ಕೆಟ್ಟಿರುವ ಮೈಸೂರು ಅರಮನೆಯ 18 ಸಾವಿರ ಬಲ್ಬ್ ಬದಲಾವಣೆ ಕಾರ್ಯ ಆರಂಭ
ಮೈಸೂರು

ಕೆಟ್ಟಿರುವ ಮೈಸೂರು ಅರಮನೆಯ 18 ಸಾವಿರ ಬಲ್ಬ್ ಬದಲಾವಣೆ ಕಾರ್ಯ ಆರಂಭ

September 15, 2019

ಮೈಸೂರು,ಸೆ.14(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಅಳವಡಿಸಿರುವ ವಿದ್ಯುತ್ ಬಲ್ಬ್‍ಗಳಲ್ಲಿ ಕೆಟ್ಟಿದ್ದ 18 ಸಾವಿರ ಬಲ್ಬ್‍ಗಳನ್ನು ಬದ ಲಿಸುವ ಕಾರ್ಯ ಭರದಿಂದ ಸಾಗಿದೆ.

ಅರಮನೆ ಸಿಬ್ಬಂದಿಗಳು ಒಳಗೊಂಡಂತೆ ಎಲೆಕ್ಟ್ರಿಷಿ ಯನ್‍ಗಳು ಬಲ್ಬ್ ಬದಲಿಸುವ ಕಾರ್ಯದಲ್ಲಿ ತೊಡ ಗಿದ್ದು, ಮುಂದಿನ 10 ದಿನದೊಳಗೆ ಕೆಟ್ಟಿರುವ ಎಲ್ಲಾ ಬಲ್ಬ್‍ಗಳನ್ನು ಬದಲಿಸಲಾಗುತ್ತದೆ.

ಅರಮನೆ ಮುಖ್ಯ ಕಟ್ಟಡ, ಪ್ರವೇಶ ದ್ವಾರ, ವಿವಿಧ ಗೋಡೆ ಮೇಲೆ ಅಳ ವಡಿಸಿರುವುದೂ ಸೇರಿದಂತೆ ಒಟ್ಟು ಒಂದು ಲಕ್ಷ ಬಲ್ಬ್‍ಗಳ ಬೆಳಕು ಝಗಮಗಿಸಿ ಅರಮನೆ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಆದರೆ ಪ್ರತಿ ದಿನ ಪಾರಿವಾಳಗಳು ಹಾರಾಡುವಾಗ, ಜೋರಾಗಿ ಗಾಳಿ ಬೀಸಿದಾಗ ಹಾಗೂ ದೀಪಾಲಂ ಕಾರ ವೇಳೆ ಮಳೆ ಬಂದಾಗ ಕೆಲವು ಬಲ್ಬ್‍ಗಳು ಸಿಡಿದು ಹೋಗುತ್ತವೆ. ಇದರಿಂದ ಪ್ರತಿ ವರ್ಷ ದಸರಾ ಉತ್ಸವ ವೇಳೆ 15ರಿಂದ 20 ಸಾವಿರ ಬಲ್ಬ್ ಗಳು ಹಾನಿಗೀಡಾಗುವುದು ಸಾಮಾನ್ಯವಾಗಿದೆ. ಈ ವರ್ಷ ಎಲ್ಲಾ ಸಾಲುಗಳನ್ನು ಸೂಕ್ಷ್ಮವಾಗಿ ಪರಿ ಶೀಲಿಸಿ 18 ಸಾವಿರ ಬಲ್ಬ್ ಕೆಟ್ಟಿರುವುದನ್ನು ಗುರುತಿಸಲಾ ಗಿತ್ತು. ಇದಕ್ಕಾಗಿ ದೆಹಲಿ ಹಾಗೂ ಹೈದರಾಬಾದ್‍ನಲ್ಲಿ ವಿಶೇಷವಾಗಿ ತಯಾರಾಗುವ 15 ವೋಲ್ಟ್ ಸಾಮ ಥ್ರ್ಯದ ತ್ರೆಡ್ (ಹೋಲ್ಡರ್‍ನಲ್ಲಿ ತಿರುಗಿಸುವ) ಇರುವ ಬಲ್ಬ್‍ಗಳನ್ನು ಆರ್ಡರ್ ಕೊಟ್ಟು ತರಿಸಲಾಗಿದೆ.

