ಪಟ್ಟದ ಹಸು ಸೇರಿ 2 ಹಸುಗಳಿಂದ ಕರುಗಳಿಗೆ ಜನ್ಮ
ಮೈಸೂರು

ಪಟ್ಟದ ಹಸು ಸೇರಿ 2 ಹಸುಗಳಿಂದ ಕರುಗಳಿಗೆ ಜನ್ಮ

October 23, 2018

ಮೈಸೂರು:  ಜಂಬೂ ಸವಾರಿಯ ದಿನ ಮತ್ತು ಹಿಂದಿನ ದಿನ ಸಂಭವಿಸಿದ ಇಬ್ಬರ ಸಾವಿನಿಂದ ದುಃಖದ ಮಡುವಿನಲ್ಲಿದ್ದ ರಾಜಮನೆತನದವರಿಗೆ ವಿಜಯದಶಮಿ ದಿನ ಮಧ್ಯಾಹ್ನ ಪಟ್ಟದ ಹಸು ಸೇರಿದಂತೆ ಅರಮನೆಯ ಎರಡು ಹಸುಗಳು ಕರುಗಳಿಗೆ ಜನ್ಮ ನೀಡಿ, ಕೊಂಚ ನೆಮ್ಮದಿ ತಂದಿವೆ.

ಅ.19ರಂದು ಮಧ್ಯಾಹ್ನ 12 ಗಂಟೆಗೆ ಪಟ್ಟದ ಹಸು, ಹೋರಿ ಕರುವಿಗೆ ಜನ್ಮ ನೀಡಿ ದರೆ, ಅರಮನೆ ಗೋಶಾಲೆಯ ಮತ್ತೊಂದು ಹಸು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಹಿರಿ ಯರಿಬ್ಬರ ಸಾವಿನಿಂದಾಗಿ ಆತಂಕಗೊಂ ಡಿದ್ದ ರಾಜಮನೆತನಕ್ಕೆ, ಇದೀಗ ಖಾಸಗಿ ದರ್ಬಾರ್‍ನ ಪೂಜಾ ಕಾರ್ಯದಲ್ಲಿ ಭಾಗಿ ಯಾಗುತ್ತಿದ್ದ ಪಟ್ಟದ ಹಸು ಕರುವಿಗೆ ಜನ್ಮ ನೀಡಿರುವುದು ಸಮಾಧಾನ ತಂದಿದೆ.

ಜಂಬೂ ಸವಾರಿ ಮೆರವಣಿಗೆಯ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುತ್ತಿದ್ದಂತೆಯೇ ಗೋಶಾಲೆಯಲ್ಲಿದ್ದ ಮತ್ತೊಂದು ಹಸುವೂ ಹೆಣ್ಣು ಕರುವಿಗೆ ಜನ್ಮ ನೀಡಿದೆ. ಇದು ಶುಭ ಸಂಕೇತ ಎಂದು ರಾಜಪುರೋಹಿತರು ಪ್ರಮೋದಾದೇವಿ ಒಡೆಯರ್ ಅವರಿಗೆ ತಿಳಿಸಿದ್ದಾರೆ.

ಒಂದೆಡೆ ಇಬ್ಬರ ಸಾವಿನ ದುಃಖದಲ್ಲಿದ್ದ ರಾಜಮನೆತನಕ್ಕೆ ಈ ಎರಡು ಕರುಗಳ ಜನನ ಅಲ್ಪಮಟ್ಟಿಗೆ ಸಮಾಧಾನವನ್ನುಂಟು ಮಾಡಿದೆ. ಕರುಗಳ ಜನನದ ಸಮಯ ಸೇರಿದಂತೆ ವಿವಿಧ ಆಯಾಮಗಳಲ್ಲಿ ಜ್ಯೋತಿಷಿಗಳ ಮೊರೆ ಹೋಗಿ ತಮ್ಮಲ್ಲಿ ಮೂಡಿದ್ದ ಅನುಮಾನ ವನ್ನು ಬಗೆಹರಿಸಿಕೊಂಡಿದ್ದಾರೆ. ಇದ ರಿಂದ ಸದ್ಯ ಅರಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗಿದೆ.

Translate »