ಶ್ರಮ, ಪ್ರಯತ್ನದಿಂದ ಸ್ವಾವಲಂಬನೆ: ಡಿ.ವೀರೇಂದ್ರ ಹೆಗ್ಗಡೆ ಅಭಿಮತ
ಮೈಸೂರು

ಶ್ರಮ, ಪ್ರಯತ್ನದಿಂದ ಸ್ವಾವಲಂಬನೆ: ಡಿ.ವೀರೇಂದ್ರ ಹೆಗ್ಗಡೆ ಅಭಿಮತ

March 30, 2019

ಮೈಸೂರು: ಪ್ರತಿ ಪ್ರಜೆಯೂ ಶ್ರಮ ಜೀವನ ಮತ್ತು ಪ್ರಯತ್ನದಿಂದ ಸ್ವಾವಲಂಬಿ ಗಳಾಗಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕರೆ ನೀಡಿದರು. ಮೈಸೂ ರಿನ ಇಲವಾಲ ಹೋಬಳಿ ಚಿಕ್ಕನಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಆನಂ ದೂರು ಗ್ರಾಪಂ ಸಹಯೋಗದಲ್ಲಿ ನಿರ್ಮಾಣಗೊಂಡಿ ರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು. ಮಾನವ ದುಡಿಮೆಗೆ ಯಾವುದೇ ಧರ್ಮವನ್ನು ಅವಲಂಬಿಸುವುದಿಲ್ಲ. ದೇವರಲ್ಲಿ ಭಕ್ತಿ ಇರಲಿ, ಆದರೆ ಶ್ರಮದ ದುಡಿಮೆಗೆ ಬದಲಾಗಿ ದೇವರ ಮೇಲೆ ಭಾರ ಹಾಕಿ ಕುಳಿತುಕೊಳ್ಳುವುದರಿಂದ ಪ್ರಯೋಜನ ವಿಲ್ಲ. ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಮಾಡುವ ಕಾರ್ಯದಲ್ಲಿ ಶ್ರಧ್ಧೆ, ಪ್ರಾಮಾಣಿಕತೆ, ಪ್ರಯತ್ನ ಗಳಿಂದ ಸಾಧನೆ ಸಾಧ್ಯ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾ ಜದ ಒಳಿತನ್ನು ಬಯಸುವ ಎಲ್ಲರ ಜೊತೆ ಸೇರಿ ಅಭಿ ವೃದ್ಧಿಯತ್ತ ಹೆಜ್ಜೆ ಇಡುತ್ತಿರುವುದು ಯೋಜನೆಯ ವೈಶಿಷ್ಟ್ಯ ವಾಗಿದೆ ಎಂದರು. ರಾಜ್ಯದಲ್ಲಿ ಅತೀ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಇರುವ ಜಿಲ್ಲೆಗಳಲ್ಲಿ ಒಟ್ಟು 18 ಜಿಲ್ಲೆಗಳ 56 ತಾಲೂಕುಗಳಲ್ಲಿ 284 ಶುದ್ಧ ಕುಡಿಯುವ ನೀರಿನ ಘಟಕ ಗಳನ್ನು ತೆರೆಯಲಾಗಿದೆ. ಇದರಿಂದಾಗಿ 67,754 ಕುಟುಂಬ ಗಳು ನಿತ್ಯ 13,55,800 ಲೀಟರ್ ಶುದ್ಧ ಕುಡಿಯುವ ನೀರನ್ನು ಬಳಕೆ ಮಾಡುವ ಮೂಲಕ ಆರೋಗ್ಯ ಕಾಪಾಡಿ ಕೊಳ್ಳುತ್ತಿದ್ದಾರೆ ಎಂದರು. ಆನಂದೂರು ಗ್ರಾಪಂ ಅಧ್ಯಕ್ಷ ರಾಮೇಗೌಡ, ಸದಸ್ಯರಾದ ವಿಜಯಕುಮಾರ್, ಅಂಬ ರೀಶ್, ಮುಖಂಡರಾದ ಕೃಷ್ಣೇಗೌಡ, ತಮ್ಮಣ್ಣೇ ಗೌಡ, ಶಿವೇಗೌಡ, ಸಿದ್ದೇಗೌಡ, ಪಾಪಣ್ಣಗೌಡ, ಯೋಜನಾಧಿ ಕಾರಿ ಕೆ.ಆನಂದ್ ಇನ್ನಿತರರು ಉಪಸ್ಥಿತರಿದ್ದರು.

Translate »