ಕುಟುಂಬ ವ್ಯವಸ್ಥೆ ಪಿತೃ ಪ್ರಧಾನವಾದ ನಂತರ  ಮಹಿಳೆಯರ ಮೇಲೆ ವ್ಯಾಪಕ ದಬ್ಬಾಳಿಕೆ
ಮೈಸೂರು

ಕುಟುಂಬ ವ್ಯವಸ್ಥೆ ಪಿತೃ ಪ್ರಧಾನವಾದ ನಂತರ ಮಹಿಳೆಯರ ಮೇಲೆ ವ್ಯಾಪಕ ದಬ್ಬಾಳಿಕೆ

March 30, 2019

ಮೈಸೂರು: ಕುಟುಂಬ ವ್ಯವಸ್ಥೆ ಪಿತೃಪ್ರಧಾನವಾದ ನಂತರ ಮಹಿಳೆಯರ ಮೇಲೆ ನಿಯಂ ತ್ರಣ, ದಬ್ಬಾಳಿಕೆ ವ್ಯಾಪಕವಾಯಿತು ಎಂದು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪದ್ಮಾಶೇಖರ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ವಿಭಾಗದ ವತಿ ಯಿಂದ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಇಂದು ಏರ್ಪಡಿಸಿದ್ದ ಲಿಂಗ ಸೂಕ್ಷ್ಮತಾ ತರಬೇತಿ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡುತ್ತಿದ್ದ ಅವರು, ಈ ಹಿಂದೆ ನಮ್ಮಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಇತ್ತು. ನಿರ್ಣಯಗಳನ್ನು ಮಹಿಳೆಯರು ಕೈಗೊಳ್ಳುತ್ತಿದ್ದರು. ಆದರೆ ಪಿತೃಪ್ರಧಾನ ಕುಟುಂಬ ವ್ಯವಸ್ಥೆ ಬಂದ ನಂತರ ಮಹಿಳೆಯರ ಮೇಲೆ ನಿಯಂತ್ರಣ, ದಬ್ಬಾ ಳಿಕೆ ಆರಂಭವಾಯಿತು ಎಂದರು.

ಕುಟುಂಬದಲ್ಲಿ ಮಹಿಳೆ ಕೇಂದ್ರ ಬಿಂದು ವಾದರೂ ಆಕೆ ಯಾವುದೇ ತೀರ್ಮಾನ ತೆಗೆದುಕೊಳ್ಳುವಂತಿಲ್ಲ. ಪುರುಷರು ಸದಾ ತಮಗೆ ಪೂರಕವಾದ ವಾತಾವರಣವನ್ನು ಮೊದಲಿನಿಂದಲೂ ನಿರ್ಮಾಣ ಮಾಡುತ್ತಾ ಬಂದಿದ್ದಾರೆ. ಅದನ್ನು ಆಧುನಿಕ ಮಹಿಳೆ ಯರು ದಾಟಿ ಬರಲು ಪ್ರಯತ್ನಿಸಬೇ ಕೆಂದೂ ಸಲಹೆ ನೀಡಿದರು.

ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಯನ್ನು ಸಾಮಾಜಿಕ ಸಮಸ್ಯೆ ಎಂದು ಸಮಾಜ ಪರಿಗಣಿಸದಿದ್ದರೆ ಮಹಿಳೆಯರ ಬದುಕಲ್ಲಿ ಬದಲಾವಣೆ ಕಾಣಲು ಸಾಧ್ಯ ವಿಲ್ಲ. ಮನೆಯಲ್ಲಿ ಮಹಿಳೆ ಮಾಡುವ ಕೆಲಸವನ್ನು ಪುರುಷರು ಮಾಡಿದರೆ ಅಪಮಾನ ಎಂಬ ಭಾವನೆ ಜನರಲ್ಲಿರು ವುದರಿಂದ ಹೆಣ್ಣು ಮನೆಯಲ್ಲಿ ಉತ್ಸವ ಮೂರ್ತಿಯಂತಿರುವಂತಾಗಿದೆ ಎಂದು ಪ್ರೊ.ಪದ್ಮಾಶೇಖರ್ ನುಡಿದರು.

ದೌರ್ಜನ್ಯಗಳಿಂದ ಮುಕ್ತಿ ಹೊಂದ ಬೇಕಾದರೆ ಮಹಿಳೆ ಆತ್ಮಸ್ಥೈರ್ಯ ಬೆಳೆಸಿ ಕೊಂಡು ಕೀಳರಿಮೆಯನ್ನು ಕಿತ್ತೊಗೆಯ ಬೇಕು ಆಗ ಮಾತ್ರ ಮಹಿಳೆ ಸ್ವತಂತ್ರ್ಯಳಾ ಗಲು ಸಾಧ್ಯ ಎಂದೂ ಅವರು ಅಭಿ ಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅವರು, ಪುರುಷ ಮೇಲು, ಮಹಿಳೆ ಕೀಳು ಎಂಬ ಮನೋ ಭಾವ ತೊಡೆದು ಹಾಕಿದಾಗ ಮಾತ್ರ ಸಮಾಜದಲ್ಲಿ ಲಿಂಗ ಸಮಾನತೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಪ್ರೊ.ಲಿಂಗರಾಜಗಾಂಧಿ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಪ್ರೀತಿ ಶ್ರೀಮಂದರ್‍ಕುಮಾರ್, ಪ್ರಾಧ್ಯಾಪಕಿ ಡಾ.ಚೆರ್ರಿ ಆರೋಕ್ಯ ಮೇರಿ, ಡಾ.ಜಯ ಲಕ್ಷ್ಮಿ ಸೀತಾಮರ, ಡಾ.ಸಿ.ಪಿ.ಪರಿಮಳಾ ಡಾ.ಟಿ.ಎನ್.ಅನಿತಾ ಅವರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.

ನಂತರ ನಡೆದ ಗೋಷ್ಠಿಯಲ್ಲಿ ಬೆಂಗ ಳೂರಿನ ಜೆಂಡರ್ ಸಂಬಂಧಿ ತರಬೇತು ದಾರರ ಗುರುರಾಜ್, ವಕೀಲೆ ಸುಮಿತ್ರಾ ಆಚಾರ್ಯ ಹಾಗೂ ಆಡಳಿತ ತರಬೇತಿ ಸಂಸ್ಥೆ ಸಲಹೆಗಾರರಾದ ಡಾ.ಕ್ರಿಸ್ಟೀನಾ ಕಾಂತರಾಜು ಅವರು ವಿಚಾರ ಮಂಡನೆ ಮಾಡಿದರು. ಇದೇ ವೇಳೆ ಮಹಿಳಾ ಅಧ್ಯ ಯನ ಕೇಂದ್ರ ಹೊರ ತಂದಿರುವ ಜಾನ ಪದ ಮಹಿಳಾ ಯಾನ ಪುಸ್ತಕವನ್ನು ಪ್ರೊ. ಪದ್ಮಾಶೇಖರ್ ಬಿಡುಗಡೆ ಮಾಡಿದರು.

Translate »