ಮೈಸೂರಲ್ಲಿ ನಿತ್ಯ ರಂಗ ಚಟುವಟಿಕೆ
ಮೈಸೂರು

ಮೈಸೂರಲ್ಲಿ ನಿತ್ಯ ರಂಗ ಚಟುವಟಿಕೆ

March 30, 2019

ಮೈಸೂರು: ಬೆಂಗ ಳೂರಿಗಿಂತಲೂ ಮೈಸೂರಿನಲ್ಲಿಯೇ ಹೆಚ್ಚು ರಂಗಭೂಮಿ ಚಟುವಟಿಕೆಗಳು ನಡೆ ಯುತ್ತಿವೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿ ಕಾರ್ಜುನಸ್ವಾಮಿ ಅಭಿವ್ಯಕ್ತಪಡಿಸಿದರು.

ರಂಗಾಯಣದ ವನರಂಗದಲ್ಲಿ ರಂಗ ಸಂಗಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸ ಲಾಗಿದ್ದ ‘ರಂಗಸಂಗಮೋತ್ಸವ’ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕøತಿಗೆ ಹೆಸರಾಗಿರುವ ಮೈಸೂರಿನಲ್ಲಿ ನಾಟಕ ಪ್ರದರ್ಶನಗಳು ನಿರಂತರ ನಡೆಯುತ್ತಿವೆ. ಅದಕ್ಕೆ ಪ್ರತಿ ಯಾಗಿ ಇಲ್ಲಿನ ಕಲಾಭಿಮಾನಿಗಳು ತಮ್ಮನ್ನು ಒಗ್ಗೂಡಿಸಿಕೊಂಡಿದ್ದಾರೆ ಎಂದರು.

ರಂಗಕಲೆ ಉಳಿಯಬೇಕಾದರೆ ಪೋಷ ಕರು ಅಗತ್ಯವಾಗಿದ್ದು, ಮೈಸೂರಿನಲ್ಲಿ ಸರ್ಕಾರಿ ಸಂಸ್ಥೆಗಳೊಂದಿಗೆ ಇತರೆ ಸಾಂಸ್ಕøತಿಕ ಸಂಸ್ಥೆ ಗಳು ಕೈ ಜೋಡಿಸಿವೆ. ರಂಗಭೂಮಿ ಮತ್ತಷ್ಟು ಬೆಳೆಯಬೇಕಾದರೆ ಪೋಷಕರ ಅಗತ್ಯ ಮತ್ತಷ್ಟು ಹೆಚ್ಚಾಗಬೇಕಾಗಿದೆ ಎಂದರು.
ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಮಾತನಾಡಿ, ಇಂದು ಮೈಸೂರಿ ನಲ್ಲಿ ನಾಟಕಗಳ ಯುಗವೇ ಪ್ರಾರಂಭ ವಾಗಿದೆ. ನಗರದಲ್ಲಿರುವ ರಂಗಮಂದಿರ ಗಳಿಗೆ ಬಿಡುವೆ ಇಲ್ಲದಂತಾಗಿದೆ. ಇದಕ್ಕೆ ಕಾರಣ ಸರ್ಕಾರದ ಸಹಾಯ ಹಾಗೂ ಇತರೆ ಸಂಸ್ಥೆಗಳ ಕೊಡುಗೆ. ರಂಗಸಂಗಮ ಸಂಸ್ಥೆ ನಿರಂತರವಾಗಿ ರಂಗಭೂಮಿಗೆ ತೊಡಗಿಸಿಕೊಂಡಿದ್ದು, ಹೊಸ ಪ್ರತಿಭೆ ಗಳನ್ನು ಗುರುತಿಸುತ್ತಿದೆ ಎಂದರು.

ಬಳಿಕ ನಾದರಂಗ ತಂಡದ ಕಲಾವಿ ದರು ರಂಗಗೀತೆಗಳು ಹಾಗೂ ಐತಿಹಾಸಿಕ ‘ಶಿವಾಜಿ’ ನಾಟಕ ಪ್ರದರ್ಶನ ನೀಡಿದರು. ಮೇಲುಕೋಟೆ ವೆಂಗೀ ಮಠದ ಇಳೈ ಆಳ್ವಾರ್ ಸ್ವಾಮೀಜಿ, ರಂಗನಿರ್ದೇಶಕ ಮೋಹನ್‍ರಾಜ್‍ಶೆಟ್ಟಿ, ಮೈಸೂರು ಜಯರಾಂ, ನಾಗರತ್ನ, ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Translate »