇಹಾ ಸಿಂಗ್ ನಿರ್ದೇಶನದ `ಝಲ್ಕರಿ’ ಹಿಂದಿ ಮತ್ತು ಬುದೇಲ್‍ಖಂಡ ಭಾಷೆಯ ಸಂಗೀತ ಪ್ರಧಾನ ನಾಟಕವು ವನರಂಗದಲ್ಲಿ ಶನಿ ವಾರ ಸಂಜೆ ಪ್ರದರ್ಶನಗೊಂಡವು.