ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕøತಿಕ ಸ್ಪರ್ಧೆಗೆ ಚಾಲನೆ
ಮೈಸೂರು

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕøತಿಕ ಸ್ಪರ್ಧೆಗೆ ಚಾಲನೆ

January 29, 2019

ಮೈಸೂರು: ಮೈಸೂ ರಿನ ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿ ಆಯೋಜಿಸಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗೆ ಇಂದು ಚಾಲನೆ ದೊರೆಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಸಂಘದ ಬೆಂಗಳೂರು ಹಾಗೂ ಮೈಸೂರು ಶಾಖೆ ಮತ್ತು ಮೈಸೂರು ಜಿಲ್ಲಾಡಳಿತದ ಸಹಯೋಗ ದಲ್ಲಿ ಇಂದಿನಿಂದ ಜ.30ರವರೆಗೆ ನಡೆಯ ಲಿರುವ ಸ್ಪರ್ಧೆಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಗಣ್ಯರೊಡಗೂಡಿ ಬಲೂನ್‍ಗಳ ಗುಚ್ಛವನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ರಹೀಮ್ ಖಾನ್, ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಾ ದರೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ. ಹಾಗಾಗಿ ಇಂದಿನ ಒತ್ತಡದ ದಿನಗಳಲ್ಲಿ ಪ್ರತಿಯೊಬ್ಬರೂ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಯಲ್ಲಿ ಭಾಗಿ ಯಾಗಬೇಕು. ಈ ನಿಟ್ಟಿನಲ್ಲಿ ಕ್ರೀಡೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲು, ಇಲಾಖೆಗೆ 500 ಕೋಟಿ ರೂ. ಹೆಚ್ಚಿನ ಅನುದಾನ ಕೋರಿದ್ದೇವೆ. ಮುಂದಿನ ಬಜೆಟ್‍ನಲ್ಲಿ ಅನು ದಾನ ನೀಡಬೇಕೆಂಬ ನಮ್ಮ ಮನವಿಗೆ, ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕ್ರೀಡಾ ಇಲಾಖೆ ಬಗ್ಗೆ ಸಮಗ್ರ ಮಾಹಿತಿಯನ್ನು ಎಲ್ಲರಿಗೂ ತಲುಪಿಸಬೇಕೆಂಬ ಉದ್ದೇಶ ದಿಂದ ಸಹಾಯವಾಣಿ ಆರಂಭಿಸಲಾಗಿದೆ. ಈ ಸೇವೆಯನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂದು ತಿಳಿಸಿದರು.

ಸಚಿವ ಸಾ.ರಾ.ಮಹೇಶ್ ಮಾತನಾಡಿ, ಸರ್ಕಾರದ ಯಾವುದೇ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನವಾಗುವಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಪಾತ್ರ ಪ್ರಮುಖವಾದುದು. ನೀವೆಲ್ಲಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಡರಾಗಿದ್ದೀರಿ. ಎಲ್ಲರೂ ಮನಃಸಾಕ್ಷಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಿದರೆ ಸಮಾಜ ಸುಬೀಕ್ಷವಾಗಿರುತ್ತದೆ. ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡುತ್ತೇನೆ ಎಂದರು.
ಆಕರ್ಷಕ ಪಥ ಸಂಚಲನ: ಇದಕ್ಕೂ ಮುನ್ನ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಯ ಆತಿಥ್ಯ ವಹಿಸಿರುವ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಕ್ರೀಡಾಪಟುಗಳು ಆಕರ್ಷಕ ಪಥಸಂಚ ಲನ ನಡೆಸಿದರು. ಉತ್ಸಾಹ ತುಂಬುವಂತಿದ್ದ ಪೊಲೀಸ್ ವಾದ್ಯಗೋಷ್ಠಿಯ ಸಂಗೀತಕ್ಕೆ ಆಯಾಯ ಜಿಲ್ಲೆಯ ನೌಕರರ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ನೂರಾರು ಕ್ರೀಢಾಳುಗಳು ಹೆಜ್ಜೆಹಾಕಿ, ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ವೀರಗಾಸೆ, ಡೊಳ್ಳು ಕುಣಿತ, ನಗಾರಿ, ಪೂಜಾ ಕುಣಿತ ಇನ್ನಿತರ ಜಾನಪದ ಕಲಾತಂಡಗಳು ಮೆರಗು ಹೆಚ್ಚಿಸಿದ್ದವು. ವೇದಿಕೆಯಲ್ಲಿ ಸಿ.ಎಂ.ನರ ಸಿಂಹಮೂರ್ತಿ ಮತ್ತು ತಂಡದ ಕಲಾವಿ ದರು ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿ, ಮೆಚ್ಚುಗೆ ಗಳಿಸಿದರು.

ಮೂರನೇ ಬಾರಿಗೆ ಆತಿಥ್ಯ: ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಕೂಟದ ಆತಿಥ್ಯ ಮೈಸೂರಿಗೆ ಮೂರನೇ ಬಾರಿಗೆ ಲಭಿಸಿದೆ. ಈ ಹಿಂದೆ 1996, 2009ರಲ್ಲಿ ಕ್ರೀಡಾಕೂಟ ನಡೆದಿತ್ತು. ಇದೀಗ ಮೂರನೇ ಬಾರಿಗೆ ಆಯೋಜನೆ ಗೊಂಡಿದ್ದು, ಇಂದಿನಿಂದ ಜ.30ರವರೆಗೆ ನೌಕರರು ವಿವಿಧ ಕ್ರೀಡೆ ಹಾಗೂ ಸಾಂಸ್ಕø ತಿಕ ಸ್ಪರ್ಧೆಗಳಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 9,500ಕ್ಕೂ ಹೆಚ್ಚು ನೌಕರರು ಪಾಲ್ಗೊಳ್ಳಲಿದ್ದಾರೆ.

ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಶಾಸಕ ತನ್ವೀರ್ ಸೇಠ್, ಮೈಸೂರು ಅಥ್ಲೆಟಿಕ್ ಸಂಸ್ಥೆಯ ಅಧ್ಯ ಕ್ಷರೂ ಆದ ಮಾಜಿ ಶಾಸಕ ವಾಸು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಕೆ.ರಾಮು, ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ ಡಾ.ಜಿ.ಕಲ್ಪನಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಕೆ.ಶ್ರೀನಿ ವಾಸ್, ಮೈಸೂರು ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್, ಜಿಪಂ ಸಿಇಓ ಕೆ.ಜ್ಯೋತಿ, ಸಂಘದ ಗೌರವಾಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ, ಕಾರ್ಯಾ ಧ್ಯಕ್ಷ ಎ.ಪುಟ್ಟಸ್ವಾಮಿ, ಖಜಾಂಚಿ ಸಿ.ಎಸ್. ಷಡಾಕ್ಷರಿ, ಪ್ರಧಾನ ಕಾರ್ಯದರ್ಶಿ ಮಾಲತೇಶ ವೈ.ಅಣ್ಣಿಗೇರಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಚಾಮುಂಡಿ ವಿಹಾರ ಕ್ರೀಡಾಂಗಣ ವಿರೂಪ
ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆ ಆಯೋಜನೆಯಿಂದ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣ ವಿರೂಪಗೊಂಡಿದೆ. ಮುಖ್ಯದ್ವಾರದಿಂದ ಆರಂಭವಾಗಿ ಕ್ರೀಡಾಂಗಣದ ತುಂಬೆಲ್ಲಾ ಫ್ಲೆಕ್ಸ್‍ಗಳನ್ನು ಅಳವಡಿಸಲಾಗಿದೆ. ಯಾವುದೇ ರಾಜಕೀಯ ಸಮಾವೇಶದಲ್ಲೂ ಕಾಣದಷ್ಟು ಫ್ಲೆಕ್ಸ್ ಹಾಗೂ ಕಟೌಟ್‍ಗಳು ರಾರಾಜಿಸುತ್ತಿವೆ. ಎಲ್ಲಾ ಪಕ್ಷಗಳ ನಾಯಕರಿ ಗಷ್ಟೇ ಅಲ್ಲದೆ ಅಧಿಕಾರಿಗಳನ್ನೂ ಸ್ವಾಗತಿಸಲು ಹೀಗೆ ಕ್ರೀಡಾಂಗಣವನ್ನೇ ವಿರೂಪಗೊ ಳಿಸಲಾಗಿದೆ. ಮೈಸೂರು ಫ್ಲೆಕ್ಸ್ ಮುಕ್ತ ಎಂದು ಬೊಬ್ಬೆ ಹೊಡೆಯುವ ನಗರಪಾಲಿಕೆ ಇತ್ತ ಸುಳಿದೇ ಇಲ್ಲ.

ಸಾರ್ವಜನಿಕರಿಗೆ ಕಠಿಣವಾಗಿ ಎಚ್ಚರಿಕೆ ನೀಡುವ ಅಧಿಕಾರಿ ಗಳು, ಈ ಅದ್ವಾನವನ್ನು ಕಂಡೂ ಕಾಣದಂತೆ ಇದ್ದಾರೆ. ಲಕ್ಷಾಂತರ ರೂ. ವ್ಯಯಿಸಿ, ಹೆಜ್ಜೆ ಹೆಜ್ಜೆಗೂ ಫ್ಲೆಕ್ಸ್ ಅಳವಡಿಸುವ ಅಗತ್ಯವೇನಿತ್ತು?. ಗಣ್ಯರು, ಮೇಲಧಿಕಾರಿಗಳನ್ನು ಈ ರೀತಿಯಲ್ಲಿ ಸ್ವಾಗತಿಸುವ ಅಗತ್ಯವಿತ್ತೇ?. ಹೀಗೆ ಮಾಡಬೇಕೆಂದು ಅವರೇನು ಬಯಸಿದ್ದರೇ? ಎಂದು ಪ್ರಶ್ನಿಸಿದ ಕೆಲ ನೌಕರರು, ಕ್ರೀಡಾಕೂಟದಲ್ಲಿ ಭಾಗಿಯಾಗಲು ದೂರದ ಜಿಲ್ಲೆಗಳಿಂದ ಬಂದಿರುವ ನೌಕರರಿಗೆ ಸೂಕ್ತ ರೀತಿ ವ್ಯವಸ್ಥೆ ಮಾಡಿಲ್ಲ. ನೂರಾರು ಮಂದಿಗೆ ಟ್ರ್ಯಾಕ್ ಸೂಟ್ ನೀಡಿಲ್ಲ. ಸೂಕ್ತ ರೀತಿಯಲ್ಲಿ ಓಓಡಿಗೆ ಅರ್ಜಿ ನೀಡಿ, ನೋಂದಣಿ ಮಾಡಿಕೊಳ್ಳುತ್ತಿಲ್ಲ. ಅನೇಕರು ವಸತಿ ವ್ಯವಸ್ಥೆಯಿಲ್ಲದೆ ತೊಂದರೆ ಅನುಭವಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಾ.ಬಿ.ರಮಣರಾವ್‍ಗೆ ಡಾ.ಸಿ.ಎನ್.ಮೃತ್ಯುಂಜಯಪ್ಪ

Translate »