ಮೈಸೂರು,ಏ.1(ಎಂಟಿವೈ)- ನೊವೆಲ್ ಕೊರೊನಾ ವೈರಸ್ ಭೀಕರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಎಸ್.ಎ. ರಾಮದಾಸ್ ನೇತೃತ್ವದಲ್ಲಿ `ಬ್ರಾಹ್ಮಣ ಪರಸ್ಪರ ಸಹಾಯ ವೇದಿಕೆ’ಯಿಂದ ಬುಧವಾರ ಮೃತ್ಯುಂ ಜಯ ಹೋಮ ನಡೆಸಲಾಯಿತು.
ಮೈಸೂರಿನ ರಾಮಾನುಜ ರಸ್ತೆಯಲ್ಲಿನ ಕಾಶಿ ವಿಶ್ವನಾಥ್ ದೇವಾಲಯ ಆವರಣ ದಲ್ಲಿ ಬುಧವಾರ ಬೆಳಿಗ್ಗೆ ಅರಮನೆ ಪುರೋ ಹಿತರಾದ ಕುಮಾರ್ ಹಾಗೂ ವಿದ್ವಾನ್ ಚಂದ್ರು ಪೌರೋಹಿತ್ಯದಲ್ಲಿ ಅಭಿಷೇಕ, ನವಗ್ರಹ ಶಾಂತಿ, ಮೃತ್ಯುಂಜಯ ಹೋಮ ನೆರವೇರಿತು. ಕೊರೊನಾ ನಾಶಕ್ಕೆ ದೈವಾನು ಗ್ರಹ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಲಾಯಿತು.
ಈ ವೇಳೆ ಪತ್ರಕರ್ತರ ಜತೆ ಮಾತ ನಾಡಿದ ಶಾಸಕ ಎಸ್.ಎ.ರಾಮದಾಸ್, ಕೊರೊನಾ ವಿಶ್ವಕ್ಕೆ ಮಹಾಮಾರಿಯಾಗಿದೆ. ಈ ಸಂದರ್ಭ ಎಲ್ಲರಿಗೂ ದೈವಕೃಪೆ ಅಗತ್ಯ ವಾಗಿದೆ. ಕೊರೊನಾ ಸೋಂಕು ಓಡಿಸಲು ವೈದ್ಯಕೀಯ ಕ್ಷೇತ್ರದ ಸಿಬ್ಬಂದಿ, ಪೊಲೀಸರು, ಮಾಧ್ಯಮ, ವಿವಿಧ ಇಲಾಖೆ ಸಿಬ್ಬಂದಿ ಸಮರ ಸೇನಾನಿಗಳಂತೆ ಹೋರಾಡುತ್ತಿ ದ್ದಾರೆ. ಇವರೆಲ್ಲರಿಗೂ ಆರೋಗ್ಯ, ಆಯುಷ್ಯ ಹೆಚ್ಚಲಿ ಎಂದು ದೇವರಲ್ಲಿ ಪ್ರಾರ್ಥಿಸಲು ಮೃತ್ಯುಂಜಯ ಹೋಮ ಮಾಡಲಾಗಿದೆ ಎಂದು ವಿವರಿಸಿದರು. ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮುಖಂಡರಾದ ಕೃಷ್ಣ, ದಿಲೀಪ್ ಮತ್ತಿತರಿದ್ದರು.
ಜೇನು ದಾಳಿ: ಮೃತ್ಯುಂಜಯ ಹೋಮದ ವೇಳೆ ಎದ್ದ ಹೊಗೆಯಿಂದ ಸಮೀಪದ ಅರಳಿ ಮರದಲ್ಲಿದ್ದ ಜೇನುಗೂಡಿನಿಂದ ಜೇನು ಹುಳುಗಳು ಮೇಲೆದ್ದು ಹಾರಾಡುತ್ತಾ ದೇವಾಲಯದ ಆವರಣದಲ್ಲಿದ್ದವರ ಮೇಲೆ ಮುಗಿಬಿದ್ದವು. ನಿಧಾನವಾಗಿ ಜೇನು ನೊಣಗಳು ದೇವಾಲಯದ ಆವರಣ ವನ್ನು ಸುತ್ತುವರಿದವು. ಐದಾರು ಮಂದಿಗೆ ಕಚ್ಚಿ ಗಾಯಗೊಳಿಸಿದವು.
ಬಳಿಕ ಹೊಗೆ ಹೆಚ್ಚಿದಂತೆ ಜೇನುನೊಣ ಗಳು ಹಾರಿಹೋದವು. ನಂತರ ಹೋಮ, ಪೂಜಾ ಕಾರ್ಯ ಮುಂದುವರೆಯಿತು.