ಮೈಸೂರು ಜಿಲ್ಲೆಯ 3 ಕೆರೆಗಳ ಪುನಶ್ಚೇತನ
ಮೈಸೂರು

ಮೈಸೂರು ಜಿಲ್ಲೆಯ 3 ಕೆರೆಗಳ ಪುನಶ್ಚೇತನ

March 30, 2019

ಮೈಸೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯಾದ್ಯಂತ `ನಮ್ಮೂರು ನಮ್ಮ ಕೆರೆ’ ಯೋಜನೆಯಡಿ 160 ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಮೂರು ಕೆರೆಗಳನ್ನು ಪುನಶ್ಚೇ ತನಗೊಳಿಸಲಾಗುವುದು ಎಂದು ಧರ್ಮ ಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಹಿನಕಲ್ ದೇವರ ಕೆರೆ ಕಾಮಗಾರಿಯನ್ನು ಶುಕ್ರವಾರ ಪರಿ ಶೀಲಿಸಿದ ಅವರು, ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಜನರ ಸಹಭಾಗಿತ್ವದಲ್ಲೇ ಕಾಮಗಾರಿ ನಡೆಸಲಾಗುತ್ತದೆ. ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಸಂಘದಿಂದ ಹೂಳೆತ್ತಲು ಯಂತ್ರೋಪಕರಣಗಳನ್ನು ಒದಗಿಸಲಾಗು ವುದು. ರೈತರು ಆ ಹೂಳನ್ನು ತಮ್ಮ ಜಮೀನುಗಳಿಗೆ ತಮ್ಮ ಖರ್ಚಿನಲ್ಲೇ ಸಾಗಿಸುತ್ತಾರೆ ಎಂದು ತಿಳಿಸಿದರು.

ರಾಜ್ಯದ ಶೇ 80ರಷ್ಟು ಕೆರೆಗಳು ಹೂಳು ತುಂಬಿ ಹಾಳಾಗಿವೆ. ಅಂತರ್ಜಲ ಮಟ್ಟ ಹೆಚ್ಚಾಗಬೇಕಾದರೆ ಕೆರೆಗಳಲ್ಲಿ ನೀರು ನಿಲ್ಲಬೇಕು. ಆದರೆ ಹೂಳು ಪ್ರಮಾಣ ಹೆಚ್ಚಾಗಿ ನೀರು ಸಂಗ್ರಹವಾಗದೆ ಅಂತರ್ಜಲವೂ ಕುಸಿಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶ್ರೀಹರಿ, ಜಿಲ್ಲಾ ನಿರ್ದೇಶಕ ವಿಜಯಕುಮಾರ ನಾಗನಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »