ಚುನಾವಣಾ ಆಯೋಗದಿಂದ ಮುಕ್ತ, ನ್ಯಾಯಸಮ್ಮತ ಚುನಾವಣೆ
ಮೈಸೂರು

ಚುನಾವಣಾ ಆಯೋಗದಿಂದ ಮುಕ್ತ, ನ್ಯಾಯಸಮ್ಮತ ಚುನಾವಣೆ

March 30, 2019

ಮೈಸೂರು: ಚುನಾ ವಣಾ ಆಯೋಗ ಇದುವರೆಗೆ ನಡೆದ ವಿಧಾನಸಭೆ, ಲೋಕಸಭೆ ಚುನಾ ವಣೆಗಳನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಅಭಿಪ್ರಾಯಪಟ್ಟರು.

ಮೈಸೂರು ವಿ.ವಿ ಕಾನೂನು ಶಾಲೆ ವತಿ ಯಿಂದ ಮಾನಸಗಂಗೋತ್ರಿ ಕಾನೂನು ಶಾಲೆಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳ ಲಾಗಿದ್ದ ‘ಚುನಾವಣೆ ಸುಧಾರಣೆಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದ ಬಹು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾದ ಭಾರತದ ಚುನಾ ವಣೆ ಜವಾಬ್ದಾರಿ ವಹಿಸಿರುವ ಆಯೋ ಗವು, ಈ ಭಾರಿಯ ಚುನಾವಣೆಯಲ್ಲೂ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಮಾಧ್ಯಮ ಹಾಗೂ ರಾಜಕೀಯ ಪಕ್ಷ ಗಳಿಗೆ ಹಲವು ಸೂಚನೆಗಳನ್ನು ನೀಡಿದೆ ಎಂದು ತಿಳಿಸಿದರು.

ಚುನಾವಣೆ ಆಯೋಗದ ವಿಶ್ವಾಸಾ ರ್ಹತೆ, ಮೌಲ್ಯಗಳ ಪ್ರತಿಪಾದನೆ ಸೇರಿ ದಂತೆ ಹಲವು ವಿಚಾರಗಳ ಕುರಿತು ಚರ್ಚೆಗಳಾಗಿವೆ. ನ್ಯಾಯಾಂಗವೂ ಕೂಡ ಚುನಾವಣೆ ಸುಧಾರಣೆ ತರಲು ಸಾಕಷ್ಟು ಶ್ರಮಿಸಿದೆ ಎಂದು ಹೇಳಿದರು.

ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಅಭ್ಯರ್ಥಿಗೆ ಎರಡು ವರ್ಷ ಜೈಲು ಶಿಕ್ಷೆ ಯನ್ನು ಸುಪ್ರೀಂಕೋರ್ಟ್ ನೀಡಿದೆ. ‘ನೋಟಾ’ ಅಳವಡಿಸಬೇಕೆಂದು ಸೂಚಿ ಸಿದೆ. ಜಾತಿ, ಧರ್ಮ, ವರ್ಣ, ಸಮು ದಾಯದ ಹೆಸರಲ್ಲಿ ಮತ ಕೇಳದಿರುವಂತೆ ಎಚ್ಚರಿಕೆ ನೀಡಿದೆ ಎಂದು ನೆನಪಿಸಿದರು.

ಕುಲಸಚಿವ ಡಾ.ಲಿಂಗರಾಜ ಗಾಂಧಿ ಮಾತನಾಡಿ, 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಭಾರತದಲ್ಲಿ ಹೆಚ್ಚಿದ್ದಾರೆ. ಹೀಗಾಗಿ ಯುವಶಕ್ತಿಯ ಜವಾಬ್ದಾರಿ ಬಹಳಷ್ಟಿದೆ. ಯಾವುದೇ ಪ್ರಜಾಪ್ರಭುತ್ವದ ಯಶಸ್ಸು ಪ್ರಜೆಗಳ ಪಾಲ್ಗೊಳ್ಳುವಿಕೆಯ ಲ್ಲಿದ್ದು, ಪ್ರತಿಯೊಬ್ಬರೂ ಮತದಾನ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು. ಪತ್ರಕರ್ತ ಕೆ.ಶಿವಕುಮಾರ್ ಮಾತ ನಾಡಿ, ‘ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ಚುನಾ ವಣೆ ಆಯೋಗಕ್ಕೆ ಬಹು ದೊಡ್ಡ ತಲೆ ನೋವಾಗಿದೆ. ಇದರ ಜತೆಗೆ ರಾಜಕೀಯ ಪಕ್ಷಗಳ ಪರ ಹಲವು ಮಾಧ್ಯಮಗಳು ಪೇಯ್ಡ್ ನ್ಯೂಸ್‍ಗಳನ್ನು ಬಿತ್ತುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ನಮ್ಮ ಪ್ರಜಾಪ್ರಭುತ್ವಕ್ಕೆ 70 ವರ್ಷಗಳಾ ದರೂ ಎಲ್ಲ ಬುಡಕಟ್ಟು ಸಮುದಾಯ ಗಳಿಗೆ ಮತದಾನ ಗುರುತಿನ ಚೀಟಿ ಕೊಡು ವಲ್ಲಿ ನಾವು ವಿಫಲರಾಗಿದ್ದೇವೆ. ಯಾವುದೇ ವಿದ್ಯಾರ್ಹತೆ ಇಲ್ಲದವರು ಚುನಾವಣೆ ಸ್ಪರ್ಧಿ ಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕಾನೂನು ಶಾಲೆ ನಿರ್ದೇಶಕ ಪ್ರೊ. ಸಿ.ಬಸವ ರಾಜು, ಕಾನೂನು ವಿಭಾಗದ ಪ್ರಾಧ್ಯಾಪಕ ಡಾ.ಎಂ.ಎಸ್.ಬೆಂಜಮಿನ್ ಇದ್ದರು.

Translate »