ಸಾಮಾನ್ಯ ಬಲ್ಬ್ ಬಳಕೆಯೇ ವಿಶೇಷ: ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಎಲ್‍ಇಡಿ ಬಲ್ಬ್‍ಗಳ ಬಳಕೆ ಹೆಚ್ಚಾ ಗುತ್ತಿದೆಯಾದರೂ ಪಾರಂಪರಿಕತೆ ಕಾಯ್ದುಕೊಳ್ಳಲು ಮೈಸೂರು ಅರಮನೆಗೆ ಇಂದಿಗೂ ಸಾಮಾನ್ಯ ಬಲ್ಬ್ ಗಳನ್ನೇ ಬಳಸಲಾಗುತ್ತಿದೆ. ಅರಮನೆಯಲ್ಲದೆ ದಸರಾ ವಸ್ತು ಪ್ರದರ್ಶನ ಮುಖ್ಯ ದ್ವಾರಕ್ಕೂ ಈ ಸಾಮಾನ್ಯ (ಇನ್‍ಕ್ಯಾಂಡಿಲೇಟ್)ಬಲ್ಬ್‍ಗಳನ್ನೇ ಅಳವಡಿಸ ಲಾಗುತ್ತಿದ್ದು, ಇವು 15 ವೋಲ್ಟ್ ಸಾಮಥ್ರ್ಯದ್ದಾಗಿದೆ. ಸ್ವರ್ಣ ಬಣ್ಣದಿಂದ ಬೆಳಗಲಿರುವ ಈ ಬಲ್ಬ್‍ಗಳು ಅರಮನೆ ಅಂದಕ್ಕೆ ಮತ್ತಷ್ಟು ಮೆರಗು ನೀಡಲಿವೆ.

ಸುಣ್ಣ-ಬಣ್ಣ: ಅರಮನೆಯ ದ್ವಾರ ಹಾಗೂ ಸುತ್ತ ಮುತ್ತಲಿನ ಗೋಡೆಗೆ ಬಣ್ಣ ಬಳಿಯುವ ಕಾರ್ಯವೂ ಭರದಿಂದ ಸಾಗಿದೆ. ಈಗಾಗಲೇ ಕರಿಕಲ್ಲು ತೊಟ್ಟಿ ಗೇಟ್‍ನಿಂದ ನಗರ ಬಸ್ ನಿಲ್ದಾಣದ ಹಿಂಭಾಗ ದವರೆಗೂ ಸುಣ್ಣ, ಬಣ್ಣ ಹೊಡೆಯಲಾಗಿದೆ. ಅರ ಮನೆ ಆವರಣದಲ್ಲಿರುವ ದೇವಾಲಯಗಳ ಗೋಡೆ ಗಳಿಗೂ ಬಣ್ಣ ಹೊಡೆಯುವ ಕಾರ್ಯ ಇನ್ನೆರಡು ದಿನದಲ್ಲಿ ಪೂರ್ಣಗೊಳ್ಳಲಿದೆ. ದಸರಾ ಆರಂಭಕ್ಕೆ 14 ದಿನ ಬಾಕಿಯಿದ್ದು, ಅಷ್ಟರೊಳಗೆ ಎಲ್ಲಾ ಸಿದ್ಧತಾ ಕಾರ್ಯ ಪೂರ್ಣಗೊಳಿಸುವುದಕ್ಕೆ ಸೂಚನೆ ನೀಡ ಲಾಗಿದೆ. ಇದರಿಂದಾಗಿ ಹೆಚ್ಚುವರಿಯಾಗಿ ಕೆಲಸದವ ರನ್ನು ನೇಮಿಸಿಕೊಂಡು ತ್ವರಿತಗತಿಯಲ್ಲಿ ಸಿದ್ಧತಾ ಕಾಮಗಾರಿ ನಡೆಸಲಾಗುತ್ತಿದೆ.

Translate »