ವಿಲೀನ ಪ್ರಕ್ರಿಯೆಗೆ ಹಿಂದಿನ ಸೇವೆ ಪರಿಗಣನೆಗೆ ನೌಕರರ ಆಗ್ರಹ
ಮೈಸೂರು

ವಿಲೀನ ಪ್ರಕ್ರಿಯೆಗೆ ಹಿಂದಿನ ಸೇವೆ ಪರಿಗಣನೆಗೆ ನೌಕರರ ಆಗ್ರಹ

December 8, 2019

ಮೈಸೂರು,ಡಿ.7(ಆರ್‍ಕೆ)-ವಿವಿಧ ಇಲಾಖೆ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳೊಂ ದಿಗೆ ವಿಲೀನ ಪ್ರಕ್ರಿಯೆಗೆ ವಿಧೇಯಕ ಜಾರಿಗೆ ಬಂದ ಹಿಂದಿನ ಅವಧಿ ವೃತ್ತಿ ಶಿಕ್ಷಣ ಇಲಾಖೆ (ಜೆಓಸಿ) ನೌಕರರ ಸೇವೆಯನ್ನೂ ಪರಿಗಣಿಸಬೇಕೆಂದು ಅಖಿಲ ಕರ್ನಾಟಕ ವೃತ್ತಿ ಶಿಕ್ಷಣ ವಿಲೀನಗೊಂಡ ನೌಕರರ ಕ್ಷೇಮಾಭಿವೃದ್ಧಿ ಸಂಘವು ಒತ್ತಾಯಿಸಿದೆ.

ಈ ಸಂಬಂಧ ಸಂಘದ ಅಧ್ಯಕ್ಷ ಕೆ.ಎಸ್. ಸೋಮಶೇಖರ್ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಪದಾಧಿಕಾರಿಗಳು ಶನಿವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವ ರನ್ನು ಭೇಟಿ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವ ಪತ್ರವನ್ನು ಸಲ್ಲಿಸಿದರು.

ಸರ್ಕಾರವು 2011ರಲ್ಲಿ ಜಾರಿಗೆ ತಂದಿ ರುವ ರಾಜ್ಯ ವೃತ್ತಿ ಶಿಕ್ಷಣ ಕೋರ್ಸುಗಳ ಅರೆಕಾಲಿಕ ಸೇವಾ ವಿಲೀನಗೊಳಿಸುವ ವಿಧೇಯಕದಿಂದಾಗಿ ಸುಮಾರು 3,600ಕ್ಕೂ ಹೆಚ್ಚು ಕುಟುಂಬಗಳಿಗೆ ಜೀವನಾಧಾರ ವಾಗಿದೆ. ಆದರೆ, ಆ ಪ್ರಕಾರ ಸೇವಾ ವಿಲೀ ನತೆ ಹೊಂದಿದ ದಿನಾಂಕದಿಂದ ಮಾತ್ರ ಸೇವೆಯನ್ನು ಪರಿಗಣಿಸಲು ಅವಕಾಶ ವಿರುವ ಕಾರಣ, ಅದರ ಪೂರ್ವದಲ್ಲಿ ವೃತ್ತಿ ಶಿಕ್ಷಣ ಇಲಾಖೆ (ಜೆಓಸಿ)ಯಲ್ಲಿ ಸಂಭಾವನೆ ಆಧಾರದ ಮೇಲೆ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದವರು ಅವಕಾಶದಿಂದ ವಂಚಿತ ರಾಗಿದ್ದಾರೆ ಎಂದು ಮನವಿ ಪತ್ರದಲ್ಲಿ ನೌಕರರು ತಿಳಿಸಿದ್ದಾರೆ.

ಆದ್ದರಿಂದ ವಿಲೀನ ಪ್ರಕ್ರಿಯೆ ಆರಂಭ ಗೊಂಡ ಹಿಂದಿನ ಅವಧಿಯ ಸೇವೆಯನ್ನು ಪರಿಗಣಿಸುವ ಮೂಲಕ ಸಂಕಷ್ಟದಲ್ಲಿರುವ ಹಲವು ವೃತ್ತಿ ಶಿಕ್ಷಣ ನೌಕರರಿಗೆ ನಿಶ್ವಿತ ಪಿಂಚಣಿ ಹಾಗೂ ಇನ್ನಿತರ ಸೌಲಭ್ಯ ದೊರೆ ಯುವಂತೆ ಮಾಡಿ ಸಹಾಯ ನೀಡಬೇ ಕೆಂದು ಪದಾಧಿಕಾರಿಗಳು ಕೋರಿಕೊಂಡಿದ್ದಾರೆ.

ಸಂಘದ ಗೌರವಾಧ್ಯಕ್ಷ ಉದಯರವಿ ಪ್ರಕಾಶ, ಉಪಾಧ್ಯಕ್ಷರಾದ ಹೆಚ್.ಎಂ. ಗಿರೀಶ್, ವೆಂಕಟೇಶ್, ಸುದರ್ಶನ್, ಆರ್.ಎಸ್.ವಾಣಿ, ಕಾರ್ಯದರ್ಶಿ ಗಳಾದ ಸುರೇಶ, ಹೆಚ್.ಆರ್. ಪರಮೇಶ್ವರಯ್ಯ, ಗೋವಿಂದರಾಜು ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Translate »