ಡಿಕೆಶಿ ಆರೋಗ್ಯದಲ್ಲಿ ಮತ್ತೆ ಏರುಪೇರು: ಆಸ್ಪತ್ರೆಗೆ ದಾಖಲು
ಮೈಸೂರು

ಡಿಕೆಶಿ ಆರೋಗ್ಯದಲ್ಲಿ ಮತ್ತೆ ಏರುಪೇರು: ಆಸ್ಪತ್ರೆಗೆ ದಾಖಲು

September 15, 2019

ನವದೆಹಲಿ, ಸೆ.14-ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ವಶದಲ್ಲಿ ರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಏರು ಪೇರಾಗಿದ್ದು, ಅವ ರನ್ನು ದೆಹಲಿಯ ಆರ್‍ಎಂಎಲ್ ಆಸ್ಪ ತ್ರೆಗೆ ದಾಖಲಿಸಲಾಗಿದೆ. ಶಿವಕುಮಾರ್ ಅವರ ಪತ್ನಿ ಉಷಾ, ಪುತ್ರಿಯರಾದ ಐಶ್ವರ್ಯಾ ಮತ್ತು ಆಭರಣ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಶಿವಕುಮಾರ್ ಅವರ ಜೊತೆ ಕುಟುಂಬಸ್ಥರು 15 ನಿಮಿಷ ಮಾತುಕತೆ ನಡೆಸಿದರು. ಹೆಚ್ಚಿನ ರಕ್ತ ದೊತ್ತಡ ಮತ್ತು ಜ್ವರದಿಂದ ಬಳಲುತ್ತಿ ರುವ ಶಿವಕುಮಾರ್ ಅವರಿಗೆ ಸಾಮಾನ್ಯ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Translate »